
ಗೌತಮಿ ಜಾಧವ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೂಲಕ ಸಾಕಷ್ಟು ಖ್ಯಾತಿ ಪಡೆದರು. ಅಲ್ಲಿಯವರೆಗೆ ಅವರ ಎಲ್ಲಾ ಅಭಿಮಾನಿಗಳಿಗೆ ಅವರ ಪತಿಯ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಇವರಿಬ್ಬರ ಕೆಮಸ್ಟ್ರಿ ಎಷ್ಟು ಚೆನ್ನಾಗಿದೆ ಅನ್ನೋದು ಈಗ ಎಲ್ಲರಿಗೂ ತಿಳಿಯುತ್ತಿದೆ.

ಗೌತಮಿ ಜಾಧವ್ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಇಬ್ಬರೂ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಆದರೆ, ಇವರ ಕೆಮಸ್ಟ್ರಿ ಎಷ್ಟು ಚೆನ್ನಾಗಿದೆ ಎಂಬುದು ಇವರ ಫೋಟೋಗಳೇ ಹೇಳುತ್ತಿವೆ. ಈ ಫೋಟೋಗಳನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.

ಗೌತಮಿ ಅವರು ಕಾರಿನ ಎದುರಿಗೆ ಪೋಸ್ ಕೊಟ್ಟಿದ್ದಾರೆ. ಅದೇ ರೀತಿ ಅಭಿಷೇಕ್ ಕೂಡ ಕಾರಿನ ಎದುರು ಪೋಸ್ ಕೊಟ್ಟಿದ್ದಾರೆ. ಇವರು ಸಮಯ ಸಿಕ್ಕಾಗಲೆಲ್ಲ ಸುತ್ತಾಟ ನಡೆಸುತ್ತಾರೆ. ಇವರ ಕಪಲ್ ಗೋಲ್ ನೋಡಿ ಅನೇಕರಿಗೆ ಖುಷಿ ಆಗಿದೆ.

ಗೌತಮಿ ಜಾಧವ್ ಬಿಗ್ ಬಾಸ್ನಲ್ಲಿ ಇದ್ದಾಗ ಅಭಿಷೇಕ್ ಅವರು ಅತಿಥಿಯಾಗಿ ಬಂದಿದ್ದರು. ಅವರು ಪತ್ನಿಯನ್ನು ಪ್ರೀತಿಸಿದ ರೀತಿಗೆ ಎಲ್ಲರೂ ಫಿದಾ ಆಗಿದ್ದರು. ಅವರು ಹೀಗೆ ಖುಷಿಖುಷಿಯಿಂದ ಬಾಳಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ.

ಗೌತಮಿ ಅವರು ಹೊಸ ಪ್ರಾಜೆಕ್ಟ್ ಘೋಷಣೆ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅವರು ಆಗಾಗ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾರೆ. ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗ ಇದೆ.