AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ 13 ಅಡಿ ಎತ್ತರದ ಗಂಟೆ ಗಣೇಶ ಪ್ರತಿಷ್ಠಾಪನೆ

ದಾವಣಗೆರೆಯಲ್ಲಿ, ಹಿಂದೂ ಯುವ ಶಕ್ತಿ ಸಮಿತಿಯು 9555 ಗಂಟೆಗಳನ್ನು ಬಳಸಿ 13 ಅಡಿ ಎತ್ತರದ ವಿಶೇಷ ಗಣೇಶನ ಪ್ರತಿಮೆಯನ್ನು ನಿರ್ಮಿಸಿದೆ. ಶತಮಾನಗಳಿಂದ ಗಣೇಶ ವಿಗ್ರಹಗಳನ್ನು ತಯಾರಿಸುತ್ತಿರುವ ಜಾಧವ್ ಕುಟುಂಬದ ಸಹಾಯದಿಂದ ಈ ಪ್ರತಿಮೆ ನಿರ್ಮಾಣವಾಗಿದೆ. ಈ ವರ್ಷದ ವಿಶೇಷ ಗಣೇಶನ ಪ್ರತಿಷ್ಠಾಪನೆಯು ದಾವಣಗೆರೆಯಲ್ಲಿ ವ್ಯಾಪಕ ಆಚರಣೆಯನ್ನು ಕಂಡಿದೆ, ಮತ್ತು ಜಿಲ್ಲೆಯಾದ್ಯಂತ 2361 ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ.

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: ವಿವೇಕ ಬಿರಾದಾರ|

Updated on: Aug 28, 2025 | 11:18 AM

Share
ದಾವಣಗೆರೆ ಜಿಲ್ಲೆಯಲ್ಲಿನ ಕೆಲ ಕುಟುಂಬಗಳು ಶತಮಾನಗಳಿಂದ ಗಣೇಶ ವಿಗ್ರಹಗಳನ್ನು ತಯಾರು ಮಾಡುತ್ತಿವೆ. ಈ ಕುಟುಂಬಗಳು ಸೇರಿಕೊಂಡು ಹಿಂದೂ ಯುವ ಶಕ್ತಿ ಸಮಿತಿ ರಚಿಸಿಕೊಂಡಿದ್ದು, ವಿವಿಧ ರೂಪಗಳಲ್ಲಿ ತಯಾರಿಸಿದ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುತ್ತಿವೆ. ಈ ಸಲ ನಂದಿ ಕೊರಳಲ್ಲಿ ಕಟ್ಟುವ ಗಂಟೆಯಿಂದ ಮಾಡಿದ ಗಣಪನನ್ನು ಪ್ರತಿಷ್ಠಾಪಿಸಿದೆ.

1 / 5
ಈ ಗಣಪತಿ ಸಮಿತಿ ದಾವಣಗೆರೆಗೆ ಪ್ರಸಿದ್ಧ ಪಡೆದಿದೆ. ಪ್ರತಿ ವರ್ಷವೂ ವಿಶೇಷವಾಗಿ ಗಣಪತಿ ವಿಗ್ರಹಗಳನ್ನು ತಯಾರು ಮಾಡುತ್ತದೆ. ರುದ್ರಾಕ್ಷಿ, ತೆಂಗಿಕಾಯಿ ಸೇರಿದಂತೆ ಹತ್ತಾರು  ಸಾಮಗ್ರಿಗಳಿಂದ ಗಣೇಶ ಮಾಡಿ ಗಮನ ಸೆಳೆದಿದೆ. ಈ ವರ್ಷ ಗಂಟೆ ಗಣಪ ನಿರ್ಮಾಣ ಮಾಡಲಾಗಿದೆ.‌ ಸುಮಾರು 3.5 ಕ್ವಿಂಟಾಲ್ ತೂಕದ ಗಂಟೆಗಳಲ್ಲಿ ಗಣೇಶ ವಿಗ್ರಹ ನಿರ್ಮಾಣ ಮಾಡಲಾಗಿದೆ. ನಂದಿ ಅಥವಾ ಹಸುವಿನ ಕೊರಳಲ್ಲಿ ಕಟ್ಟುವ ಗಂಟೆಯಿಂದ ಗಣೇಶ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.

2 / 5
ದಾವಣಗೆರೆ ನಗರದ ತೋಗಟವೀರ ಕಲ್ಯಾಣ ಮಂಟಪದಲ್ಲಿ ಹಿಂದು ಯುವ ಶಕ್ತಿ ಬಳಗ ಈ ವಿಶೇಷ ಗಣೇಶನನ್ನು ಪ್ರತಿಷ್ಠಾಪಿಸಿದೆ. 9555 ಗಂಟೆಗಳ ಬಳಕೆ ಮಾಡಿ 13 ಅಡಿ ಎತ್ತರ, 8.5 ಅಡಿ ಅಗಲವಿರುವ ಗಣೇಶ ವಿಗ್ರಹವನ್ನು 10 ಜನ ಕಲಾವಿದರು 15 ದಿನಗಳ ಕಾಲ ಶ್ರಮ ಪಟ್ಟು ನಿರ್ಮಿಸಿದ್ದಾರೆ. 11 ದಿನಗಳ‌ ಕಾಲ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ.

3 / 5
ದಾವಣಗೆರೆಯಲ್ಲಿರವ ಜಾಧವ್ ಎಂಬ ಕುಟುಂಬ ಶತಮಾನಗಳಿಂದ ಗಣೇಶ ವಿಗ್ರಹ ತಯಾರು ಮಾಡುತ್ತಿದೆ. ಇವರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಹಾಗೂ ಚಿಗಟೇರಿಯಿಂದ ಮಣ್ಣ ತಂದು ಗಣೇಶ ವಿಗ್ರಹ ಮಾಡಿದೆ. ಆದರೆ, ಅವರ ಆರ್ಥಿಕ ಸ್ಥಿತಿ ಮಾತ್ರ ಬದಲಾಗಿಲ್ಲ. ಆದರೆ, ಗಣೇಶ ವಿಗ್ರಹ ನಿರ್ಮಾಣ ಕಾರ್ಯ ಮಾತ್ರ ನಿಲ್ಲಿಸಿಲ್ಲ.

4 / 5
ದಾವಣಗೆರೆ ಜಿಲ್ಲೆಯಲ್ಲಿ 2361 ಕಡೆ ಗಣೇಶ ಪ್ರತಿಷ್ಠಾಪನೆಗೆ‌ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಅತಿ ಹೆಚ್ಚು ದಾವಣಗೆರೆ ಹಾಗೂ ಚನ್ನಗಿರಿಯಲ್ಲಿ ಗಣೇಶ್ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ದಾವಣಗೆರೆ ನಗರದಲ್ಲಿ 28 ಸೂಕ್ಷ್ಮ,  5 ಅತಿ ಸೂಕ್ಷ್ಮ ಸೇರಿ 660 ಕಡೆ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 159 ಸೂಕ್ಷ್ಮ ಮತ್ತು 13 ಅತಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಜಿಲ್ಲೆಯಾದ್ಯಂತ ಗರಿಷ್ಠ 21 ದಿನ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿ. ಯಾವುದೇ ರೀತಿ ತೊಂದರೆ ಆಗದಂತೆ ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.

5 / 5
ಬಸವರಾಜ್​ ದೊಡ್ಡಮನಿ, ದಾವಣಗೆರೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Follow Us
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ

ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ

ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ

ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!

ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ

ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು

ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು

ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ

SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್