- Kannada News Photo gallery Cricket photos Athiya Shetty KL Rahul wedding Festivities begin at Suniel Shettys farmhouse
KL Rahul Athiya Shetty Wedding: ಅಥಿಯಾ- ರಾಹುಲ್ ಮದುವೆ ಸಂಭ್ರಮ ಶುರು; ಅಥಿತಿಗಳು ಫೋನ್ ಬಳಸದಂತೆ ವಿನಂತಿ
KL Rahul Athiya Shetty Wedding: ಈ ವಿವಾಹ ಸಮಾರಂಭದಲ್ಲಿ ಕೇವಲ 100 ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದ್ದು, ಇತರ ಕೆಲವು ಸೆಲೆಬ್ರಿಟಿಗಳಂತೆ, ಅಥಿಯಾ ಮತ್ತು ಕೆಎಲ್ ರಾಹುಲ್ ಮದುವೆಗೆ ಬರುವ ಅತಿಥಿಗಳಿಗೆ ಫೋನ್ ಬಳಸದಂತೆ ವಿನಂತಿಸಿದ್ದಾರೆ.
Updated on:Jan 22, 2023 | 12:37 PM

ವರ್ಷಗಳಿಂದ ಪ್ರೇಮಿಗಳಾಗಿ ಕೈ ಕೈ ಹಿಡಿದು ಸುತ್ತಾಡಿದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಹಾಗೂ ನಟಿ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಈ ಪ್ರಣಯ ಪಕ್ಷಿಗಳ ವಿವಾಹ ಸಮಾರಂಭ ನಡೆಯಲಿದೆ. ವಿವಾಹ ಪೂರ್ವ ಕಾರ್ಯಕ್ರಮಗಳು ಇಂದು (ಜನವರಿ 22) ಆರಂಭವಾಗಲಿದ್ದು, ಈ ಜೋಡಿಗಳ ವಿವಾಹ ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದೆ.

ಈ ವಿವಾಹ ಸಮಾರಂಭದಲ್ಲಿ ಕೇವಲ 100 ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದ್ದು, ಇತರ ಕೆಲವು ಸೆಲೆಬ್ರಿಟಿಗಳಂತೆ, ಅಥಿಯಾ ಮತ್ತು ಕೆಎಲ್ ರಾಹುಲ್ ಮದುವೆಗೆ ಬರುವ ಅತಿಥಿಗಳಿಗೆ ಫೋನ್ ಬಳಸದಂತೆ ವಿನಂತಿಸಿದ್ದಾರೆ.

ಹಾಗಾಗಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗುವ ಸಾಧ್ಯತೆಗಳು ಕಡಿಮೆ. ಜಾಕಿ ಶ್ರಾಫ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ ಮುಂತಾದ ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದಿದೆ.

ಅಥಿಯಾ ಮತ್ತು ಕೆಎಲ್ ರಾಹುಲ್ ಸೋಮವಾರ (ಜನವರಿ 23) ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಖಂಡಾಲಾದ ಫಾರ್ಮ್‌ಹೌಸ್‌ನಲ್ಲಿ ಮದುವೆ ಮಂಟಪವನ್ನು ಅಲಂಕರಿಸಲಾಗಿದ್ದು, ಅದರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಅಥಿಯಾ ಅವರ ಸ್ನೇಹಿತರು, ಸಹೋದರ ಅಹಾನ್ ಶೆಟ್ಟಿ, ತಾಯಿ ಮಾಯಾ ಶೆಟ್ಟಿ ಮತ್ತು ತಂದೆ ಸುನೀಲ್ ಶೆಟ್ಟಿ ಅವರು ಸಂಗೀತ ಕಚೇರಿಯಲ್ಲಿ ನೃತ್ಯ ಪ್ರದರ್ಶಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಮದುವೆಗೆ ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ.
Published On - 12:32 pm, Sun, 22 January 23



















