Joshimath Sinking: ಉತ್ತರಾಖಂಡದ ಜೋಶಿಮಠ ಭೂಕುಸಿತಕ್ಕೆ ಕಾರಣವೇನು? ಇಲ್ಲಿದೆ ವಿವರ

ಉತ್ತರಾಖಂಡದ (Uttarakhand) ಜೋಶಿಮಠದಲ್ಲಿ (Joshimath) ಭೂಕುಸಿತದ ಆತಂಕ ಹೆಚ್ಚಾಗಿದ್ದು, ಕುಟುಂಬಗಳ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ನಾಮಾವಶೇಷ ಭೀತಿ ಎದುರಿಸುತ್ತಿರುವ ಬದರಿನಾಥದ ಹೆಬ್ಬಾಗಿಲಿನ ವಿವಿಧ ಕಡೆಗಳ ಚಿತ್ರಗಳ ಜತೆಗೆ ಈ ದುರಂತಕ್ಕೆ ಕಾರಣವೇನು ಎಂಬುದಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

TV9 Web
| Updated By: Ganapathi Sharma

Updated on:Jan 07, 2023 | 9:34 AM

Uttarakhand Joshimath Sinking why this tragedy happening Experts opinion in Kannada

ಉತ್ತರಾಖಂಡದ ಜೋಶಿಮಠದಲ್ಲಿ ಸುಮಾರು 500ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಪರಿಣಾಮವಾಗಿ 600 ಕುಟುಂಬಗಳ ತಕ್ಷಣದ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಿದೆ.

1 / 9
Uttarakhand Joshimath Sinking why this tragedy happening Experts opinion in Kannada

ಸುಮಾರು 1890 ಮೀಟರ್ ಎತ್ತರದಲ್ಲಿರುವ ಜೋಶಿಮಠವು ಹಿಮಾಲಯದ ಘರ್ವಾಲ್​ನ ಒಂದು ಪಟ್ಟಣವಾಗಿದೆ.

2 / 9
Uttarakhand Joshimath Sinking why this tragedy happening Experts opinion in Kannada

ಜೋಶಿಮಠವು ಪಶ್ಚಿಮ ಮತ್ತು ಪೂರ್ವದಲ್ಲಿ ಕರ್ಮನಾಸ ಮತ್ತು ಧಕನಾಳ ಹೊಳೆಗಳು ಮತ್ತು ದಕ್ಷಿಣ ಮತ್ತು ಉತ್ತರದಲ್ಲಿ ಧೌಲಿಗಂಗಾ ಮತ್ತು ಅಲಕನಂದಾ ನದಿಗಳಿಂದ ಸುತ್ತುವರಿದ ಬೆಟ್ಟದ ಮಧ್ಯದ ಇಳಿಜಾರುಗಳಲ್ಲಿ ನೆಲೆಗೊಂಡಿದೆ.

3 / 9
Uttarakhand Joshimath Sinking why this tragedy happening Experts opinion in Kannada

2021ರ ಫೆಬ್ರವರಿಯಲ್ಲಿ ಜೋಶಿಮಠ ಸಮೀಪದ ತಪೋವನ ವಿಷ್ಣುಗಡದಲ್ಲಿನ ಅಣೆಕಟ್ಟೆಯ ಸಮೀಪ ಸಂಭವಿಸಿದ್ದ ಮೇಘಸ್ಫೋಟದಲ್ಲಿ ನೂರಾರು ಮಂದಿ ಮೃತಪಟ್ಟಿದ್ದರು. ಹತ್ತಾರು ಮಂದಿ ಕಣ್ಮರೆಯಾಗಿದ್ದರು. ಮೇಘಸ್ಫೋಟ, ಭೂಕುಸಿತ, ಭೂಕಂಪದಂಥ ಅವಘಡಗಳು ಹಿಮಾಲಯದ ತಪ್ಪಲಿನ ಈ ರಾಜ್ಯದಲ್ಲಿ ಆಗಾಗ ವರದಿಯಾಗುತ್ತಿರುತ್ತವೆ.

4 / 9
Uttarakhand Joshimath Sinking why this tragedy happening Experts opinion in Kannada

ಹಿಮಾಲಯದ ನೀರ್ಗಲ್ಲುಗಳು ಕರಗುತ್ತಿರುವುದು ಕೂಡ ಜೋಶಿಮಠ ಹಾಗೂ ಉತ್ತರಾಖಂಡದ ಇತರ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತಿದೆ. ಹಿಮಕರಗಿ ಬರುವ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳಲಾಗದೆ ಮಣ್ಣು ಬಿರುಕುಬಿಡುತ್ತದೆ. ಪರಿಣಾಮವಾಗಿ ಭೂಕುಸಿತದಂಥ ಘಟನೆಗಳು ಸಂಭವಿಸುತ್ತಿವೆ ಎನ್ನಲಾಗಿದೆ.

5 / 9
Uttarakhand Joshimath Sinking why this tragedy happening Experts opinion in Kannada

ಪ್ರಸ್ತುತ ಜೋಶಿಮಠದ ಭೂಕುಸಿತ, ಮುಳುಗಡೆ ಬಗ್ಗೆ ತುರ್ತಾಗಿ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ತಜ್ಞರ ತಂಡವೊನ್ನು ರಚಿಸಿದ್ದು, ಅದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಈ ತಂಡ ನೀಡುವ ವರದಿಯ ಆಧಾರದಲ್ಲಿ ಮುಂದಿನ ಕ್ರಮಗಳ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.

6 / 9
Uttarakhand Joshimath Sinking why this tragedy happening Experts opinion in Kannada

ಶತಮಾನಗಳ ಹಿಂದೆ ಸಂಭವಿಸಿದ್ದ ಭೂಕುಸಿತದ ಅವಶೇಷಗಳ ಮೇಲೆಯೇ ಊರು ನಿರ್ಮಾಣಗೊಂಡಿದೆ ಎನ್ನಲಾಗಿದ್ದು, ಇದು ಹೆಚ್ಚು ಪ್ರಾಕೃತಿಕ ವಿಕೋಪಗಳಿಗೆ ತೆರೆದುಕೊಳ್ಳುವಂಥ ಪ್ರದೇಶವಾಗಿದೆ ಎಂದು ತಜ್ಞರು ಹೇಳಿದ್ದಾರೆ.

7 / 9
Uttarakhand Joshimath Sinking why this tragedy happening Experts opinion in Kannada

ಭೂಕುಸಿತದಿಂದಾಗಿ ಜೋಶಿಮಠದ ಅನೇಕ ಕಡೆಗಳಲ್ಲಿ ರಸ್ತೆಗಳಲ್ಲಿ ಬಿರುಕುಗಳು ಉಂಟಾಗಿವೆ. ಪರಿಣಾಮವಾಗಿ ಸಂಚಾರ ಕಷ್ಟಸಾಧ್ಯವಾಗಿದೆ.

8 / 9
Uttarakhand Joshimath Sinking why this tragedy happening Experts opinion in Kannada

ಮನೆಗಳು ಬಿರುಕುಬಿಟ್ಟಿರುವ ಕಾರಣ ಸ್ಥಳಾಂತರ ಮಾಡಲಾಗಿರುವ ನಿವಾಸಿಗಳು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವುದು

9 / 9

Published On - 9:24 am, Sat, 7 January 23

Follow us
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ

ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು

ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ

ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ