- Kannada News Photo gallery Daali Dhananjay social service, gave new look to government school in his village
ಹುಟ್ಟೂರಿನ ಶಾಲೆಗೆ ಹೊಸ ಮೆರುಗು ಕೊಟ್ಟ ಡಾಲಿ ಧನಂಜಯ್
Daali Dhananjay: ಡಾಲಿಯ ಹುಟ್ಟೂರಾದ ಕಾಳೇನಹಟ್ಟಿಯ ಸರ್ಕಾರಿ ಶಾಲೆ ದೀನ ಸ್ಥಿತಿಯಲ್ಲಿತ್ತು. ತಾರಸಿ ಮುರಿದಿತ್ತು, ನೆಲದ ಹಾಸೆಲ್ಲ ಒಡೆದು ಹೋಗಿತ್ತು. ಮಕ್ಕಳಿಗೆ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಇದನ್ನು ನೋಡಿದ್ದ ಡಾಲಿ ಶಾಲೆಗೆ ಮರು ಜೀವ ತುಂಬುವ ಕಾರ್ಯ ಮಾಡಿದ್ದಾರೆ. ಶಾಲೆಯನ್ನು ನವೀಕರಣಗೊಳಿಸಿದ್ದಾರೆ.
Updated on:Feb 13, 2025 | 7:16 PM

ಹುಟ್ಟೂರು ಬಿಟ್ಟು ಬೆಂಗಳೂರಿನಂತಹಾ ಮಹಾನಗರಗಳಲ್ಲಿ ಜೀವನ ಕಟ್ಟಿಕೊಂಡಿರುವ ಹಲವರು ಸಿಗುತ್ತಾರೆ. ಆದರೆ ಅವರಲ್ಲಿ ಎಷ್ಟು ಮಂದಿ ಹುಟ್ಟೂರು ತಮಗೆ ಕೊಟ್ಟಿದ್ದನ್ನು, ಮರಳಿ ಊರಿಗೆ ಕೊಡುವ ಕಾರ್ಯ ಮಾಡಿದ್ದಾರೆ.

ವೃತ್ತಿಗಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಡಾಲಿ ಧನಂಜಯ್, ತಮ್ಮ ಹುಟ್ಟೂರನ್ನು ಮರೆತಿಲ್ಲ. ತಮ್ಮ ಏಳ್ಗೆಯ ಭಾಗವಾಗಿರುವ ಹುಟ್ಟೂರಿಗೆ ಏನಾದರೂ ಮರಳಿ ಕೊಡಬೇಕು ಎಂದುಕೊಂಡು, ಇದೀಗ ಊರಿನ ಶಾಲೆಯನ್ನು ಜೀರ್ಣೋದ್ಧಾರ ಮಾಡಿಸಿದ್ದಾರೆ.

ಡಾಲಿಯ ಹುಟ್ಟೂರಾದ ಕಾಳೇನಹಟ್ಟಿಯ ಸರ್ಕಾರಿ ಶಾಲೆ ದೀನ ಸ್ಥಿತಿಯಲ್ಲಿತ್ತು. ತಾರಸಿ ಮುರಿದಿತ್ತು, ನೆಲದ ಹಾಸೆಲ್ಲ ಒಡೆದು ಹೋಗಿತ್ತು. ಮಕ್ಕಳಿಗೆ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಇದನ್ನು ನೋಡಿದ್ದ ಡಾಲಿ ಶಾಲೆಗೆ ಮರು ಜೀವ ತುಂಬುವ ಕಾರ್ಯ ಮಾಡಿದ್ದಾರೆ.

ತಮ್ಮೂರಿಗೆ ಸರ್ಕಾರಿ ಶಾಲೆಗೆ ಬಣ್ಣ ಹೊಡೆಸಿ, ಒಡೆದಿದ್ದ ತಾರಸಿಯನ್ನು ಸರಿ ಮಾಡಿಸಿ, ನೆಲ ಹಾಸನ್ನು ಮತ್ತೊಮ್ಮೆ ಹಾಕಿಸಿ. ಶುದ್ಧ ಕುಡಿಯುವ ನೀರಿಗೆ ವಾಟರ್ ಫಿಲ್ಟರ್ಗಳನ್ನು ಅಳವಡಿಸಿ ಕೊಟ್ಟಿದ್ದಾರೆ.

ಮದುವೆಗೆ ಮುಂಚೆ ಈ ಸಾಮಾಜಿಕ ಕಾರ್ಯಕ್ಕೆ ಡಾಲಿ ಕೈ ಹಾಕಿದ್ದರು. ಅದರಂತೆ ಇಂದು (ಫೆಬ್ರವರಿ 13) ಡಾಲಿ ಧನಂಜಯ ತಮ್ಮೂರಿನ ನವೀಕೃತ ಶಾಲೆಗೆ ಹೋಗಿ ಎಲ್ಲವನ್ನೂ ಪರಿಶೀಲಿಸಿದ್ದಲ್ಲದೆ, ಶಾಲೆಯ ಮಕ್ಕಳೊಡನೆ ಮಾತನಾಡಿ ಬಂದಿದ್ದಾರೆ. ಇಲ್ಲಿವೆ ಚಿತ್ರಗಳು.

Daali Dhananjay7
Published On - 7:08 pm, Thu, 13 February 25



















