Kannada News Photo gallery From Japan Former PM Shinzo Abe to Indira Gandhi politicians who were fatally shot that Shook World
ಶಿಂಜೋ ಅಬೆಯಿಂದ ಇಂದಿರಾ ಗಾಂಧಿಯವರೆಗೆ; ಗುಂಡೇಟಿಗೆ ಬಲಿಯಾದ ವಿಶ್ವದ ಪ್ರಮುಖ ನಾಯಕರಿವರು
TV9 Web | Updated By: ಸುಷ್ಮಾ ಚಕ್ರೆ
Updated on:
Jul 09, 2022 | 2:46 PM
ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ನಿನ್ನೆ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅವರ ರೀತಿಯಲ್ಲೇ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಬುಟ್ಟೋ, ರಾಷ್ಟ್ರಪಿತ ಮಹಾತ್ಮ ಗಾಂಧಿ ಸೇರಿದಂತೆ ಜಗತ್ತಿನ ಹಲವು ನಾಯಕರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ದಾರುಣ ಅಂತ್ಯ ಕಂಡ ವಿಶ್ವ ನಾಯಕರು ಯಾರು? ಎಂಬ ಮಾಹಿತಿ ಇಲ್ಲಿದೆ.
1 / 10
ಶಿಂಜೋ ಅಬೆ:
ನಿನ್ನೆ (ಜುಲೈ 8) ಜಪಾನ್‌ನ ನಾರಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದಾಗ ಜಪಾನ್‌ನ ಮಾಜಿ ಪ್ರಧಾನಿ 67 ವರ್ಷದ ಶಿಂಜೋ ಅಬೆ ಅವರ ಮೇಲೆ ಹಿಂದಿನಿಂದ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಗುಂಡಿನ ದಾಳಿ ನಡೆಸಿದ ಶಂಕಿತ 41 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಗುಂಡೇಟಿನಿಂದ ಬಿದ್ದಿದ್ದ ಶಿಂಜೋ ಅಬೆ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಅವರು ಬದುಕುಳಿಯಲಿಲ್ಲ.
2 / 10
ಇಂದಿರಾ ಗಾಂಧಿ: ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರನ್ನು ಗುಂಡಿಕ್ಕಿ ಕೊಂದಿದ್ದು ವಿಶ್ವಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಇಂದಿರಾ ಗಾಂಧಿ ಅವರ ಸಿಖ್ ಅಂಗರಕ್ಷಕರಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಆಪರೇಷನ್ ಬ್ಲೂ ಸ್ಟಾರ್ ನಂತರ ಆಕ್ರೋಶದಿಂದ ಅವರ ಮೇಲೆ ಗುಂಡು ಹಾರಿಸಿದ್ದರು. ಪಂಜಾಬ್‌ನ ಅಮೃತಸರದಲ್ಲಿರುವ ಹರ್ಮಂದಿರ್ ಸಾಹಿಬ್‌ನ ಗೋಲ್ಡನ್ ಟೆಂಪಲ್‌ನಿಂದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಮತ್ತು ಅವರ ಅನುಯಾಯಿಗಳನ್ನು ತೆಗೆದುಹಾಕಲು ಇಂದಿರಾ ಗಾಂಧಿ ಆದೇಶಿಸಿದ ಭಾರತೀಯ ಮಿಲಿಟರಿ ಕ್ರಮವನ್ನು ವಿರೋಧಿಸಿ ಅವರನ್ನು ಹತ್ಯೆ ಮಾಡಲಾಗಿತ್ತು. ಇಂದಿರಾ ಗಾಂಧಿಗೆ 30 ಗುಂಡುಗಳು ತಗುಲಿದ್ದವು.
3 / 10
ಬೆನಜೀರ್ ಭುಟ್ಟೋ: ಎರಡು ಬಾರಿ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದ ಬೆನಜೀರ್ ಭುಟ್ಟೋ ಅವರನ್ನು 2007ರ ಡಿಸೆಂಬರ್ 27ರಂದು ಗುಂಡು ಹಾರಿಸಿ ಕೊಲ್ಲಲಾಗಿತ್ತು. ಲಿಯಾಕತ್ ನ್ಯಾಷನಲ್ ಬಾಗ್‌ನಲ್ಲಿ ನಡೆದ ರಾಜಕೀಯ ಸಭೆಯ ಬಳಿಕ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಗುಂಡಿನ ದಾಳಿ ನಡೆದ ತಕ್ಷಣ ಆತ್ಮಹತ್ಯಾ ಬಾಂಬ್ ಕೂಡ ಸ್ಫೋಟಿಸಲಾಗಿತ್ತು.
4 / 10
ಮಹಾತ್ಮಾ ಗಾಂಧೀಜಿ: 78ನೇ ವಯಸ್ಸಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ನವದೆಹಲಿಯಲ್ಲಿರುವ ದೊಡ್ಡ ಮಹಲು ಬಿರ್ಲಾ ಹೌಸ್‌ನ ಕಾಂಪೌಂಡ್‌ನಲ್ಲಿ ಹತ್ಯೆಗೀಡಾಗಿದ್ದರು. 1948ರ ಜನವರಿ 30ರಂದು ನಾಥೂರಾಂ ವಿನಾಯಕ ಗೋಡ್ಸೆ ಮಹಾತ್ಮಾ ಗಾಂಧೀಜಿಯವರನ್ನು ಕೊಲೆ ಮಾಡಿದ್ದರು.
5 / 10
ಜಾನ್ ಎಫ್. ಕೆನಡಿ: ಅಮೆರಿಕಾದ 35ನೇ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಡೀಲಿ ಪ್ಲಾಜಾ ಮೂಲಕ ಅಧ್ಯಕ್ಷೀಯ ಮೋಟರ್‌ಕೇಡ್‌ನಲ್ಲಿ ಸವಾರಿ ಮಾಡುವಾಗ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಮಾರಣಾಂತಿಕವಾದ ಗುಂಡೇಟಿನಿಂದ ಸಾವನ್ನಪ್ಪಿದ್ದರು. ಅವರ ಮೇಲೆ ಗುಂಡು ಹಾರಿಸಿದಾಗ ಅವರ ಪತ್ನಿ ಜಾಕ್ವೆಲಿನ್, ಟೆಕ್ಸಾಸ್ ಗವರ್ನರ್ ಜಾನ್ ಕೊನಲಿ ಮತ್ತು ಕೊನ್ನಲ್ಲಿ ಅವರ ಪತ್ನಿ ನೆಲ್ಲಿ ಕೂಡ ವಾಹನದಲ್ಲಿದ್ದರು. ತೀವ್ರ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
6 / 10
ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್: 39ನೇ ವಯಸ್ಸಿನಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಅವರು ತಮ್ಮ ಮೋಟೆಲ್‌ನ ಬಾಲ್ಕನಿಯಲ್ಲಿ ನಿಂತಿದ್ದಾಗ ಜೇಮ್ಸ್ ಅರ್ಲ್ ರೇ ಎಂಬುವವರು ಮಾರಣಾಂತಿಕವಾಗಿ ಗುಂಡು ಹಾರಿಸಿ ಕೊಲೆ ಮಾಡಿದ್ದರು.
7 / 10
ಸಿಧು ಮೂಸೆವಾಲಾ:
8 / 10
ವಾಜ್ಗೆನ್ ಸರ್ಗ್ಸ್ಯಾನ್: 1999ರ ಅಕ್ಟೋಬರ್ 27ರಂದು ರಾಜಧಾನಿ ಯೆರೆವಾನ್‌ನಲ್ಲಿ ಆಗಿನ ಅರ್ಮೇನಿಯಾದ ಪ್ರಧಾನ ಮಂತ್ರಿ ವಜ್ಗೆನ್ ಸರ್ಗ್ಸ್ಯಾನ್ ಅವರ ಮೇಲೆ ಸಂಸತ್ತಿಗೆ ನುಗ್ಗಿದ ಬಂದೂಕುಧಾರಿಗಳು ಮಾರಣಾಂತಿಕವಾಗಿ ಗುಂಡು ಹಾರಿಸಿದ್ದರು. ದಿ ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಆ ಹತ್ಯೆಯು ಸರ್ಕಾರದ ಮೇಲಿನ ಅಸಮಾಧಾನದಿಂದ ನಡೆಸಲ್ಪಟ್ಟಿತ್ತು.
9 / 10
ಅಬ್ರಹಾಂ ಲಿಂಕನ್: ಅಮೆರಿಕಾದ 16ನೇ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರನ್ನು ಕೂಡ ಗುಂಡು ಹಾರಿಸಿ ಕೊಲ್ಲಲಾಗಿತ್ತು.
10 / 10
ಯಿಟ್ಜಾಕ್ ರಾಬಿನ್: 1995ರ ನವೆಂಬರ್ 4ರಂದು ಟೆಲ್ ಅವೀವ್‌ನ ಕೇಂದ್ರ ಪ್ಲಾಜಾದಲ್ಲಿ ಶಾಂತಿ ರ್ಯಾಲಿಯಲ್ಲಿ ಭಾಷಣ ಮಾಡಿದ ಬಳಿಕ ಇಸ್ರೇಲ್‌ನ ಆಗಿನ ಪ್ರಧಾನ ಮಂತ್ರಿ ಯಿಟ್ಜಾಕ್ ರಾಬಿನ್ ಅವರು ವೇದಿಕೆಯ ಹಿಂದೆ ಹೋದಾಗ ಗುಂಡಿಕ್ಕಿ ಕೊಲ್ಲಲಾಗಿತ್ತು.