
ಅದು ನಿಜಾಮರ ಕಾಲದಿಂದಲೂ ಖ್ಯಾತಿ ಪಡೆದಿರುವ ಶ್ರೀ ಮಠ. ಆ ಮಠ ತನ್ನದೇ ಆದ ಬಡ ಬಗ್ಗರ ಸೇವೆ ಜೊತೆಗೆ ಪವಾಡಗಳಿಂದ ಹೆಸರುವಾಸಿಯಾಗಿದೆ. ನೂರಾರು ಬಡ ಮಕ್ಕಳ ಉಚಿತ ಸಾಮೂಹಿಕ ವಿವಾಹ ನಡೆಸಿಕೊಟ್ಟಿರುವ ಈ ಶ್ರೀ ಮಠದಲ್ಲಿ ರಥೋತ್ಸವದ ವೇಳೆ ಪವಾಡ ನಡೆಯುತ್ತೆ. ಶ್ರೀಗಳು ಸನ್ನೆ ಮಾಡಿದ ಬಳಿಕ ರಥೋತ್ಸವ ತನ್ನ ಮೂಲ ಸ್ಥಾನ ಸೇರುವುದೇ ಇಲ್ಲಿನ ವಿಶೇಷ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಧಾರ್ಮಿಕವಾಗಿ, ಐತಿಹಾಸಿಕ ಪ್ರಸಿದ್ದ ಪಡೆದಿರುವ ಗಬ್ಬೂರು ಶ್ರೀ ಬೂದಿಬಸವೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ತೆರೆ ಕಂಡಿದೆ. ಸಹಸ್ರಾರು ಭಕ್ತರು ಭಕ್ತಿಯ ಝೇಂಕಾರದೊಂದಿಗೆ ರಥವು ತನ್ನ ಮೂಲ ಸ್ಥಾನಕ್ಕೆ ಸೇರಿದೆ.

ಮಠದ ಪೀಠಾಧಿಪತಿ ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಶ್ರೀಬೂದಿ ಬಸವೇಶ್ವರ ಮಠದ ಮಹಾರಥೋತ್ಸವ ವೈಭವದಿಂದ ನಡೆಯಿತು. ಇಲ್ಲಿ ರಥವನ್ನು ಏಣಿ ಹಾಗೂ ಹಗ್ಗ ಸಹಾಯದಿಂದ ತೇರು ಎಳೆಯುವುದು ಎಲ್ಲಾ ಕಡೆ ನೋಡಿರುತ್ತೇವೆ. ಆದರೆ ಈ ಗಬ್ಬೂರು ಬೂದಿಬಸವೇಶ್ವರ ರಥೋತ್ಸವದ ವೈಶಿಷ್ಟತೆಯೇ ಬೇರೆ. ಬೃಹತ್ ರಥ ಪೀಠಾಧಿಪತಿ ಶ್ರೀ ಬೂದಿ ಬಸವೇಶ್ವರ ಶಿವಾರ್ಚಾಯ ಸ್ವಾಮೀಜಿ ಕೈ ಸೇನೆ ಮಾಡಿದರೆ ಮಾತ್ರ ರಥ ತೇರಿನ ಮನೆಯೊಳಗೆ ಹೋಗುತ್ತದೆ ಎನ್ನುವ ಪತ್ರೀತಿ ಹೊಂದಿದೆ.

ಬೂದಿ ಬಸವೇಶ್ವರ ಮಠದ ರಥೋತ್ಸವ ಮುಕ್ತಾಯದ ಬಳಿಕ ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಠದ ಮೇಲೆ ಬಂದು ರಥದತ್ತ ಕೈ ಬೀಸಿ ಕರೆಯುತ್ತಾರೆ. ಇದಕ್ಕೂ ಮುನ್ನ ಭಕ್ತರು ರಥೋತ್ಸವದ ವೇಳೆ ತೇರುನ್ನು ಹಗ್ಗ ಸಹಾಯದಿಂದ ಎಳೆಯಲು ಮುಂದಾಗುತ್ತಾರೆ. ಆದರೆ ತೇರು ಮಾತ್ರ ಸ್ಥಳದಿಂದ ಜಗ್ಗಲ್ಲ.

ಕ್ಷೇತ್ರದ ಮಹಿಮೆಯಂತೆ ಸ್ವಾಮೀಜಿ ಹೆಜ್ಜೆ ಹಾಕಿ ನಡೆದಾಗ ಭಕ್ತರು ಎಳೆಯುವ ತೇರು ಮುಂದೆ ಸಾಗುತ್ತೆ. ಬಳಿಕ ತೇರಿನ ಮುಂಭಾಗಕ್ಕೆ ಶ್ರೀಗಳು ಬಂದು ಸನ್ನೆ ಮಾಡಿದಾಗ ರಥ ತನ್ನ ಮೂಲ ಸ್ಥಾನಕ್ಕೆ ಬಂದು ಸೇರಿತ್ತು. ಈ ಪವಾಡ ರಥೋತ್ಸವ ನೋಡಲು ಗಣ್ಯ ಮಾನ್ಯರು ಸೇರಿ ಸಹಸ್ರಾರು ಭಕ್ತರು ಸಾಕ್ಷಿಯಾದ್ದರು.

ಕೇವಲ ರಥೋತ್ಸವ ಅಷ್ಟೇ ಅಲ್ಲ ಶ್ರೀ ಮಠ ಅನೇಕ ಸಮಾಜ ಸೇವೆ ಬಡಬಗ್ಗರ ಸೇವೆ ಮಾಡುವ ಮೂಲಕ ಭಕ್ತರ ನಂಬಿಕೆ, ಪ್ರೀತಿ ಗಳಿಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮಠದಿಂದ 201 ಬಡ ಮಕ್ಕಳಿಗೆ ಸಾಮೂಹಿಕ ಮದುವೆ ಮಾಡಿಸಿ ಸೈ ಎನಿಸಿಕೊಂಡಿದೆ.