ಬಾಳೆಹಣ್ಣುಗಳನ್ನು ಎಂದಿಗೂ ಫ್ರಿಡ್ಜ್‌ನಲ್ಲಿ ಇಡಬಾರದು. ರೆಫ್ರಿಜರೇಟರ್‌ನಲ್ಲಿ ಇಟ್ಟಾಗ, ಬಾಳೆಹಣ್ಣಿನ ಸಿಪ್ಪೆ ಶೀಘ್ರವೇ ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ ಮತ್ತು ಅವುಗಳ ರುಚಿ ಕೂಡಾ ಬದಲಾಗಲು ಪ್ರಾರಂಭಿಸುತ್ತದೆ. ಬಾಳೆಹಣ್ಣನ್ನು ಶೀತ ಪರಿಸರದಲ್ಲಿ ಇಟ್ಟರೆ, ಅವುಗಳು ಬೇಗನೆ ಕೆಡಲು ಪ್ರಾರಂಭಿಸುತ್ತವೆ.
ಕಲ್ಲಂಗಡಿಯಲ್ಲಿ ನೀರಿನ ಅಂಶ ಹೇರಳವಾಗಿರುವುದರಿಂದ, ಜನ ಬೇಸಿಗೆಯಲ್ಲಿ ಹೆಚ್ಚಾಗಿ ಈ ಹಣ್ಣನ್ನೇ ತಿನ್ನಲು ಇಷ್ಟಪಡುತ್ತಾರೆ. ಮತ್ತು ಮಾರುಕಟ್ಟೆಯಿಂದ ಖರೀದಿಸಿದ ಈ ಹಣ್ಣನ್ನು ಹೆಚ್ಚಿನವರು ತಂಪಾಗಿಸಲು ಫ್ರಿಜ್‌ನಲ್ಲಿ ಇಡುತ್ತಾರೆ. ಹೀಗೆ ಈ ಹಣ್ಣನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಕಲ್ಲಂಗಡಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕಡಿಮೆಯಾಗುತ್ತವೆ ಮತ್ತು ಅದರ ಪೌಷ್ಟಿಕಾಂಶದ ಮೌಲ್ಯವೂ ಕಡಿಮೆಯಾಗುತ್ತದೆ. ಇದಕ್ಕಾಗಿಯೇ ತಜ್ಞರು ಕಲ್ಲಂಗಡಿ ಹಣ್ಣನ್ನು ರೆಫ್ರಿಜರೇಟರ್‌ನಲ್ಲಿ ಇಡದಂತೆ ಸಲಹೆ ನೀಡುತ್ತಾರೆ.
ಹಣ್ಣುಗಳ ರಾಜ ಮಾವನ್ನು ರೆಫ್ರಿಜರೇಟರ್‌ನಲ್ಲಿ ಇಡುವ ತಪ್ಪು ಮಾಡಬೇಡಿ, ಏಕೆಂದರೆ ಶೀತ ತಾಪಮಾನವು ಮಾವಿನ ಹಣ್ಣಿನ ರುಚಿ ಮತ್ತು ವಿನ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಮಾವಿನ ಹಣ್ಣಿನ ಮೇಲೆ ಕಪ್ಪು ಕಲೆಗಳು ಮೂಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ.
ಅನಾನಸ್ ಹಣ್ಣನ್ನು ಕೂಡಾ ರೆಫ್ರಿಜರೇಟರ್‌ನಲ್ಲಿ ಇಡಬಾರದು. ಫ್ರಿಡ್ಜ್‌ನಲ್ಲಿ ಇಡುವುದರಿಂದ ಈ ಹಣ್ಣಿನ ರುಚಿ ಕೆಡುತ್ತದೆ ಮತ್ತು ಶೀಘ್ರವೇ ಹಣ್ಣು ಮೃದುವಾಗುತ್ತದೆ. ಜೊತೆಗೆ ಅದರ ನೈಸರ್ಗಿಕ ಪರಿಮಳ ಸಹ ಹೋಗುತ್ತದೆ. ಹಾಗಾಗಿ ಕೋಣೆಯ ಉಷ್ಣಾಂಶದಲ್ಲಿ ಅನಾನಸ್ ಹಣ್ಣನ್ನು ಇಡುವುದರಿಂದ ಅದರ ತಾಜಾತನವನ್ನು ಕಾಪಾಡಿಕೊಳ್ಳಬಹುದು.
ಲಿಚಿ ಬೇಸಿಗೆಯಲ್ಲಿ ಹೇರಳವಾಗಿ ಸಿಗುವುದರಿಂದ ಸಾಕಷ್ಟು ಜನ ಈ ಹಣ್ಣನ್ನು ಖರೀದಿಸುತ್ತಾರೆ. ಇವುಗಳನ್ನು ಖರೀದಿಸಿದ ನಂತರ ಅವುಗಳನ್ನು ವಾರಗಟ್ಟಲೆ ತಾಜಾವಾಗಿರಿಸಲು ರೆಫ್ರಿಜರೇಟರ್‌ನಲ್ಲಿ ಇಡುತ್ತಾರೆ. ಹೀಗೆ ಮಾಡುವುದರಿಂದ ಲಿಚಿ ಹಣ್ಣು ಒಳಗಿನಿಂದ ಹಾಳಗುತ್ತದೆ. ಇದಲ್ಲದೆ ಸೇಬು, ಪಪ್ಪಾಯ, ಅವಕಾಡೊ, ಸಿಟ್ರಿಸ್ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು.