Government Borrowing: ಕೇಂದ್ರ ಸರ್ಕಾರದಿಂದ ಭಾರೀ ಸಾಲ; FY22ರಲ್ಲಿ ಶೇ 46ರಷ್ಟು ಮಾರುಕಟ್ಟೆಯಲ್ಲಿ ಸಂಗ್ರಹ

| Updated By: Srinivas Mata

Updated on: Aug 21, 2021 | 7:29 PM

2021- 22ನೇ ಸಾಲಿಗೆ ಸರ್ಕಾರಕ್ಕೆ ಪೆಟ್ರೋಲ್- ಡೀಸೆಲ್ ಸುಂಕದ ಆದಾಯ, ಜಿಎಸ್​ಟಿ ತೆರಿಗೆ ಆದಾಯದ ಹೊರತಾಗಿಯೂ ಮಾರುಕಟ್ಟೆಯಿಂದ ಭಾರೀ ಪ್ರಮಾಣದಲ್ಲಿ ಸಾಲ ಪಡೆಯಲಾಗಿದೆ.

1 / 5
ಪೆಟ್ರೋಲ್- ಡೀಸೆಲ್ ಮೇಲಿನ ತೆರಿಗೆಯಿಂದ ಗಳಿಕೆ, ಜಿಎಸ್​ಟಿ ಸಂಗ್ರಹದ ಹೊರತಾಗಿಯೂ ಕೇಂದ್ರ ಸರ್ಕಾರವು ಮಾರುಕಟ್ಟೆಯಿಂದ ಭಾರೀ ಪ್ರಮಾಣದಲ್ಲಿ ಸಾಲ ಪಡೆದಿದೆ. ಈ ವರೆಗೆ ಅಧಿಸೂಚನೆ ಹೊರಡಿಸಿದ ಶೇ 90 ರಷ್ಟು ಮೊತ್ತ ಅಥವಾ ಹಣಕಾಸು ವರ್ಷ 2022ರ ಒಟ್ಟಾರೆ ಸಾಲದ ಶೇ 46ರಷ್ಟು ಸಾಲ ಮಾಡಲಾಗಿದೆ, ಎರಡನೇ ತ್ರೈಮಾಸಿಕದ ಹಾದಿಯ ಅರ್ಧದಲ್ಲಿ ಇರುವಾಗಲೇ ಇಂಥ ಪರಿಸ್ಥಿತಿ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮೊದಲನೇ ತ್ರೈಮಾಸಿಕದಲ್ಲಿ ಒಟ್ಟಾರೆಯಾಗಿ ಸರ್ಕಾರವು ಅಂದಾಜು ಮಾಡಿದ ತೆರಿಗೆಯ ಶೇ 25.1ರಷ್ಟು ಸಂಗ್ರಹ ಮಾಡಿದೆ. ಸಾಂಪ್ರದಾಯಿಕವಾಗಿ ನೋಡಿದರೆ ತೆರಿಗೆಯಲ್ಲಿ ಇದು ಕಡಿಮೆ. ಕೊವಿಡ್-19 ಎರಡನೇ ಅಲೆಯ ಹೊರತಾಗಿಯೂ ಮೊದಲನೇ ತ್ರೈಮಾಸಿಕದ ಒಟ್ಟಾರೆ ತೆರಿಗೆ ಸಂಗ್ರಹವು ಶೇ 39ರಷ್ಟು ಏರಿಕೆಯಾಗಿ, 5.6 ಲಕ್ಷ ಕೋಟಿ ರೂಪಾಯಿ ತಲುಪಿದೆ ಎಂದು ಇಕ್ರಾ (Icra) ರೇಟಿಂಗ್ಸ್​ನ ವಿಶ್ಲೇಷಣೆಯಿಂದ ಗೊತ್ತಾಗಿದೆ. ಅದರ ಅಂದಾಜಿನ ಪ್ರಕಾರ, FY22 ಬಜೆಟ್​ನಲ್ಲಿ ಅಂದಾಜು ಮಾಡಿರುವ 22.2 ಲಕ್ಷ ಕೋಟಿ ರೂಪಾಯಿಯ ಮೊತ್ತವನ್ನೂ ಮೀರಿಹೋಗುತ್ತದೆ.

2 / 5
ಆರ್​ಬಿಐ

ಆರ್​ಬಿಐ

3 / 5
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

4 / 5
ಜಿಎಸ್​ಟಿ  (ಪ್ರಾತಿನಿಧಿಕ ಚಿತ್ರ)

ಜಿಎಸ್​ಟಿ (ಪ್ರಾತಿನಿಧಿಕ ಚಿತ್ರ)

5 / 5
ಹರಾಜು ರದ್ದಾಗಿದೆ

ಹರಾಜು ರದ್ದಾಗಿದೆ

Published On - 7:28 pm, Sat, 21 August 21