ಪ್ರಯಾಣಿಕರ ಗಮನಕ್ಕೆ: ಸೆ. 29 ರಂದು ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ವ್ಯತ್ಯಯ: ಕಾರಣ ಇಲ್ಲಿದೆ

Edited By:

Updated on: Sep 27, 2023 | 7:38 PM

Namma Metro: ಕೆಂಗೇರಿಯಿಂದ ಚಲ್ಲಘಟ್ಟ ಮೇಟ್ರೋ ನಿಲ್ದಾಣಗಳ ನಡುವೆ ಹೊಸದಾಗಿ ನಿರ್ಮಿಸಲಾದ ಮಾರ್ಗದ ಸುರಕ್ಷತಾ ಪರಿಶೀಲನೆಯನ್ನು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ದಕ್ಷಿಣ ವೃತ್ತ) ನಡೆಸುವುದರಿಂದ ಸೆಪ್ಟೆಂಬರ್​ 29 ರಂದು ನೇರಳೆ ಮಾರ್ಗದಲ್ಲಿ ಸೇವೆಗಳು ವ್ಯತ್ಯಯವಾಗಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

1 / 6
ಸೆಪ್ಟೆಂಬರ್​ 29 ರಂದು ನೇರಳೆ ಮಾರ್ಗದಲ್ಲಿ ಮೈಸೂರು ರಸ್ತೆ ಮತ್ತು ಕೆಂಗೇರಿ ನಿಲ್ದಾಣಗಳ ನಡೆವೆ ಪೂರ್ಣ
ದಿನ ಮೆಟ್ರೋ ರೈಲ್ವೆ ಸೇವೆಗಳು ವ್ಯತ್ಯಯಗೊಳ್ಳಲಿವೆ.

ಸೆಪ್ಟೆಂಬರ್​ 29 ರಂದು ನೇರಳೆ ಮಾರ್ಗದಲ್ಲಿ ಮೈಸೂರು ರಸ್ತೆ ಮತ್ತು ಕೆಂಗೇರಿ ನಿಲ್ದಾಣಗಳ ನಡೆವೆ ಪೂರ್ಣ ದಿನ ಮೆಟ್ರೋ ರೈಲ್ವೆ ಸೇವೆಗಳು ವ್ಯತ್ಯಯಗೊಳ್ಳಲಿವೆ.

2 / 6

ಈ ಬಗ್ಗೆ ಪ್ರಕಟಣೆ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ, ಮೆಟ್ರೋ ರೈಲು ಕಾರ್ಯಾಚರಣೆಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.

3 / 6

ಕೆಂಗೇರಿಯಿಂದ ಚಲ್ಲಘಟ್ಟ ಮೇಟ್ರೋ ನಿಲ್ದಾಣಗಳ ನಡುವೆ ಹೊಸದಾಗಿ ನಿರ್ಮಿಸಲಾದ ಮಾರ್ಗದ ಸುರಕ್ಷತಾ ಪರಿಶೀಲನೆಯನ್ನು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ದಕ್ಷಿಣ ವೃತ್ತ) ನಡೆಸುವುದರಿಂದ ಸೇವೆಯಲ್ಲಿ ವ್ಯತ್ಯಯಗೊಳ್ಳಲಿವೆ.

4 / 6

ಸೆ. 29 ರಂದು ಕೆಂಗೇರಿ ಮತ್ತು ಮೈಸೂರು ರಸ್ತೆ ನಿಲ್ದಾಣಗಳ ನಡುವೆ ದಿನ ಪೂರ್ಣ ರೈಲು ಸೇವೆಗಳು ಇರುವುದಿಲ್ಲ.

5 / 6

ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ನಿಲ್ದಾಣ, ವೈಟ್ ಫೀಲ್ಡ್ (ಕಾಡುಗೋಡಿ) ಮತ್ತು ಕೃಷ್ಣರಾಜಪುರ ನಿಲ್ದಾಣಗಳ ನಡುವೆ ದಿನ ಪೂರ್ತಿ ರೈಲು ಸೇವೆಗಳು ಲಭ್ಯವಿರುತ್ತದೆ.

6 / 6

ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಯಾಣಿಕರು ಸದರಿ ಬದಲಾವಣೆಗಳನ್ನು ಗಮನಿಸಿ ಪ್ರಯಾಣಿಸುವಂತೆ ಬಿಎಂಆರ್ಸಿಎಲ್​ ಕೋರಿದೆ.

Published On - 7:22 pm, Wed, 27 September 23

Loading...
Unable to load recommendations.
Follow Us