ನವರಾತ್ರಿ ಪ್ರಯುಕ್ತ ಉಚ್ಚಂಗೆಮ್ಮನಿಗೆ ತರಕಾರಿಯಿಂದ ಶೃಂಗಾರ; ಇಲ್ಲಿದೆ ಚಿತ್ರಗಳು
ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ದಸರಾ ಮಹೋತ್ಸವದ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜೆಗಳು ನಡೆಯುತ್ತಿವೆ.
Updated on: Oct 11, 2021 | 11:37 AM

Navratri 2021 uchangamma decorated with vegetables in davangere

ದಸರಾ ಹಬ್ಬದ 2 ನೇ ದಿನವಾದ ಶುಕ್ರವಾರ ಶಾರದಾ ಪೂಜೆಯನ್ನು ಮಾಡಲಾಗಿತು. ದಸರಾ ಹಬ್ಬದ 3 ನೇ ದಿನ ಶನಿವಾರ ಹಣ್ಣಿನ ಅಲಂಕಾರ ಮಾಡಲಾಗಿತ್ತು. ದಸರಾ ಹಬ್ಬದ 4 ನೇ ದಿನ ಭಾನುವಾರ ತೆಂಗಿನ ಕಾಯಿ ಪೂಜೆ ಅಲಂಕಾರ ಮಾಡಲಾಗಿತ್ತು. ದಸರಾ ಹಬ್ಬದ 5ನೇ ದಿನ ಸೋಮವಾರ ತರಕಾರಿ ಪೂಜೆ ಅಲಂಕಾರ ಮಾಡಲಾಗಿದೆ.

ನವರಾತ್ರಿ ಪ್ರಯುಕ್ತ ಉಚ್ಚಂಗೆಮ್ಮನಿಗೆ ನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ದೇವಿಗೆ ದಿನಕ್ಕೊಂದು ವಿಶೇಷ. ಇಂದು ತರಕಾರಿಯಲ್ಲಿ ದೇವಿಗೆ ಅಲಂಕಾರ ಮಾಡಲಾಗಿದೆ. ದಸರಾ ಹಬ್ಬದ ಪ್ರಯಕ್ತ ನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಶನಿವಾರ ಹಣ್ಣಿನ ಅಲಂಕಾರ ಮಾಡಲಾಗಿತ್ತು. ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ದಸರಾ ಮಹೋತ್ಸವದ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜೆಗಳು ನಡೆಯುತ್ತಿವೆ.

ಲಿಂಬೆಹಣ್ಣಿನ ಹಾರ, ಟೊಮೆಟೋ ಈರುಳ್ಳಿ, ಬೆಂಡೆ ಕಾಯಿ, ಕ್ಯಾರೆಟ್, ಬಿಟ್ರೂಟ್ ಆಲೂಗಡ್ಡೆಯಿಂದ ಉಚ್ಚಂಗೆಮ್ಮ ದೇವಿಗೆ ಅಲಂಕರಿಸಲಾಗಿದೆ. ಬಣ್ಣ ಬಣ್ಣದ ತರಕಾರಿಯಲ್ಲಿ ದೇವಿ ಕಂಗೊಳಿಸುತ್ತಿದ್ದಾಳೆ.

ದೇವಿಗೆ ಅಲಂಕಾರ ಮಾಡಿ ಉತ್ಸವ ಮೂರ್ತಿಯನ್ನು ಕುದುರೆಯ ಮೇಲೆ ಘಟಸ್ಥಾಪನೆ ಮಾಡಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಹಾಗೂ ಅರ್ಚಕರು ದೀಪಾ ಬೆಳಗಿಸುವ ಮೂಲಕ ಸರಳ ದಸರಾಕ್ಕೆ ಚಾಲನೆ ನೀಡಿದರು.

ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ದಸರಾ ಮಹೋತ್ಸವದ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜೆಗಳು ನಡೆಯುತ್ತಿವೆ. ಗುರುವಾರ ಸಾಯಂಕಾಲ ಉಚ್ಚಂಗೆಮ್ಮನ ಉತ್ಸವ ಮೂರ್ತಿಯೊಂದಿಗೆ ಆನೆಹೊಂಡಕ್ಕೆ ಹೋಗಿಬಂದ ಮೇಲೆ ಶ್ರೀ ದೇವಿಗೆ ವಿಶೇಷವಾಗಿ ಪೂಜೆ ಮಾಡಲಾಯಿತು.



















