ಮಂಗಳ ಗ್ರಹದಲ್ಲಿ ಜೀವಸಂಕುಲದ ಕುರುಹನ್ನು ಮಾನವರು ಸರಿಯಾಗಿ ಗ್ರಹಿಸಬಲ್ಲರು. ನಾಸಾ ಹಾಗೂ ಇತರ ದೇಶಗಳು ಕಳಿಸಿದ ಉಪಗ್ರಹಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾನವರು ಅಲ್ಲಿ ತೆರಳಿದರೆ ಸಂಶೋಧನೆ ನಡೆಸಬಲ್ಲರು. ಹಾಗೊಂದು ವೇಳೆ, ಜೀವಜಗತ್ತಿನ ಕುರುಹು ಮಂಗಳನಲ್ಲಿ ಇದ್ದರೆ ಮನುಷ್ಯರು ಕೂಡ ಅಲ್ಲಿಗೆ ಹೋಗಬಹುದು. ಇದರಿಂದ ಹೊಸ ಸಂಶೋಧನೆ ಅಥವಾ ಆವಿಷ್ಕಾರ ಆದಂತಾಗುತ್ತದೆ. ಈ ಕಾರಣದಿಂದ ಮಾನವರು ಮಂಗಳನಲ್ಲಿಗೆ ಹೋಗಬೇಕು. ಏನೇ ಆದರೂ ಇದುವರೆಗೆ ಮಂಗಳ ಗ್ರಹದಲ್ಲಿ ಜೀವಜಗತ್ತು ಇರುವ ಬಗ್ಗೆ ಯಾವುದೇ ಗಟ್ಟಿ ಕುರುಹು ಸಿಕ್ಕಿಲ್ಲ.

ಭೂಮಿ ಮೇಲೆ ಡೈನೋಸರಸ್ ಅಸ್ತಿತ್ವ ಕಣ್ಮರೆಯಾಗಿದೆ. ಅದೇ ರೀತಿ ಭೂಮಿ ಮೇಲೆ ಮಾನವ ಜೀವಸಂಕುಲದ ಅಸ್ತಿತ್ವ ಅತ್ಯಂತ ದೀರ್ಘಕಾಲದ ವರೆಗೆ ಉಳಿಯುವುದು ಕಷ್ಟಸಾಧ್ಯ ಎಂದು ಅರ್ಥಮಾಡಿಕೊಳ್ಳಬೇಕು. ಯಾವುದೇ ಬೃಹತ್ ಸ್ಫೋಟ ಉಂಟಾದರೂ ಭೂಮಿ ಹಾಗೂ ಮಾನವ ಸಂಕುಲದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಅಂತಹ ಘಟನೆಗಳಿಂದ ಮಾನವ ಸಂಕುಲವೇ ನಶಿಸಿ ಹೋಗಲೂಬಹುದು. ಈ ಸಂದರ್ಭದಲ್ಲಿ ಮಾನವರು ಭೂಮಿಯ ಹೊರತಾಗಿ ಮತ್ತೊಂದು ಗ್ರಹದಲ್ಲಿ ವಾಸವಿದ್ದರೆ ಮಾನವರ ಅಸ್ತಿತ್ವ ಅಲ್ಲಿ ಕನಿಷ್ಠ ಸಾವಿರ ವರ್ಷಗಳಷ್ಟಾದರೂ ಉಳಿದುಕೊಳ್ಳಬಹುದು.

ಮಂಗಳ ಗ್ರಹದಲ್ಲಿ ಜೀವಸಂಕುಲದ ಕುರುಹನ್ನು ಮಾನವರು ಸರಿಯಾಗಿ ಗ್ರಹಿಸಬಲ್ಲರು. ನಾಸಾ ಹಾಗೂ ಇತರ ದೇಶಗಳು ಕಳಿಸಿದ ಉಪಗ್ರಹಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾನವರು ಅಲ್ಲಿ ತೆರಳಿದರೆ ಸಂಶೋಧನೆ ನಡೆಸಬಲ್ಲರು. ಹಾಗೊಂದು ವೇಳೆ, ಜೀವಜಗತ್ತಿನ ಕುರುಹು ಮಂಗಳನಲ್ಲಿ ಇದ್ದರೆ ಮನುಷ್ಯರು ಕೂಡ ಅಲ್ಲಿಗೆ ಹೋಗಬಹುದು. ಇದರಿಂದ ಹೊಸ ಸಂಶೋಧನೆ ಅಥವಾ ಆವಿಷ್ಕಾರ ಆದಂತಾಗುತ್ತದೆ. ಈ ಕಾರಣದಿಂದ ಮಾನವರು ಮಂಗಳನಲ್ಲಿಗೆ ಹೋಗಬೇಕು. ಏನೇ ಆದರೂ ಇದುವರೆಗೆ ಮಂಗಳ ಗ್ರಹದಲ್ಲಿ ಜೀವಜಗತ್ತು ಇರುವ ಬಗ್ಗೆ ಯಾವುದೇ ಗಟ್ಟಿ ಕುರುಹು ಸಿಕ್ಕಿಲ್ಲ.

ಏನೇ ಆದರೂ ಮನುಷ್ಯರು ಆಳವಾದ ಸಮುದ್ರದಿಂದ ಅತ್ಯಂತ ದೂರದ ಗ್ರಹಕ್ಕೆ ಹೋದಾಗ ಮಾತ್ರ ಅಂತಹಾ ಆವಿಷ್ಕಾರಗಳು ಆಗಲು ಸಾಧ್ಯ. ಮುಂದುವರಿದ ತಂತ್ರಜ್ಞಾನದಿಂದ ಮಂಗಳನಲ್ಲಿ ಮಾನವನ ಜೀವರಾಶಿ ಉಳಿದುಕೊಳ್ಳುವುದು ತಿಳಿದರೆ ಅದರ ಪರಿಣಾಮ ಭೂಮಿ ಮೇಲಿನ ಮಾನವರ ಬದುಕಿಗೂ ಆಗುತ್ತದೆ. ಇದು ಔಷಧದಿಂದ ಹಿಡಿದು ಕೃಷಿವರೆಗೂ, ಇತ್ಯಾದಿಗಳಿಗೂ ಪರಿಣಾಮ ಬೀರಬಹುದು.

ಮಂಗಳನಲ್ಲಿಗೆ ಹೋಗುವುದು ಮುಂದಿನ ಪೀಳಿಗೆಯ ಮನುಷ್ಯರು ಬಾಹ್ಯಾಕಾಶಕ್ಕೆ ಹೋಗುವುದಕ್ಕೆ ಸ್ಫೂರ್ತಿ ನೀಡಿದಂತೆ ಆಗುತ್ತದೆ. ಇದರಿಂದ ತಂತ್ರಜ್ಞಾನ, ಆವಿಷ್ಕಾರಗಳು ಅಧಿಕವಾಗುತ್ತದೆ. ಇದೆಲ್ಲವೂ ಒಟ್ಟಾರೆಯಾಗಿ ಮಾನವರ ಮೇಲೆ ಒಂದಿಲ್ಲೊಂದು ಪರಿಣಾಮ ಬೀರುತ್ತದೆ. ಮನುಷ್ಯರು ಬಾಹ್ಯಾಕಾಶದಲ್ಲಿ, ಇತರ ಗ್ರಹದಲ್ಲಿ ಪ್ರತ್ಯೇಕವಾಗಿ ಬದುಕುವುದು ಕೂಡ ಆಗಬಹುದು.

ಮಂಗಳನಲ್ಲಿಗೆ ಕಾಲಿಡುವುದು ಕೇವಲ ಬಾಹ್ಯಾಕಾಶ ತಂತ್ರಜ್ಞಾನ ವಿಚಾರಕ್ಕೆ ಮಾತ್ರವಲ್ಲ, ಬದಲಾಗಿ ರಾಜಕೀಯ ನೀತಿಗಳಿಗೂ ಇದು ಮುಖ್ಯವಾಗುತ್ತದೆ. ಮಂಗಳನಲ್ಲಿ ಗಟ್ಟಿಯಾಗಿ ನೆಲೆಯೂರುವ ಕಾರಣದಿಂದ, ಯಾವ ದೇಶ ಅಂತಹ ಹೆಜ್ಜೆ ತೆಗೆದುಕೊಳ್ಳುತ್ತದೋ ಅದು ಅಲ್ಲಿನ ಆರ್ಥಿಕ ಹಾಗೂ ರಾಜಕೀಯ ಲಾಭಗಳನ್ನು ಕೂಡ ಪಡೆದುಕೊಳ್ಳುತ್ತದೆ ಎಂದು ಹೇಳಬಹುದು.