Fitness Tips: ಒಂದೇ ತಿಂಗಳಲ್ಲಿ ಫಿಟ್ ಮತ್ತು ಸ್ಲಿಮ್ ಆಗಲು ಬಯಸುವವರಿಗೆ ಇಲ್ಲಿವೆ ಕೆಲ ಸರಳ ಟಿಪ್ಸ್​​

Edited By:

Updated on: Jan 06, 2023 | 10:20 PM

ಹೊಸ ವರ್ಷ ಪ್ರಾರಂಭವಾಗಿ ಐದು ದಿನಗಳು ಕಳೆದಿವೆ. ಈ ವರ್ಷ ಫಿಟ್‌ನೆಸ್‌ನತ್ತ ಗಮನಹರಿಸಲು ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಈ ಚಿಕ್ಕ ಸಲಹೆಯನ್ನು ಪಾಲಿಸಿ.

1 / 5
ಪ್ರತಿದಿನ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ತೂಕವನ್ನು ಆದಷ್ಟು ಬೇಗ ಕಡಿಮೆ ಮಾಡಲು ಸಹಾಯ
ಮಾಡುತ್ತದೆ. ಈ ವಿಧಾನವನ್ನು ನಿಯಮಿತವಾಗಿ ಅನುಸರಿಸಬಹುದು. ಜೊತೆಗೆ ನಿಂಬೆ ರಸ
ಅಥವಾ ಜೇನುತುಪ್ಪದೊಂದಿಗೆ ಬೆಚ್ಚಗಿನ ನೀರಿನ್ನು ಕುಡಿಯಬಹುದು.

ಪ್ರತಿದಿನ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ತೂಕವನ್ನು ಆದಷ್ಟು ಬೇಗ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ವಿಧಾನವನ್ನು ನಿಯಮಿತವಾಗಿ ಅನುಸರಿಸಬಹುದು. ಜೊತೆಗೆ ನಿಂಬೆ ರಸ ಅಥವಾ ಜೇನುತುಪ್ಪದೊಂದಿಗೆ ಬೆಚ್ಚಗಿನ ನೀರಿನ್ನು ಕುಡಿಯಬಹುದು.

2 / 5

ತೂಕ ಹೆಚ್ಚಾಗಿದೆ ಎಂದು ಸುಮ್ಮನೆ ಕುಳಿತುಕೊಂಡರೆ ಆಗದು. ಪ್ರತಿದಿನ ಕನಿಷ್ಠ ಅರ್ಧ ಗಂಟೆಯಾದರೂ ವಾಕಿಂಗ್​ ಅಥವಾ ಜಾಗಿಂಗ್ ಮಾಡಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿನ ಕ್ಯಾಲೊರಿಗಳು ಸುಟ್ಟು ಹೋಗಿ, ತೂಕ ಕಡಿಮೆಯಾಗುವುದು ಖಚಿತ.

3 / 5

ಫಿಟ್‌ನೆಸ್‌ಗೆ ಆರೋಗ್ಯಕರ ಆಹಾರ ಅತ್ಯಗತ್ಯ. ನೀವು ಎಣ್ಣೆಯುಕ್ತ, ಕರಿದ, ಮಸಾಲೆಯುಕ್ತ ಅಥವಾ ಜಂಕ್ ಫುಡ್‌ಗಳನ್ನು ಪ್ರತಿದಿನ ತಿನ್ನುವ ಅಭ್ಯಾಸವನ್ನು ಹೊಂದಿದ್ದರೆ, ಇಂದೇ ಅವುಗಳನ್ನು ತಿನ್ನುವುದನ್ನು ನಿಲ್ಲಿಸಿ. ಕೊಬ್ಬಿನ ಆಹಾರಗಳನ್ನು ತಪ್ಪಿಸುವುದರಿಂದ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಬಹುದು.

4 / 5

ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಬಾರದು. ತೂಕ ಇಳಿಸಿಕೊಳ್ಳಲು ಬಯಸುವವರು ಸಿಹಿತಿಂಡಿಗಳಿಂದ ದೂರವಿರಬೇಕು ಎನ್ನುತ್ತಾರೆ ತಜ್ಞರು.

5 / 5

ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗುವುದು ಮುಖ್ಯವಲ್ಲ. ದೈಹಿಕ ವ್ಯಾಯಾಮವನ್ನು ಎಲ್ಲಿ ಬೇಕಾದರೂ ಮಾಡಬಹುದು. ಮನೆಯಲ್ಲಿ ಪ್ರತಿದಿನ 30-40 ನಿಮಿಷಗಳ ದೈಹಿಕ ವ್ಯಾಯಾಮವು ನಿಮ್ಮ ತೂಕವನ್ನು ಸುಲಭವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

Published On - 10:20 pm, Fri, 6 January 23

Loading...
Unable to load recommendations.
Follow Us