ಧಾರವಾಡ: ಗರಗದ ಜಗದ್ಗುರು ಮಡಿವಾಳ ಶಿವಯೋಗಿಗಳ ವಿಶಿಷ್ಟ ಜಾತ್ರೆ, ಫೋಟೋಸ್​ ನೋಡಿ

| Updated By: ವಿವೇಕ ಬಿರಾದಾರ

Updated on: Feb 16, 2025 | 10:12 AM

ಗರಗ ಗ್ರಾಮದಲ್ಲಿ ಜಗದ್ಗುರು ಮಡಿವಾಳ ಶಿವಯೋಗಿಗಳ 144ನೇ ಪುಣ್ಯಾರಾಧನೆ ಹಾಗೂ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಮಠದ ಮಹಾದ್ವಾರ, ಕಲ್ಯಾಣ ಮಂಟಪ ಲೋಕಾರ್ಪಣೆ ಕೂಡ ನಡೆಯಿತು. ಜಾತ್ರೆ ಭಕ್ತರಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಯ ಅನುಭವವನ್ನು ನೀಡಿತು.

1 / 6
ಧಾರವಾಡ ತಾಲೂಕಿನ ಗರಗ ಗ್ರಾಮದ ಪವಾಡ ಪುರುಷ ಶ್ರೀ ಜಗದ್ಗುರು ಮಡಿವಾಳ ಶಿವಯೋಗಿಗಳ 144ನೇ ಪುಣ್ಯಾರಾಧನೆ ಹಾಗೂ ಮಹಾರಥೋತ್ಸವ ಶನಿವಾರ ಜರುಗಿತು. ನಾಡಿನ ವಿವಿಧ ಮಠಾಧೀಶರು ಹಾಗೂ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ರಥೋತ್ಸವ ನಡೆಯಿತು. ಪ್ರತಿವರ್ಷವೂ ಈ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದಾದರೂ ಈ ಬಾರಿ ಇದಕ್ಕೊಂದು ವಿಶೇಷತೆ ಇದೆ.

2 / 6
144 ವರ್ಷಗಳ ಹಿಂದೆ ನಡೆದಿದ್ದ ಮಹಾಕುಂಭ ಮೇಳದ ಸಂದರ್ಭದಲ್ಲಿಯೇ ಪವಾಡ ಪುರುಷ ಶ್ರೀ ಜಗದ್ಗುರು ಮಡಿವಾಳ ಶಿವಯೋಗಿಗಳು ಲಿಂಗೈಕ್ಯರಾಗಿದ್ದರು. ಅವರು ಲಿಂಗೈಕ್ಯರಾಗಿದ್ದ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಮಹಾಕುಂಭ ಮೇಳ ನಡೆದಿತ್ತು. ಈ ಬಾರಿ ಅವರ 144 ನೇ ಪುಣ್ಯಾರಾಧನೆ ಆಚರಿಸಲಾಗುತ್ತಿದ್ದು, ಇದೀಗ ಪ್ರಯಾಗ್ ರಾಜ್​ನಲ್ಲಿ ಮಹಾಕುಂಭ ಮೇಳ ನಡೆದಿದೆ. ಇದರಿಂದಾಗಿ ಈ ಬಾರಿಯ ಜಾತ್ರೆಗೆ ವಿಶೇಷತೆ ಇದೆ.

3 / 6

ಮಧ್ಯಾಹ್ನ ಮಹಾಪ್ರಸಾದಕ್ಕೆ ಚಾಲನೆ ಸಿಕ್ಕ ಬಳಿಕ ನಾಡಿನ ಹಲವಾರು ಶ್ರೀಗಳ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥದ ಮುಂದೆ ಉಚ್ಛಾಯ ಚಲಿಸುತ್ತಿದ್ದರೆ, ಅದರ ಹಿಂದೆ ಭಕ್ತರು ರಥವನ್ನು ಎಳೆದು ಭಕ್ತಿ ಪ್ರದರ್ಶಿಸುತ್ತಿದರು.

144 ವರ್ಷಗಳ ಹಿಂದೆ ನಡೆದಿದ್ದ ಮಹಾಕುಂಭ ಮೇಳದ ಸಂದರ್ಭದಲ್ಲಿಯೇ ಪವಾಡ ಪುರುಷ ಶ್ರೀ ಜಗದ್ಗುರು ಮಡಿವಾಳ ಶಿವಯೋಗಿಗಳು ಲಿಂಗೈಕ್ಯರಾಗಿದ್ದರು. ಅವರು ಲಿಂಗೈಕ್ಯರಾಗಿದ್ದ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಮಹಾಕುಂಭ ಮೇಳ ನಡೆದಿತ್ತು. ಈ ಬಾರಿ ಅವರ 144 ನೇ ಪುಣ್ಯಾರಾಧನೆ ಆಚರಿಸಲಾಗುತ್ತಿದ್ದು, ಇದೀಗ ಪ್ರಯಾಗ್ ರಾಜ್​ನಲ್ಲಿ ಮಹಾಕುಂಭ ಮೇಳ ನಡೆದಿದೆ. ಇದರಿಂದಾಗಿ ಈ ಬಾರಿಯ ಜಾತ್ರೆಗೆ ವಿಶೇಷತೆ ಇದೆ. ಮಧ್ಯಾಹ್ನ ಮಹಾಪ್ರಸಾದಕ್ಕೆ ಚಾಲನೆ ಸಿಕ್ಕ ಬಳಿಕ ನಾಡಿನ ಹಲವಾರು ಶ್ರೀಗಳ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥದ ಮುಂದೆ ಉಚ್ಛಾಯ ಚಲಿಸುತ್ತಿದ್ದರೆ, ಅದರ ಹಿಂದೆ ಭಕ್ತರು ರಥವನ್ನು ಎಳೆದು ಭಕ್ತಿ ಪ್ರದರ್ಶಿಸುತ್ತಿದರು.

4 / 6
ಈ ವೇಳೆ ಕರಡಿ ಮಜಲು, ಭಜನೆ, ಝಾಂಜ್ ಮೇಳ ಸೇರಿದಂತೆ ವಿವಿಧ ಬಗೆಯ ಕಲೆಗಳ ಅನಾವರಣ ಕಂಡು ಬಂತು. ಇನ್ನು, ಮಕ್ಕಳು ತಮ್ಮ ತಮ್ಮ ತಂದೆ, ಅಣ್ಣ, ಮಾವನ ಮೇಲೆ ಕುಳಿತು ಜಾತ್ರೆಯ ಸೊಬಗನ್ನು ಸವಿಯುತ್ತಿದ್ದರೇ, ಮಹಿಳೆಯರು ಕಟ್ಟಡಗಳ ಮೇಲೆ ನಿಂತು ರಥೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಂಡರು. ಎಲ್ಲ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾಭಾವವನ್ನು ಅನುಭವಿಸಿದರು. ಇನ್ನು ಜಾತ್ರೆಗೆ ಬಂದು ತಮಗೆ ಬೇಕಾದ ವರವನ್ನು ಕೇಳಿದರೆ ಅದು ಈಡುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಇದೇ ಕಾರಣಕ್ಕೆ ಇಲ್ಲಿಗೆ ಭಕ್ತರು ಪ್ರತಿವರ್ಷ ತಪ್ಪದೇ ಬಂದು, ಮಡಿವಾಳೇಶ್ವರನ ದರ್ಶನ ಹಾಗೂ ಆಶೀರ್ವಾದ ಪಡೆದುಕೊಂಡು ಹೋಗುತ್ತಾರೆ.

5 / 6
ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ಮುಜರಾಯಿ ಇಲಾಖೆ ಸೇರಿದಂತೆ ವಿವಿಧ ಅನುದಾನದಡಿ ಶ್ರೀಮಠವನ್ನು ಅಭಿವೃದ್ಧಿಪಡಿಸಲಾಗಿದೆ. ಮಠದ ಎದುರು ನಿರ್ಮಿಸಿರುವ ಮಹಾದ್ವಾರ, ಕಲ್ಯಾಣ ಮಂಟಪ ಹಾಗೂ ಗುರುಮಠ, ಶ್ರೀಮಠದ ಮಹಾದ್ವಾರ, ರಥೋತ್ಸವಕ್ಕೆ ಕಳಸಾರೋಹಣ, 1500 ಜನ ಕುಳಿತುಕೊಳ್ಳುವಷ್ಟು ವಿಶಾಲವಾದ ಕಲ್ಯಾಣ ಮಂಟಪ, 12 ಯಾತ್ರಿ ನಿವಾಸ ಕೊಠಡಿಗಳು, ಶ್ರೀ ಗುರು ಮಡಿವಾಳೇಶ್ವರ ಪವಾಡ ಬಾವಿ ಹಾಗೂ ನಿರಂತರ ಅನ್ನದಾಸೋಹ ಕೊಠಡಿ, ಮುಖ್ಯ ಕಚೇರಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಇದೇ ವೇಳೆ ಲೋಕಾರ್ಪಣೆಗೊಳಿಸಲಾಯಿತು.

6 / 6
ಮಹಾರಥೋತ್ಸವದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಈಗ ಬೇಸಿಗೆ ಕಾಲ ಶುರುವಾಗಿದೆ. ಹೀಗಾಗಿ ಹೊಲದಲ್ಲಿ ಯಾವುದೇ ಕೆಲಸಗಳಿರುವುದಿಲ್ಲ. ಇದುವರೆಗೂ ದುಡಿದು ದಣಿದ ದೇಹಗಳಿಗೆ ಕೊಂಚ ವಿಶ್ರಾಂತಿ, ಕೊಂಚ ಮನರಂಜನೆ ಅವಶ್ಯಕ. ಇಂಥ ಸಂದರ್ಭದಲ್ಲಿ ಜಾತ್ರೆಗಳು ಜನರಿಗೆ ಖುಷಿಯನ್ನು ಕೊಡುತ್ತವೆ. ಒಟ್ಟಿನಲ್ಲಿ ನಾವು ಎಷ್ಟೇ ಆಧುನಿಕ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಅಂದುಕೊಂಡರೂ, ಸಾಂಪ್ರದಾಯಿಕ ಹಾಗೂ ಜಾನಪದ ಬದುಕನ್ನು ಬಿಡಲು ಸಿದ್ಧರಿಲ್ಲ ಅನ್ನೋದಕ್ಕೆ ಇಂಥ ಜಾತ್ರೆಗಳೇ ಸಾಕ್ಷಿ.