Updated on: Oct 10, 2023 | 7:18 PM
ನಟಿ ಸಮಂತಾ ಋತ್ ಪ್ರಭು ದುಬೈನಲ್ಲಿದ್ದಾರೆ. ದುಬೈನಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ.
ಸಿನಿಮಾಗಳಿಂದ ಬಿಡುವು ಪಡೆದಿರುವ ನಟಿ ಸಮಂತಾ, ಸಾಮಾಜಿಕ ಜಾಲತಾಣದ ಮೂಲಕ ಸಕ್ರಿಯವಾಗಿರುವ ಪ್ರಯತ್ನ ಮಾಡುತ್ತಿದ್ದಾರೆ.
ಆಗಾಗ್ಗೆ ಫೋಟೊಶೂಟ್ ಮಾಡಿಸಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ ಸಮಂತಾ.
ಸಮಂತಾ ಇದೀಗ ದುಬೈನಲ್ಲಿದ್ದು, ಅಲ್ಲಿ ಜಾಹೀರಾತು ಚಿತ್ರೀಕರಣವೊಂದರಲ್ಲಿ ಪಾಲ್ಗೊಂಡಿದ್ದಾರೆ.
ಸೀರೆಯುಟ್ಟು ಫೊಟೊಶೂಟ್ ಮಾಡಿಸಿಕೊಂಡಿರುವ ನಟಿ ಸಮಂತಾ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಗೆ ನಟಿ ಸಮಂತಾ ಇನ್ನೆರಡು ವರ್ಷ ಯಾವುದೇ ಸಿನಿಮಾಗಳಲ್ಲಿ ನಟಿಸುವುದಿಲ್ಲವಂತೆ.
ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳುವುದಕ್ಕಾಗಿ ಎರಡು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಸಮಂತಾ.