ದಟ್ಟ ಮಂಜಿನಿಂದ ಕೂಡಿದ ಗೋಪಾಲಸ್ವಾಮಿ ಬೆಟ್ಟ ಪ್ರವಾಸಿಗರನ್ನ ಕೈ ಬಿಸಿ ಕರೆಯುತ್ತಿದ್ದು, ಅದರ ಝಲಕ್​ ಇಲ್ಲಿದೆ

|

Updated on: Jun 25, 2023 | 9:05 AM

ವರ್ಷದ 365 ದಿನಗಳಲ್ಲೂ ದಟ್ಟ ಮಂಜಿನಿಂದ ಕೂಡಿದ ರಾಜ್ಯದ ಏಕೈಕ ಪ್ರವಾಸಿ ತಾಣ ಅಂದ್ರೆ, ಅದು ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಚುಮು ಚುಮು ಚಳಿಯ ನಡುವೆ ಗೋಪಾಲಸ್ವಾಮಿ ಬೆಟ್ಟ ಮಂಜಿನಿಂದ ಆವರಿಸಿ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಅದರ ಝಲಕ್ ಇಲ್ಲಿದೆ.

1 / 7
ಎಲ್ಲಿ ನೋಡಿದರೂ ಹಸಿರು ರತ್ನಗಳ ಹೊದ್ದಿರುವ ಬೆಟ್ಟ, ಹಸಿರು ರತ್ನದ ಬೆಟ್ಟಕ್ಕೆ ಮುತ್ತಿಡುತ್ತಿರುವ ಮಂಜು, ಚುಮು ಚುಮು ಚುಮು ಚಳಿಗೆ ಮೈಯೊಡ್ಡಿ ಖುಷಿಯಲ್ಲಿರುವ ಪ್ರವಾಸಿಗರು. ಇಂತಹ ಪ್ರಶಾಂತವಾದ ವಾತಾವರಣ ನಿಮಗೆ ಸೀಗಬೇಕೆಂದರೆ ಗೋಪಾಲಸ್ವಾಮಿ ಬೆಟ್ಟಕ್ಕೆ‌ ಹೋಗಲೇಬೇಕು.

2 / 7
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಭಾರತದ  ಸ್ವಿಜರ್ಲ್ಯಾಂಡ್ ಎಂದೆ ಕರೆಸಿಕೊಳ್ಳುತ್ತೆ. ಸದ್ಯ ಭಾರತದ ಈ ಸ್ವಿಜರ್ಲ್ಯಾಂಡ್ ನೋಡೋಕೆ ಪ್ರವಾಸಿಗರ ದಂಡೆ ಹರಿದುಬರುತ್ತಿದೆ.‍

3 / 7
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಬರುವ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ, ಸಮುದ್ರ ಮಟ್ಟದಿಂದ 3769 ಅಡಿ ಎತ್ತರದಲ್ಲಿದೆ. ಜೋಳರ ಕಾಲದ ಇತಿಹಾಸ ವಿರುವ ಈ ಗೋಪಾಲ ಸ್ವಾಮಿ ದೇವಾಲಯವನ್ನ 1315ರಲ್ಲಿ ನಿರ್ಮಿಸಲಾಗಿದೆ.

4 / 7
ಋತುಮಾನಗಳ ಬೆರಗಿಗೆ ಬೆರಗಾಗುವ ಈ ಪ್ರಕೃತಿ ಸೊಬಗಿನ ಈ ಪುಣ್ಯ ಕ್ಷೇತ್ರದ ವಾತಾವರಣ ಕ್ಷಣಕ್ಷಣಕ್ಕೂ ಬದಲಾಗುತ್ತದೆ. ವಿಶಾಲ ಹುಲ್ಲುಗಾವಲು, ಸುಂದರವಾದ ಅರಣ್ಯ. ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಆಕಾಶವನ್ನೇ ಹೊದ್ದು ನಿಂತಿರುವ ಹಾಗೆ ಕಾಣುತ್ತದೆ. ಸದ್ಯ ಪ್ರವಾಸಿಗರು ಬೆಟ್ಟಕ್ಕೆ ಬಂದು ಎಂಜಾಯ್ ಮಾಡುತ್ತಿದ್ದಾರೆ.

5 / 7
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಜಿಎಸ್ ಬೆಟ್ಟದ ವ್ಯಾಪ್ತಿಗೆ ಬರುವ ಗೋಪಾಲ ಸ್ವಾಮಿ ಬೆಟ್ಟ ಎಲ್ಲರ ಅಚ್ಚು ಮೆಚ್ಚಿನ ತಾಣವಾಗಿದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾಕಷ್ಟು ಪ್ರವಾಸಿಗರು ಬರುತ್ತಾರೆ.

6 / 7
ವೀಕೆಂಡ್​ನಲ್ಲಂತೂ ಪ್ರವಾಸಿಗರಿಂದ ಗೋಪಾಲಸ್ವಾಮಿ ಬೆಟ್ಟ ಫುಲ್ ರಶ್ ಆಗಿರುತ್ತದೆ. ದೂರದೂರಿನಿಂದ ತಮ್ಮ ಖಾಸಗಿ ವಾಹನದ ಮೂಲಕ ಬರುವ ಪ್ರವಾಸಿಗರು, ಬೆಟ್ಟದ ತಪ್ಪಲಿನಲ್ಲಿ ಪಾರ್ಕ್ ಮಾಡಿ, ಬಸ್ ಮೂಲಕವೇ ಬೆಟ್ಟಕ್ಕೆ ತೆರಳಬೇಕು.‌

7 / 7
ಸದ್ಯ ಸಾಕಷ್ಟು ಸಂಖ್ಯೆಯಲ್ಲಿ ಬೆಟ್ಟಕ್ಕೆ ಪ್ರವಾಸಿಗರು ಆಗಮಿಸುತಿದ್ದು, ಆಷಾಡ ಮಾಸದ ಚಳಿಯ ಜೊತೆ ಆಗಾಗ ಮುಂಗಾರಿನ ಸಿಂಚನ ಕೂಡ ಆಗುತ್ತಿದೆ. ಇದ್ರಿಂದ ಪ್ರವಾಸಿಗರು ಎಲ್ಲಾ ತರಹದ ವಾತಾವರಣ ಫೀಲ್ ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ.

Published On - 9:03 am, Sun, 25 June 23