Food Emergeny In Srilanka: ಶ್ರೀಲಂಕಾದಲ್ಲಿ ಆಹಾರಕ್ಕೆ ತತ್ವಾರ; ವಿದೇಶೀ ವಿನಿಮಯ ಕೊರತೆ, ತುರ್ತು ಪರಿಸ್ಥಿತಿ ಘೋಷಣೆ

| Updated By: Srinivas Mata

Updated on: Aug 31, 2021 | 2:52 PM

ದ್ವೀಪ ರಾಷ್ಟ್ರವಾದ ಶ್ರೀಲಂಕಾದಲ್ಲಿ ಆಹಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ವಿದೇಶೀ ವಿನಿಮಯ ಸಂಗ್ರಹದ ಕೊರತೆಯಿಂದಾಗಿ ದೇಶ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

1 / 5
ಶ್ರೀಲಂಕಾದಲ್ಲಿ ಖಾಸಗಿ ಬ್ಯಾಂಕ್​ಗಳು ವಿದೇಶಿ ವಿನಿಮಯ ಕೊರತೆಯಿಂದ ಬಳಲುತ್ತಿದ್ದು, ಆಮದು ಮಾಡಿಕೊಳ್ಳಲು ಹಣಕಾಸು ವ್ಯವಸ್ಥೆ ಒದಗಿಸುವುದು ಕಷ್ಟವಾಗಿದೆ. ಅದರ ಪರಿಣಾಮವಾಗಿ ಆಹಾರ ಕೊರತೆ ಎದುರಾಗಿದೆ. ಈ ಕಾರಣಕ್ಕೆ ಆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಅಧ್ಯಕ್ಷರಾದ ಗೊಟಬಾಯಾ ರಾಜಪಕ್ಸ ಮಂಗಳವಾರದಂದು ಮಾತನಾಡಿ, ಸಕ್ಕರೆ, ಅಕ್ಕಿ ಮತ್ತು ಇತರ ಅಗತ್ಯ ಆಹಾರ ಪದಾರ್ಥಗಳನ್ನು ಸಂಗ್ರಹಿಸುವಂತಿಲ್ಲ ಎಂದು ತುರ್ತು ನಿಯಮಾವಳಿ ರೂಪಿಸಿ, ಆದೇಶ ಹೊರಡಿಸಲಾಗಿದೆ. ಈ ಆದೇಶದ ಮೂಲಕವಾಗಿ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ದೊರೆಯುತ್ತದೆ. ಸರ್ಕಾರದಿಂದ ಈಗ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಣ ಮಾಡಬೇಕಿರುವುದರಿಂದ ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಿಸುವ ವರ್ತಕರಿಂದ ಅವುಗಳನ್ನು ವಶಪಡಿಸಿಕೊಳ್ಳುವ, ಬಂಧಿಸುವ ಅಧಿಕಾರವನ್ನು ನೀಡಲಾಗಿದೆ.

2 / 5
ರಾಜಪಕ್ಸ ಅವರು ಉನ್ನತ ಸೈನ್ಯಾಧಿಕಾರಿಯನ್ನು ಅಗತ್ಯ ಸೇವೆಗಳ ಮಹಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಅವರು ಭತ್ತ, ಅಕ್ಕಿ, ಸಕ್ಕರೆ ಹಾಗೂ ಇತರ ಗ್ರಾಹಕ ವಸ್ತುಗಳು ಪೂರೈಕೆ ಮಾಡುವುದರ ಸಂವಹನ ನಡೆಸಬೇಕಾಗುತ್ತದೆ. ಅಂದಹಾಗೆ ಸಕ್ಕರೆ, ಅಕ್ಕಿ, ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆಯಲ್ಲಿ ಸಿಕ್ಕಾಪಟ್ಟೆ ಹೆಚ್ಚಳವಾಗಿದೆ. ಹಾಲಿನ ಪುಡಿಗೆ, ಸೀಮೆಎಣ್ಣೆ ಮತ್ತು ಅಡುಗೆ ಅನಿಲ ಕೊರತೆಯಾಗಿ ಉದ್ದೋ ಉದ್ದದ ಸಾಲುಗಳಲ್ಲಿ ಜನರು ಕಂಡುಬರುತ್ತಾರೆ. ಅಂದಹಾಗೆ ಶ್ರೀಲಂಕಾದಲ್ಲಿ ಕೊವಿಡ್-19 ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ 16 ದಿನಗಳ ಕಾಲ, ಅಂದರೆ ಮುಂದಿನ ಸೋಮವಾರದ ತನಕ ಕರ್ಫ್ಯೂ ಹೇರಿರುವ ಹೊರತಾಗಿಯೂ ಪರಿಸ್ಥಿತಿ ಹೀಗಿದೆ.

3 / 5
ದಿನಕ್ಕೆ 200 ಪ್ರಾಣಗಳು ಕೊರೊನಾಗೆ ಬಲಿ

ದಿನಕ್ಕೆ 200 ಪ್ರಾಣಗಳು ಕೊರೊನಾಗೆ ಬಲಿ

4 / 5
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

5 / 5
ಪೆಟ್ರೋಲ್- ಡೀಸೆಲ್ ಕಡಿಮೆ ಬಳಸಲು ಮನವಿ

ಪೆಟ್ರೋಲ್- ಡೀಸೆಲ್ ಕಡಿಮೆ ಬಳಸಲು ಮನವಿ