- Kannada News Photo gallery Cricket photos PAK vs NZ Sarfaraz Ahmed for fighting century pakistan vs new zealand 2nd Test match draw
PAK vs NZ: 8 ವರ್ಷಗಳ ಬಳಿಕ ಟೆಸ್ಟ್ ಶತಕ ಸಿಡಿಸಿದ ಸರ್ಫರಾಜ್! ಮುಜುಗರದ ಸೋಲಿನಿಂದ ಪಾರಾದ ಪಾಕ್
PAK vs NZ: ಕರಾಚಿಯಲ್ಲಿ ನಡೆದ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ ಉಭಯ ದೇಶಗಳ ನಡುವಣ ಟೆಸ್ಟ್ ಸರಣಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.
Updated on:Jan 06, 2023 | 6:35 PM

ಕರಾಚಿಯಲ್ಲಿ ನಡೆದ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ ಉಭಯ ದೇಶಗಳ ನಡುವಣ ಟೆಸ್ಟ್ ಸರಣಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.

ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಸರ್ಫರಾಜ್ ಅಹ್ಮದ್ ಸುಮಾರು ನಾಲ್ಕು ವರ್ಷಗಳ ನಂತರ ತಂಡಕ್ಕೆ ಮರಳಿ, ಬರೋಬ್ಬರಿ 8 ವರ್ಷಗಳ ಕಾಯುವಿಕೆಯ ನಂತರ ಕರಾಚಿ ಟೆಸ್ಟ್‌ನ ಕೊನೆಯ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಮತ್ತು ಸ್ಮರಣೀಯ ಶತಕ ಬಾರಿಸಿದರು.

2019 ರ ನಂತರ ಮೊದಲ ಬಾರಿಗೆ ಪಾಕಿಸ್ತಾನದ ಟೆಸ್ಟ್ ತಂಡಕ್ಕೆ ವಾಪಸಾದ ಸರ್ಫರಾಜ್, ಕರಾಚಿ ಟೆಸ್ಟ್‌ನ ಕೊನೆಯ ದಿನವಾದ ಜನವರಿ 6 ಶುಕ್ರವಾರದಂದು 135 ಎಸೆತಗಳಲ್ಲಿ ನಾಲ್ಕನೇ ಟೆಸ್ಟ್ ಶತಕ ಪೂರೈಸಿದರು.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ 449 ರನ್ಗಳಿಗೆ ಮೊದಲ ಇನ್ನಿಂಗ್ಸ್ ಕನೆಗೊಳಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 408 ರನ್ಗಳಿಗೆ ಆಲೌಟ್ ಆಗುವುದರೊಂದಿಗೆ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತ್ತು.

ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಟಾಮ್ ಲೇಥಮ್, ಟಾಮ್ ಬ್ಲಂಡೆಲ್, ಮಿಷೆಲ್ ಬ್ರೆಸ್ವೆಲ್ ಅವರ ನೆರವಿನಿಂದ ನ್ಯೂಜಿಲೆಂಡ್ ಪಡೆ ಪಾಕಿಸ್ತಾನಕ್ಕೆ 319 ರನ್ಗಳ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
Published On - 6:35 pm, Fri, 6 January 23




