ಸಿಕ್ಕುಗಟ್ಟಿದ ಕೂದಲಿಗೆ ಹೊಳಪು ತರಲು ಈ 7 ಮನೆಮದ್ದುಗಳನ್ನು ಬಳಸಿ ನೋಡಿ
Hair Care Home Remedies: ಕೂದಲನ್ನು ಅತಿಯಾಗಿ ತೊಳೆಯುವುದರಿಂದ, ಆಲ್ಕೋಹಾಲ್ ಮತ್ತು ಕಠಿಣ ಸಾಬೂನುಗಳ ಬಳಕೆಯಿಂದ, ಡ್ರೈಯರ್ನಲ್ಲಿ ಕೂದಲನ್ನು ಒಣಗಿಸಿಕೊಳ್ಳುವುದರಿಂದ, ಅತಿಯಾಗಿ ಬಿಸಿಲಿಗೆ ಕೂದಲನ್ನು ಒಡ್ಡುವುದರಿಂದ, ಅಪೌಷ್ಟಿಕತೆಯಿಂದ ಹಾಗೂ ಹಾರ್ಮೋನುಗಳಲ್ಲಿ ಆಗುವ ಬದಲಾವಣೆಯಿಂದ ಕೂದಲಲ್ಲಿ ಸಿಕ್ಕು ಉಂಟಾಗಿ, ಉದುರಲಾರಂಬಿಸುತ್ತದೆ.
1 / 12
ಕೂದಲಿನ ಸೌಂದರ್ಯ ನಮ್ಮ ಆರೋಗ್ಯ ಹಾಗೂ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕೂದಲು ಉದುರುತ್ತಿದ್ದರೆ ಅದೇ ಬಗ್ಗೆ ನೆನಸಿಕೊಂಡು ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ದೃಢವಾದ ಕೂದಲು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
2 / 12
ಕೂದಲು ರೇಷ್ಮೆಯಂತೆ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಕೂದಲು ಸಿಕ್ಕುಗಟ್ಟಿದರೆ ಅದನ್ನು ಸರಿಪಡಿಸುವುದು ಹೇಗೆಂಬುದೇ ಗೊತ್ತಾಗುವುದಿಲ್ಲ.
3 / 12
ಸಿಕ್ಕುಗಟ್ಟಿದ ಕೂದಲನ್ನು ಬಾಚಿಕೊಳ್ಳುವುದು ಕೂಡ ಕಷ್ಟ. ಕೂದಲು ಗಂಟುಗಂಟಾದರೆ ಉದುರಲಾರಂಭಿಸುತ್ತದೆ. ಸಿಕ್ಕುಗಟ್ಟಿದ ಕೂದಲಿನ ಮುಖ್ಯ ಕಾರಣವೆಂದರೆ ಘರ್ಷಣೆ. ಕೂದಲನ್ನು ಎಂದಿಗೂ ಅತಿಯಾಗಿ ಉಜ್ಜಬಾರದು.
4 / 12
ಕೂದಲನ್ನು ಅತಿಯಾಗಿ ತೊಳೆಯುವುದರಿಂದ, ಆಲ್ಕೋಹಾಲ್ ಮತ್ತು ಕಠಿಣ ಸಾಬೂನುಗಳ ಬಳಕೆಯಿಂದ, ಡ್ರೈಯರ್ನಲ್ಲಿ ಕೂದಲನ್ನು ಒಣಗಿಸಿಕೊಳ್ಳುವುದರಿಂದ, ಅತಿಯಾಗಿ ಬಿಸಿಲಿಗೆ ಕೂದಲನ್ನು ಒಡ್ಡುವುದರಿಂದ, ಅಪೌಷ್ಟಿಕತೆಯಿಂದ ಹಾಗೂ ಹಾರ್ಮೋನುಗಳಲ್ಲಿ ಆಗುವ ಬದಲಾವಣೆಯಿಂದ ಕೂದಲು ಉದುರಲಾರಂಬಿಸುತ್ತದೆ.
5 / 12
ಕೂದಲು ಸಿಕ್ಕಾಗುವುದನ್ನು ಮತ್ತು ಉದುರುವುದನ್ನು ತಡೆಯಲು 7 ಮನೆಮದ್ದುಗಳು ಇಲ್ಲಿವೆ...
6 / 12
ಬಿಸಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದರಿಂದ ಕೂದಲಿಗೆ ತೇವಾಂಶ ಸಿಗುತ್ತದೆ. ಇದಕ್ಕೆ ಆಲಿವ್ ಅಥವಾ ಕ್ಯಾನೋಲಾ ಎಣ್ಣೆಯನ್ನು ಬಳಸಬಹುದು. ಎಣ್ಣೆಯನ್ನು ಸ್ವಲ್ಪ ಬೆಚ್ಚಗಾಗಿಸಿ, ನಿಮ್ಮ ನೆತ್ತಿಗೆ ಎಣ್ಣೆಯನ್ನು ಮಸಾಜ್ ಮಾಡಬೇಕು. ಅರ್ಧ ಗಂಟೆ ಬಿಟ್ಟು ಕೂದಲನ್ನು ತೊಳೆದುಕೊಳ್ಳಿ.
7 / 12
ಆಪಲ್ ಸೈಡರ್ ವಿನೆಗರ್ ಕೂದಲಿಗೆ ಹೊಳಪನ್ನು ನೀಡುತ್ತದೆ. ಹಾಗೇ ಕೂದಲಿನ ತೈಲ ಸಂಗ್ರಹವನ್ನು ತೆಗೆದುಹಾಕುತ್ತದೆ. ಕೂದಲಿಗೆ ಇದನ್ನು ಹಚ್ಚಿಕೊಂಡು ಸ್ವಲ್ಪ ಸಮಯ ಹಾಗೇ ಬಿಡಿ. ಆಗ ಕೂದಲು ಆಪಲ್ ಸೈಡರ್ ವಿನೆಗರ್ ಅನ್ನು ಹೀರಿಕೊಳ್ಳುತ್ತದೆ.
8 / 12
ಅವಕಾಡೊದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಅವಕಾಡೊಗಳು ನಿಮ್ಮ ಕೂದಲಿನ ಹೊಳಪನ್ನು ವಾಪಾಸ್ ತಂದುಕೊಡುತ್ತವೆ. ಅವಕಾಡೊವನ್ನು ಬಳಸಿ ನೀವು ಪೇಸ್ಟ್ ತಯಾರಿಸಬಹುದು. ನೀವು ಈ ಪೇಸ್ಟ್ ಅನ್ನು ಒದ್ದೆಯಾದ ಕೂದಲಿಗೆ ಹಚ್ಚಿಕೊಳ್ಳಬಹುದು. ಬಳಿಕ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ನಿಮ್ಮ ಕೂದಲನ್ನು ತೊಳೆಯಿರಿ. ಇದನ್ನು ಬಳಸುವುದರಿಂದ ನಿಮ್ಮ ಕೂದಲು ಸುಂದರವಾಗಿ, ದೃಢವಾಗಿರುತ್ತದೆ.
9 / 12
ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಅನೇಕ ಪ್ರಯೋಜನಗಳಿವೆ. ತೆಂಗಿನ ಎಣ್ಣೆಯು ಹಾನಿಗೊಳಗಾದ ಕೂದಲನ್ನು ಸರಿ ಮಾಡುತ್ತದೆ. ಎಣ್ಣೆ ಹಚ್ಚಿಕೊಂಡ ಒಂದೆರಡು ಗಂಟೆಯ ನಂತರ ತಲೆಸ್ನಾನ ಮಾಡಬಹುದು ಅಥವಾ ರಾತ್ರಿಯಿಡೀ ಕೂದಲಿಗೆ ಎಣ್ಣೆ ಹಚ್ಚಿ ಬಿಡಬಹುದು.
10 / 12
ಮೊಟ್ಟೆಯ ಬಿಳಿಭಾಗ, ಆಪಲ್ ಸೈಡರ್ ವಿನೆಗರ್ ಮತ್ತು ಆಲಿವ್ ಎಣ್ಣೆಯನ್ನು ಮಿಕ್ಸ್ ಮಾಡಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಇದು ಹಾನಿಗೊಳಗಾದ ಕೂದಲಿಗೆ ಜೀವ ನೀಡುತ್ತದೆ.
11 / 12
ಮಯನೇಸ್ ನಿಮ್ಮ ಕೂದಲಿಗೆ ಕಂಡಿಷನರ್ ಆಗಿ ಕೆಲಸ ಮಾಡುತ್ತದೆ. ನಿಮ್ಮ ಕೂದಲಿಗೆ ಸ್ವಲ್ಪ ಮಯನೇಸ್ ಅನ್ನು ಹಚ್ಚಿಕೊಂಡು, ಸುಮಾರು 1 ಗಂಟೆ ಬಟ್ಟೆಯಿಂದ ಸುತ್ತಿಕೊಳ್ಳಿ. ನಂತರ ಕೂದಲು ವಾಶ್ ಮಾಡಿ.
12 / 12
ಚಹಾವನ್ನು ಕೂದಲು ವಾಶ್ ಮಾಡಲು ಬಳಸಿ. ಚಹಾವು ಕೂದಲಿಗೆ ಹೊಳಪನ್ನು ನೀಡುತ್ತದೆ. ಕೂದಲನ್ನು ಶಾಂಪೂನಿಂದ ತೊಳೆದ ನಂತರ ಕೊನೆಯಲ್ಲಿ ಟೀ ಡಿಕಾಕ್ಷನ್ ಅನ್ನು ಕೂದಲ ತುಂಬ ಹಚ್ಚಿಕೊಳ್ಳಿ. ಇದು ಕಂಡೀಷನರ್ ರೀತಿ ಕೆಲಸ ಮಾಡುತ್ತದೆ.