ತೋಟಗಾರಿಕೆ ಮೇಳದಲ್ಲಿ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ; ಸುಂದರ ಹೂಗಳು ನೋಡಿ ಮನಸೋತ ಹೆಂಗಳೆಯರು
ಬಾಗಲಕೋಟೆ ತೋಟಗಾರಿಕೆ ಮೇಳದ ಫಲಪುಷ್ಪ ಪ್ರದರ್ಶನದಲ್ಲಿ ಕಾಲಿಟ್ಟರೆ ಹೂಗಳ ಅದ್ಬುತ ಲೋಕವೇ ದರೆಗಿಳಿದಂತಿತ್ತು. ಹಚ್ಚಹಸಿರಿನ ವಿಧ ವಿಧದ ಹಣ್ಣುಗಳ ಸಾಲು ಕಣ್ಮನ ಸೆಳೆಯುತ್ತಿತ್ತು. ಮನಸೂರೆಗೊಳ್ಳುವ ಸುಂದರ ಹೂಗಳಲ್ಲಿ ಅನುಭವ ಮಂಟಪ ಅರಳಿ ನಿಂತಿತ್ತು. ಸಿರಿದಾನ್ಯದಲ್ಲಿ ಬಸವಣ್ಣನ ಮಂದಹಾಸ ಎಲ್ಲರನ್ನು ಸೆಳೆದಿತ್ತು. ಎಲ್ಲ ಸುಂದರ ದೃಶ್ಯದ ಮುಂದೆ ಹೆಂಗಳೆಯರ ಸೆಲ್ಫಿ ಆಟ ಜೋರಾಗಿತ್ತು. ತೋಟಗಾರಿಕೆ ಮೇಳದಲ್ಲಿ ಕಂಡುಬಂದ ಝಲಕ್ ಇಲ್ಲಿದೆ.