Home Garden:ಯಾವುದೇ ರೂಮ್ ಫ್ರೆಶ್‌ನರ್ ಬಳಸದೇ ನಿಮ್ಮ ಮನೆಯನ್ನು ನೈಸರ್ಗಿಕವಾಗಿ ಪರಿಮಳಯುಕ್ತಗೊಳಿಸಿ
TV9 Web | Updated By: ಅಕ್ಷತಾ ವರ್ಕಾಡಿ
Updated on:
Nov 16, 2022 | 5:34 PM
ಮನೆಯನ್ನು ಪರಿಮಳಯುಕ್ತಗೊಳಿಸಲು ಕೃತಕ ರೂಮ್ ಫ್ರೆಶ್‌ನರ್, ಏರ್ ಫ್ರೆಶ್‌ನರ್ ಮುಂತಾದವುಗಳನ್ನು ಬಳಸಲಾಗುತ್ತದೆ. ಆದ್ದರಿಂದ ನಿಮ್ಮ ಮನೆಯನ್ನು ನೈಸರ್ಗಿಕವಾಗಿ ಪರಿಮಳಯುಕ್ತಗೊಳಿಸಲು ಈ ಕೆಳಗಿನ ಗಿಡಗಳನ್ನು ನಿಮ್ಮ ಮನೆಯ ಗಾರ್ಡನ್ ನಲ್ಲಿ ಬೆಳೆಸಿ.
1 / 6
ಸಾಮಾನ್ಯವಾಗಿ ಹಳ್ಳಿ ಭಾಗಗಳಲ್ಲಿ ಮನೆ ಮುಂದೆ ತುಳಸಿ ಗಿಡ, ಸಾಕಷ್ಟು ಹೂವಿನ ಗಿಡಗಳನ್ನು ಕಾಣಬಹುದು. ಇದು ಮನೆಗಳ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಮನೆ ಮಂದಿಯನ್ನು ಆರೋಗ್ಯದಿಂದಿಡಲು ಸಹಕಾರಿಯಾಗಿದೆ ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ.
2 / 6
ಇಂದಿನ ಬದಲಾದ ಜೀವನಶೈಲಿಯಿಂದಾಗಿ ಪಟ್ಟಣದಲ್ಲಿ ವಾಸಿಸುವ ಜನರು ಮಹಡಿಗಳಲ್ಲಿ ವಾಸಿಸುವುದ್ದರಿಂದ ಮನೆಗೆ ಅಂಗಳಗಳಿರುವುದಿಲ್ಲ. ಜೊತೆಗೆ ಸಾಕಷ್ಟು ಧೂಳು , ಮಾಲಿನ್ಯಗಳಿಂದ ಮನೆಯನ್ನು ಪರಿಮಳಯುಕ್ತಗೊಳಿಸಲು ಕೃತಕ ರೂಮ್ ಫ್ರೆಶ್‌ನರ್, ಏರ್ ಫ್ರೆಶ್‌ನರ್ ಮುಂತಾದವುಗಳನ್ನು ಬಳಸಲಾಗುತ್ತದೆ. ಆದ್ದರಿಂದ ನಿಮ್ಮ ಮನೆಯನ್ನು ನೈಸರ್ಗಿಕವಾಗಿ ಪರಿಮಳಯುಕ್ತಗೊಳಿಸಲು ಈ ಕೆಳಗಿನ ಟಿಪ್ಸ್ ಗಳನ್ನು ಪಾಲಿಸಿ.
3 / 6
ರೋಸ್ಮರಿ ಹೂಬಿಡುವ ಸಸ್ಯವಾಗಿದ್ದು ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಆಕರ್ಷಕವಾಗಿ ಕಾಣುತ್ತದೆ. ಈ ಗಿಡವು ಹೆಚ್ಚಿನ ಸುವಾಸನೆಯಿಂದ ಕೂಡಿರುವುದರಿಂದ, ಇದನ್ನು ಹೆಚ್ಚಿನ ತೈಲಗಳು ಮತ್ತು ಸುಗಂಧ ದ್ರವ್ಯಗಳಲ್ಲಿ ಬಳಸಲಾಗುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಈ ಗಿಡವನ್ನು ಬೆಳೆಸಿ. ಇದು ನಿಮ್ಮ ಒತ್ತಡದ ಸಂಜೆಯನ್ನು ಹೆಚ್ಚು ಶಾಂತ ಮತ್ತು ಹಿತಕರವಾಗಿಸಲು ಸಹಾಯ ಮಾಡುತ್ತದೆ.
4 / 6
ರಾತ್ರಿ ಅರಳುವ ಮಲ್ಲಿಗೆ ಇದು ರಾತ್ರಿಯ ಸಮಯದಲ್ಲಿ ನಿಮ್ಮ ಮನೆಗೆ ಹಿತಕರ ಸುವಾಸನೆಯನ್ನು ನೀಡುತ್ತದೆ. ಹಿಂದಿಯಲ್ಲಿ ಈ ಗಿಡವನ್ನು ರಾತ್ ಕಿ ರಾಣಿ ಎಂದು ಕರೆಯುತ್ತಾರೆ. ಇದು ರಾತ್ರಿಯಲ್ಲಿ ಸುತ್ತಮುತ್ತಲಿನ ಪರಿಸರವನ್ನು ತನ್ನ ಪರಿಮಳದಿಂದ ಮೋಡಿಮಾಡುವ ವಿಶೇಷ ಗುಣವನ್ನು ಹೊಂದಿದೆ. ಅದ್ದರಿಂದ ನಿಮ್ಮ ಮನೆಯಲ್ಲಿ ಈ ಗಿಡವನ್ನು ನೆಟ್ಟು ಹಿತಕರ ಸುವಾಸನೆಯನ್ನು ಪಡೆಯಿರಿ.
5 / 6
ನಿಂಬೆ ತುಳಸಿ ಈ ಸಸ್ಯದ ಎಲೆಗಳು ತುಳಸಿಯನ್ನು ಹೋಲುತ್ತವೆ ಮತ್ತು ಅನೇಕ ಭಕ್ಷ್ಯಗಳಲ್ಲಿ ಸುವಾಸನೆಯ ಅಂಶವಾಗಿ ಬಳಸಲಾಗುತ್ತದೆ. ಇದಲ್ಲದೆ, ನೀವು ಅದರ ಎಲೆಗಳನ್ನು ಪುಡಿಮಾಡಿ ಪರಿಮಳಯುಕ್ತ ಮೇಣದಬತ್ತಿಗಳು, ಎಣ್ಣೆಗಳು ಮತ್ತು ಸುಗಂಧ ದ್ರವ್ಯಗಳನ್ನು ತಯಾರಿಸಲುಸಬಹುದು.
6 / 6
ರಜನಿಗಂಧವು ಬಿಳಿ ಹೂವುಗಳನ್ನು ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಆಕರ್ಷಕವಾಗಿ ಕಾಣುತ್ತದೆ. ಇದು ಹಿತವಾದ ನೈಸರ್ಗಿಕ ಪರಿಮಳವನ್ನು ಹೊಂದಿದ್ದು, ನಿಮ್ಮ ಮನೆಯ ಸುತ್ತಲಿನ ಪರಿಸರವನ್ನು ಸುವಾಸನೆಯಿಂದ ಕೂಡಿರುವಂತೆ ಮಾಡುತ್ತದೆ. ಇದನ್ನು "ಮಿಸ್ಟ್ರೆಸ್ ಆಫ್ ದಿ ನೈಟ್" ಎಂದು ಕೂಡ ಕರೆಯುತ್ತಾರೆ.