
‘ಸತ್ಯ’ ಧಾರಾವಾಹಿ ಮಾಡಿ ಗಮನ ಸೆಳೆದವರು ಗೌತಮಿ ಜಾಧವ್. ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಅವರು ಸ್ಪರ್ಧೆ ಮಾಡಿದರು. ಆ ಬಳಿಕ ಅವರ ಜನಪ್ರಿಯತೆ ಹೆಚ್ಚಿತು. ಈಗ ಅವರು ಖುಷಿ ಸುದ್ದಿ ಶೇರ್ ಮಾಡಿಕೊಂಡಿದ್ದಾರೆ.

ಗೌತಮಿ ಜಾಧವ್ ಅವರು ಎರಡು ಕಾರು ಖರೀದಿ ಮಾಡಿದ್ದಾರೆ. ಎರಡೂ ಕಾರುಗಳು ಟಾಟಾ ಸಫಾರಿ ಎಂಬುದು ವಿಶೇಷ. ಒಂದೇ ರೀತಿಯ ಎರಡು ಕಾರುಗಳು ಅವರ ಮನೆ ಸೇರಿವೆ. ಈ ಫೋಟೋಗಳು ಗಮನ ಸೆಳೆದಿವೆ.

ಗೌತಮಿ ಜಾಧವ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಅವರ ಹೊಸ ಕಾರಿನಲ್ಲಿ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸುತ್ತಾ ಇದ್ದಾರೆ. ಮತ್ತೊಂದು ಕಾರು ಗೌತಮಿ ಕುಟುಂಬಕ್ಕೆ ಇರಬಹುದು ಎನ್ನಲಾಗುತ್ತಿದೆ.

ಟಾಟಾ ಸಫಾರಿ ಕಾರಿನ ಬೆಲೆ 18 ಲಕ್ಷ ರೂಪಾಯಿ ಇಂದ (ಆನ್ ರೋಡ್ ಬೆಲೆ) ಆರಂಭ ಆಗಿ, 28-30 ಲಕ್ಷ ರೂಪಾಯಿವರೆಗೆ ಇದೆ. ನಾಲ್ಕು ಸಿಲಿಂಡರ್ ಇಂಜಿನ್ನ ಇದು ಹೊಂದಿದ್ದು, 1956 ಸಿಸಿ ಇಂಜಿನ್ ಹೊಂದಿದೆ.

ಗೌತಮಿ ಜಾಧವ್ ಅವರನ್ನು ಮೊದಲು ಎಲ್ಲರೂ ಸತ್ಯ ಎಂದು ಗುರುತಿಸುತ್ತಿದ್ದರು. ಇದಕ್ಕೆ ಕಾರಣ ಅವರು ಮಾಡಿದ ಪಾತ್ರ. ಆದರೆ, ‘ಬಿಗ್ ಬಾಸ್’ ಬಳಿಕ ಅವರನ್ನು ಗೌತಮಿ ಎಂದು ಕರೆದರು. ಇದು ಅವರಿಗೆ ಖುಷಿ ನೀಡಿತು.

ಗೌತಮಿ ಜಾಧವ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಇತ್ತೀಚೆಗೆ ಅವರು ಉಗ್ರಂ ಮಂಜು ಅವರ ವಿವಾಹಕ್ಕೆ ತೆರಳಿದ್ದರು. ನವ ದಂಪತಿಗೆ ಅವರು ಶುಭಕೋರಿ ಬಂದಿದ್ದರು.