PAK vs NZ: 8 ವರ್ಷಗಳ ಬಳಿಕ ಟೆಸ್ಟ್ ಶತಕ ಸಿಡಿಸಿದ ಸರ್ಫರಾಜ್! ಮುಜುಗರದ ಸೋಲಿನಿಂದ ಪಾರಾದ ಪಾಕ್

PAK vs NZ: ಕರಾಚಿಯಲ್ಲಿ ನಡೆದ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ ಉಭಯ ದೇಶಗಳ ನಡುವಣ ಟೆಸ್ಟ್ ಸರಣಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.

TV9 Web
| Updated By: ಪೃಥ್ವಿಶಂಕರ

Updated on:Jan 06, 2023 | 6:35 PM

ಕರಾಚಿಯಲ್ಲಿ ನಡೆದ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ ಉಭಯ ದೇಶಗಳ ನಡುವಣ ಟೆಸ್ಟ್ ಸರಣಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.

1 / 5
ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಸರ್ಫರಾಜ್ ಅಹ್ಮದ್ ಸುಮಾರು ನಾಲ್ಕು ವರ್ಷಗಳ ನಂತರ ತಂಡಕ್ಕೆ ಮರಳಿ, ಬರೋಬ್ಬರಿ 8 ವರ್ಷಗಳ ಕಾಯುವಿಕೆಯ ನಂತರ ಕರಾಚಿ ಟೆಸ್ಟ್‌ನ ಕೊನೆಯ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಮತ್ತು ಸ್ಮರಣೀಯ ಶತಕ ಬಾರಿಸಿದರು.

2 / 5
2019 ರ ನಂತರ ಮೊದಲ ಬಾರಿಗೆ ಪಾಕಿಸ್ತಾನದ ಟೆಸ್ಟ್ ತಂಡಕ್ಕೆ ವಾಪಸಾದ ಸರ್ಫರಾಜ್, ಕರಾಚಿ ಟೆಸ್ಟ್‌ನ ಕೊನೆಯ ದಿನವಾದ ಜನವರಿ 6 ಶುಕ್ರವಾರದಂದು 135 ಎಸೆತಗಳಲ್ಲಿ ನಾಲ್ಕನೇ ಟೆಸ್ಟ್ ಶತಕ ಪೂರೈಸಿದರು.

3 / 5
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ 449 ರನ್​ಗಳಿಗೆ ಮೊದಲ ಇನ್ನಿಂಗ್ಸ್​ ಕನೆಗೊಳಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 408 ರನ್​ಗಳಿಗೆ ಆಲೌಟ್ ಆಗುವುದರೊಂದಿಗೆ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತ್ತು.

4 / 5
ಇನ್ನು ಎರಡನೇ ಇನ್ನಿಂಗ್ಸ್​ನಲ್ಲಿ ಟಾಮ್ ಲೇಥಮ್, ಟಾಮ್ ಬ್ಲಂಡೆಲ್, ಮಿಷೆಲ್ ಬ್ರೆಸ್​ವೆಲ್ ಅವರ ನೆರವಿನಿಂದ ನ್ಯೂಜಿಲೆಂಡ್ ಪಡೆ ಪಾಕಿಸ್ತಾನಕ್ಕೆ 319 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

5 / 5

Published On - 6:35 pm, Fri, 6 January 23

Follow us