- Kannada News Photo gallery From Temples to the Frontiers: PM Modi’s 2025 Through the Lens of the NaMo App
Narendra Modi In Pics: 2025 ಪ್ರಧಾನಿ ನರೇಂದ್ರ ಮೋದಿ ಚಿತ್ರ ಪರ್ವ, ವಿಶ್ವ ಪರ್ಯಟನೆ, ದೇಶದಲ್ಲಿ ನಡೆದ ಘಟನೆಗಳ ಮಿಶ್ರಣ
ಪ್ರಧಾನಿ ನರೇಂದ್ರ ಮೋದಿ ಪಾಲಿಗೆ 2025 ಹಲವು ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಿದೆ. ಟ್ರಂಪ್ ಭೇಟಿಯಿಂದ ಹಿಡಿದು ಹಲವು ದೇಶಗಳಿಂದ ಅಲ್ಲಿಯ ಅತ್ಯುನ್ನತ ಪುರಸ್ಕಾರ ಸ್ವೀಕಾರ, ಪುಟಿನ್ ಜತೆಗಿನ ಭೇಟಿ ಸೇರಿ ಹಲವು ಚಿತ್ರಗಳು ಎಲ್ಲರ ಗಮನ ಸೆಳೆದಿವೆ. ಅದರಲ್ಲೂ ಪ್ರಸಕ್ತ ಜಾಗತಿಕ ವಿದ್ಯಮಾನಗಳಲ್ಲಿ ಜಿನ್ಪಿಂಗ್ ಹಾಗೂ ಪುಟಿನ್ ಜತೆಗಿನ ಫೋಟೊವು ಜಾಗತಿಕ ಮಾಧ್ಯಮಗಳಲ್ಲಿ ಕೇಂದ್ರಬಿಂದುವಾಗಿತ್ತು. ಇನ್ನು ಭಾರತದ ಮಟ್ಟಿಗೆ ಆಪರೇಷನ್ ಸಿಂಧೂರ್ ಬಳಿಕ ಯೋಧರನ್ನುದ್ದೇಶಿಸಿ ಮಾತನಾಡಿದ್ದು, ರಾಮ ಮಂದಿರ ಧ್ವಜಾರೋಹಣ, ಕುಂಭಮೇಳದಲ್ಲಿ ಭಾಗಿ ಪ್ರಮುಖ ಘಟನೆಗಳ ಬಗೆಗಿನ ಚಿತ್ರಸಹಿತ ವಿವರಣೆ ಇಲ್ಲಿದೆ.
Updated on: Dec 31, 2025 | 10:34 AM

ರಾಮ ಜನ್ಮ ಭೂಮಿ ಅಯೋಧ್ಯೆ ಮತ್ತೊಂದು ಈ ವರ್ಷ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ನೂತನವಾಗಿ ನಿರ್ಮಿಸಲಾದ ಶ್ರೀರಾಮ ಜನ್ಮಭೂಮಿ ದೇವಾಲಯದ 161 ಅಡಿ ಎತ್ತರದ ಸ್ವರ್ಣ ಶಿಖರದ ಮೇಲೆ ವಿಧ್ಯುಕ್ತವಾಗಿ ಕೇಸರಿ ಧರ್ಮ ಧ್ವಜವನ್ನು ಅನಾವರಣಗೊಳಿಸಿದ್ದರು. ಈ ಸಂದರ್ಭದಲ್ಲಿ ಶಂಖಗಳು ಮೊಳಗಿದವು, ದೇವಾಲಯದ ಗಂಟೆಗಳು ಬಾರಿಸಿದವು ಮತ್ತು ಸಾವಿರಾರು ಭಕ್ತರು ಭಜನೆಗಳನ್ನು ಹಾಡಿದರು. ಈ ಘಳಿಗೆಯನ್ನು ಶತಮಾನಗಳ ಗಾಯಗಳು ಮತ್ತು ನೋವು ಇಂದು ವಾಸಿಯಾಗುತ್ತಿವೆ ಎಂದು ಮೋದಿ ಬಣ್ಣಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿತ್ತು. ಕರು (Calf) ಜೊತೆ ಮೋದಿ ಕಳೆದ ಕ್ಷಣಗಳ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಶ್ರೀಲಂಕಾದಿಂದ ಹೊರಡುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ನಗರವಾದ ಅನುರಾಧಪುರದಲ್ಲಿರುವ ಜೈ ಶ್ರೀ ಮಹಾಬೋಧಿ ದೇವಾಲಯಕ್ಕೆ ಭೇಟಿ ನೀಡಿದರು. ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರು ಪ್ರಧಾನಿ ಮೋದಿ ಅವರೊಂದಿಗೆ ಹಾಜರಿದ್ದರು. ಅನುರಾಧಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರು ಮೋದಿ ಅವರೊಂದಿಗೆ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ಬೌದ್ಧ ಅನುಯಾಯಿಗಳು ಮತ್ತು ಧಾರ್ಮಿಕ ಮುಖಂಡರೊಂದಿಗೆ ಫೋಟೋ ಶೂಟ್ ಕೂಡ ಮಾಡಿಸಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಟಿಯಾಂಜಿನ್ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ಪ್ರಯಾಣಿಸಿದ್ದರು. ಇದು ಏಳು ವರ್ಷಗಳ ನಂತರ ಅವರ ಮೊದಲ ಭೇಟಿಯಾಗಿತ್ತು. ಅಧ್ಯಕ್ಷ ಷಿ ಜಿನ್ಪಿಂಗ್ ಆಯೋಜಿಸಿರುವ ಈ ಸಭೆಯು ಜಾಗತಿಕ ದಕ್ಷಿಣ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ. ವೇದಿಕೆಯಲ್ಲಿ ಜಿನ್ಪಿಂಗ್ , ಪುಟಿನ್ ಹಾಗೂ ಮೋದಿ ಇದ್ದರು.

ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಕುಂಭಮೇಳದಲ್ಲಿ ಪಾಲ್ಗೊಂಡಿದ್ದರು. ತ್ರಿವೇಣಿ ಸಂಗಮದ ಪವಿತ್ರ ನೀರಿನಲ್ಲಿ ಮಿಂದೆದ್ದಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿಯವರೊಂದಿಗೆ ಹಾಜರಿದ್ದರು. ಜನವರಿ 13 ರಂದು ಪ್ರಾರಂಭವಾದ ಮಹಾಕುಂಭದಲ್ಲಿ ಇಲ್ಲಿಯವರೆಗೆ 14 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಕೆಲವು ದಿನಗಳ ನಂತರ , ಪ್ರಧಾನಿ ನರೇಂದ್ರ ಮೋದಿ ಪಂಜಾಬ್ನ ಅದಮ್ಪುರ ವಾಯುನೆಲೆಗೆ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸಿದರು. ಭಾರತದ ಆಪರೇಷನ್ ಸಿಂಧೂರ್ ನಂತರ ಮೇ 9 ಮತ್ತು 10 ರ ಮಧ್ಯರಾತ್ರಿ ಪಾಕಿಸ್ತಾನ ದಾಳಿ ಮಾಡಲು ಪ್ರಯತ್ನಿಸಿದ ವಾಯುಪಡೆಯ ಕೇಂದ್ರಗಳಲ್ಲಿ ಅದಮ್ಪುರವೂ ಸೇರಿತ್ತು.

ಆಪರೇಷನ್ ಸಿಂಧೂರ್ ಸಂದರ್ಭ: ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್ಎಸ್ಎ ಅಜಿತ್ ದೋವಲ್, ಸಿಡಿಎಸ್ ಜನರಲ್ ಅನಿಲ್ ಚೌಹಾಣ್, ಸಶಸ್ತ್ರ ಪಡೆಗಳ ಮುಖ್ಯಸ್ಥರು ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ನಿರ್ಣಾಯಕ ಸಭೆ.

ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಬಳಿಕ ಅಮೆರಿಕ ಪ್ರವಾಸ ಕೈಗೊಂಡಿದ್ದರು.. ಟ್ರಂಪ್ ಮೋದಿಗೆ ಸ್ಮರಣಿಕೆಯಾಗಿ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದರು. ಅವರ್ ಜರ್ನಿ ಟುಗೆದರ್ ಎಂಬ ವಿಶೇಷ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಿಸ್ಟರ್ ಪ್ರೈಮ್ ಮಿನಿಸ್ಟರ್ ಯು ಆರ್ ಗ್ರೇಟ್ ಎಂದು ಬರೆಯುವ ಮೂಲಕ, ಟ್ರಂಪ್ ಸಹಿ ಮಾಡಿ ಆ ಪುಸ್ತಕವನ್ನು ಮೋದಿಗೆ ಉಡುಗೊರೆಯಾಗಿ ಕೊಟ್ಟರು. ಟ್ರಂಪ್ ಅವರ ಮೊದಲ ಅವಧಿಯನ್ನು ವಿವರಿಸುವ ಈ ಫೋಟೋಬುಕ್, 2019 ರ ಸೆಪ್ಟೆಂಬರ್ನಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ದ್ವಿಪಕ್ಷೀಯ ಭೇಟಿಯಲ್ಲಿದ್ದಾಗ ನಡೆದ ಹೌಡಿ ಮೋದಿ ಕಾರ್ಯಕ್ರಮ ಸೇರಿದಂತೆ ಪ್ರಮುಖ ಘಟನೆಗಳ ಚಿತ್ರಗಳನ್ನು ಒಳಗೊಂಡಿದೆ.

ಹರಿಯಾಣದ ಯಮುನಾನಗರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಹುಕಾಲದ ಅಭಿಮಾನಿಯೊಬ್ಬರನ್ನು ಭೇಟಿಯಾಗಿದ್ದರು. ಅಲ್ಲದೇ ಆ ಅಭಿಮಾನಿಯ 14 ವರ್ಷಗಳ ಪ್ರತಿಜ್ಞೆಯನ್ನು ಈಡೇರಿಸಿದ್ದಾರೆ. 14 ವರ್ಷಗಳ ಹಿಂದೆ ಮೋದಿ ಪ್ರಧಾನಿಯಾಗಬೇಕು ಎಂದು ರಾಂಪಾಲ್ ಕಶ್ಯಪ್ ಅತೀ ದೊಡ್ಡ ಶಪಥ ಮಾಡಿದ್ದರು.




