Ganesh Chaturthi 2022: ಅದ್ಧೂರಿ ಗಣೇಶೋತ್ಸವ ನಡೆಯುವ ಭಾರತದ ಐದು ಸ್ಥಳಗಳು

ಗಣಪತಿ ಬಪ್ಪಾ ಮೋರಿಯಾ ಅವರ ಉತ್ಸಾಹಭರಿತ ಪಠಣಗಳೊಂದಿಗೆ ಭಾರತದಾದ್ಯಂತ ವಿಜ್ರಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಈ ಪೈಕಿ ಐದು ನಗರಗಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

TV9 Web
| Updated By: Rakesh Nayak Manchi

Updated on:Aug 31, 2022 | 10:45 AM

ಗಣಪತಿ ಬಪ್ಪಾ ಮೋರಿಯಾ ಎಂಬ ಉತ್ಸಾಹಭರಿತ ಪಠಣಗಳೊಂದಿಗೆ ಭಾರತದಾದ್ಯಂತ ವಿಜ್ರಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಈ ಪೈಕಿ ಐದು ನಗರಗಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಆ ಐದು ನಗರಗಳು ಈ ಕೆಳಗಿನಂತಿವೆ.

Ganesh Chaturthi 2022 Five places in India where grand Ganesh Chaturthi celebration will be held

1 / 6
ಮುಂಬೈ: ಗಣೇಶ ಚತುರ್ಥಿ ಎಂದಾಕ್ಷಣ ಮೊದಲು ಮನದಲ್ಲಿ ಮೂಡುವುದು ಮುಂಬೈ. ಈ ಹಬ್ಬವನ್ನು 1893 ರಲ್ಲಿ ಮುಂಬೈನಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಬ್ರಿಟಿಷರ ವಿರುದ್ಧ ಸಾಮಾನ್ಯ ಜನರನ್ನು ಒಗ್ಗೂಡಿಸುವ ಉದ್ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರು ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು. ಮುಂಬೈಚಾ ರಾಜಾ, ಗಣೇಶ್ ಗಲ್ಲಿ, ಜಿಎಸ್‌ಬಿ ಸೇವಾ ಗಣೇಶ್ ಮಂಡಲ್, ಅಂಧೇರಿಚಾ ರಾಜಾ ಮತ್ತು ಲಾಲ್‌ಬಾಗ್ಚಾ ರಾಜಾ ನೀವು ಖಂಡಿತವಾಗಿ ಭೇಟಿ ನೀಡಲೇಬೇಕಾದ ಮುಂಬೈನ ಕೆಲವು ಪ್ರಸಿದ್ಧ ಗಣಪತಿ ಪಂಡಲ್‌ಗಳಾಗಿವೆ.

Ganesh Chaturthi 2022 Five places in India where grand Ganesh Chaturthi celebration will be held

2 / 6
Ganesh Chaturthi 2022 Five places in India where grand Ganesh Chaturthi celebration will be held

ಹೈದರಾಬಾದ್: ಅದ್ಧೂರಿ ಗಣೇಶೋತ್ಸವವನ್ನು ಕಾಣುವ ದಕ್ಷಿಣ ಭಾರತದ ಮತ್ತೊಂದು ಪ್ರಮುಖ ಸ್ಥಳವಾಗಿದೆ. ನಗರದಲ್ಲಿ ಸಾಮಾನ್ಯವಾಗಿ ಸುಮಾರು 75,000 ಗಣೇಶ ಮಂಟಪಗಳು ಕಂಡುಬರುತ್ತವೆ. ಬಾಲಾಪುರ, ಚೈತನ್ಯಪುರಿ, ದುರ್ಗಂ ಚೆರುವು, ಖೈರತಾಬಾದ್, ಓಲ್ಡ್ ಸಿಟಿ ಮತ್ತು ನ್ಯೂ ನಾಗೋಲ್‌ನಲ್ಲಿರುವ ಗಣೇಶ ಮಂಟಪಗಳಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ.

3 / 6
Ganesh Chaturthi 2022 Five places in India where grand Ganesh Chaturthi celebration will be held

ಹುಬ್ಬಳ್ಳಿ: ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆಯುವ ಗಣೇಶೋತ್ಸವವು ಅತ್ಯಂತ ವಿಜ್ರಂಭಣೆಯಿಂದ ಕೂಡಿರುತ್ತದೆ. ಹುಬ್ಬಳ್ಳಿಯಲ್ಲಿ ಗಣೇಶನ ತಾಯಿ ಪಾರ್ವತಿ ದೇವಿಯನ್ನೂ ಪೂಜಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಬಹಳಷ್ಟು ಮಹಿಳೆಯರು ಉಪವಾಸ ಮಾಡುತ್ತಾರೆ ಮತ್ತು ಸಮೃದ್ಧ ವರ್ಷಗಳಿಗಾಗಿ ಪೂಜಿಸುತ್ತಾರೆ.

4 / 6
Ganesh Chaturthi 2022 Five places in India where grand Ganesh Chaturthi celebration will be held

ದೆಹಲಿ: ಇಲ್ಲಿನ ಗಣೇಶ ಚತುರ್ಥಿ ನಿಮಗೆ ಶ್ರೀಮಂತ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವಿಧಿಗಳನ್ನು ಒದಗಿಸುತ್ತದೆ. ಸಂಗೀತ, ನೃತ್ಯಗಳು ಮತ್ತು ಸುಂದರವಾದ ಮಂಟಪಗಳು ಮತ್ತು ಹಬೆಯಾಡುವ ಬಿಸಿ ಮತ್ತು ಸುವಾಸನೆಯ ಪ್ರಸಾದದೊಂದಿಗೆ ಆಚರಿಸಲಾಗುತ್ತದೆ. ನೇತಾಜಿ ಸುಭಾಷ್ ಪ್ಲೇಸ್ ಗ್ರೌಂಡ್, ಪಿತಾಂಪುರ, ಡಿಡಿಎ ಮಿನಿ ಸ್ಟೇಡಿಯಂ, ಲಕ್ಷ್ಮಿ ನಗರ, ಶ್ರೀ ವಿನಾಯಕ ಮಂದಿರ ಮಾರ್ಗ ಮತ್ತು ಸರೋಜಿನಿ ನಗರದಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ.

5 / 6
Ganesh Chaturthi 2022 Five places in India where grand Ganesh Chaturthi celebration will be held

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಗಣೇಶೋತ್ಸವದ ಹಬ್ಬವನ್ನು ರೋಮಾಂಚಕ ಛಾಯೆಗಳು ಮತ್ತು ವೈಭವದಿಂದ ಆಚರಿಸುತ್ತಾ ಬರಲಾಗುತ್ತಿದೆ. ಅತ್ಯಂತ ಪ್ರಸಿದ್ಧವಾದ ಗಣಪತಿ ಮಂಟಪಗಳನ್ನು ಕಾಣಬಹುದು. ಪ್ರಸಿದ್ಧ ಗಣಪತಿ ಮಂಟಪಗಳೆಂದರೆ- ಕೇಸರಿವಾಡ ಗಣಪತಿ, ಕಸ್ಬಾ ಗಣಪತಿ, ತಾಂಬಡಿ ಜೋಗೇಶ್ವರಿ ಗಣಪತಿ, ಗುರೂಜಿ ತಾಲಿಮ್ ಮತ್ತು ತುಳಸಿ ಬಾಗ್ ಗಣಪತಿ.

6 / 6

Published On - 10:45 am, Wed, 31 August 22

Follow us
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ