Garden Hacks: ನಿಮ್ಮ ಮನೆಯ ಗಾರ್ಡನ್​​​ಗಾಗಿ ಇಲ್ಲಿವೆ ಸೂಪರ್ ಹ್ಯಾಕ್ಸ್

Updated on: Jan 22, 2023 | 12:08 PM

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾಕಷ್ಟು ವಿಡಿಯೋಗಳು ವೈರಲ್​​ ಆಗುತ್ತಾ ಇರುತ್ತದೆ. ಹಾಗೆಯೇ ಮನೆಯ ಗಾರ್ಡನಿಂಗ್​​ಗೆ ಸಂಬಂಧಪಟ್ಟ ಹಲವಾರು ಪೋಸ್ಟ್​​ಗಳನ್ನು ಕೂಡ ನೋಡಿರುತ್ತೀರಿ.

1 / 6

2 / 6

ಮೊಟ್ಟೆ ಚಿಪ್ಪುನಲ್ಲಿ ಬೀಜ ಹಾಕಿ ಮೊಳಕೆ ಬರಿಸುವುದು. ಇಂತಹ ವಿಡಿಯೋಗಳನ್ನು ನೀವೂ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ. ಜೊತೆಗೆ ನೀವೂ ಕೂಡ ಮನೆಯಲ್ಲಿ ಪ್ರಯತ್ನಿಸಿ ಇರಬಹುದು. ಆದರೆ ಈ ಹ್ಯಾಕ್‌ನ ಹಿಂದಿನ ಕಲ್ಪನೆಯೆಂದರೆ, ಮೊಳಕೆಗೆ ಮಿಶ್ರಗೊಬ್ಬರವನ್ನು ಪಡೆಯಲು ನೀವು ಮೊಟ್ಟೆ ಚಿಪ್ಪನ್ನು ಮರುಬಳಕೆ ಮಾಡಬಹುದು. ಮೊಟ್ಟೆಯ ಚಿಪ್ಪು ಸಣ್ಣ ಸಸ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತದೆ.

3 / 6

ಬಾಳೆ ಸಿಪ್ಪೆಯ ರಸಗೊಬ್ಬರ: ಬಾಳೆಹಣ್ಣು ತಿಂದ ನಂತರ ಅದರ ಸಿಪ್ಪೆಯನ್ನು ಎಸೆಯುವ ಬದಲು ನೀವು ಬಾಳೆಹಣ್ಣಿನ ಸಿಪ್ಪೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತು ಒಂದು ಡಬ್ಬದಲ್ಲಿ ನೀರಿನಲ್ಲಿ ನೆನೆಸಿಡಿ. ಇದು ಸಸ್ಯಗಳ ಬೆಳವಣೆಗೆಗೆ ಬೇಕಾಗುವ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ನೀಡುತ್ತದೆ.

4 / 6

ಕಾಫಿಯ ಜರಟಾ ಅಥವಾ ಜಗಟು: ನೀವು ಕಾಫಿ ಮಾಡಿಕೊಂಡ ನಂತರ ಅದನ್ನು ಪುಡಿ ಅಥವಾ ಜಗಟನ್ನು ನೀವು ಬಿಸಾಕುವ ಬದಲು, ಗಿಡಗಳಿಗೆ ಬಳಸಬಹುದು. ಇದು ನಿಮ್ಮ ಗಾರ್ಡನ್​​ನಲ್ಲಿ ಇರುವೆ, ಚಿಗಟೆ, ಸೊಳ್ಳೆಗಳು ಹಾಗೂ ಯಾವುದೇ ಕೀಟಗಳು ಬರದಂತೆ ನೋಡಿಕೊಳ್ಳುತ್ತದೆ.

5 / 6

ಆಲೂಗಡ್ಡೆಯಲ್ಲಿ ಗುಲಾಬಿ ಗಿಡ ನೆಡುವುದು: ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಡಿಯೋಗಳು ಸಾಕಷ್ಟು ಹರಿದಾಡುತ್ತಿರುತ್ತವೆ. ಇದು ನಿವಾಗಿಯೂ ಪ್ರಯೋಜನಕಾರಿಯೇ ಎಂಬುದು ಸಾಕಷ್ಟು ಜನರಿಗೆ ಕಾಡುವ ಪ್ರಶ್ನೆಯಾಗಿದೆ. ಆಲೂಗಡ್ಡೆಯಲ್ಲಿ ಎಥಿಲೀನ್ ಸಮೃದ್ದವಾಗಿದ್ದು, ಇದು ಗಿಡಗಳ ಬೆಳವಣಿಗೆಗೆ ಸಹಾಯಕವಾಗಿದೆ.

6 / 6

ಟೀಲೈಟ್ ಮೇಣದಬತ್ತಿ ಬಳಸುವುದು: ಇದು ಸಾಮಾನ್ಯವಾಗಿ ಗೊತ್ತೇ ಇರುವ ವಿಷಯ. ಹೈಸ್ಕೂಲ್​​ನ ಭೌತಶಾಸ್ತ್ರದಲ್ಲಿ ಹಸಿರು ಮನೆ ಪರಿಣಾಮಗಳ ಬಗ್ಗೆ ನೀವು ಕೇಳಿರುತ್ತೀರಿ. ಈ ರೀತಿಯಾಗಿ ಟೀಲೈಟ್ ಮೇಣದಬತ್ತಿಯನ್ನು ಬಳಸುವುದರಿಂದ ನಿಮ್ಮ ಹಸಿರುಮನೆಯ ಸುತ್ತಲೂ ಈ ಅದ್ಭುತವಾದ ಶಾಖವನ್ನು ಹೊರಸೂಸುತ್ತದೆ ಮತ್ತು ಸಸ್ಯಗಳನ್ನು ಬೆಚ್ಚಗಾಗಿಸುತ್ತದೆ ಎಂಬುದು ಕಲ್ಪನೆ.

Published On - 12:08 pm, Sun, 22 January 23

Loading...
Unable to load recommendations.
Follow Us