Rohit Shetty: ತೆರೆಯ ಮೇಲೆ ಕಾರುಗಳನ್ನು ಪುಡಿ-ಪುಡಿ ಮಾಡಿಸುವ ರೋಹಿತ್ ಶೆಟ್ಟಿ ಬಳಿ ಇದೆ ದುಬಾರಿ ಬೆಲೆಯ ಕಾರುಗಳು! ನಿರ್ದೇಶಕನ ಒಟ್ಟು ಆಸ್ತಿ ಎಷ್ಟು?

|

Updated on: Mar 14, 2022 | 1:24 PM

Rohit Shetty Net Worth: ಆಕ್ಷನ್ ಚಿತ್ರಗಳ ಮೂಲಕ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ, ತಮ್ಮ ಚಿತ್ರಗಳಲ್ಲಿ ದುಬಾರಿ ಬೆಲೆಯ ಕಾರುಗಳನ್ನು ಬಳಸಿ ಆಕ್ಷನ್ ದೃಶ್ಯ ಕಟ್ಟಿಕೊಡುತ್ತಾರೆ. ರಿಯಲ್ ಲೈಫ್​ನಲ್ಲಿ ಅವರ ಬಳಿ ಹಲವು ದುಬಾರಿ ಬೆಲೆಯ ಕಾರುಗಳಿವೆ. ಇದಲ್ಲದೇ ಸುಮಾರು ₹ 280 ಕೋಟಿ ಆಸ್ತಿಗಳ ಒಡೆಯ ಅವರಾಗಿದ್ದಾರೆ. ತಿಂಗಳಿಗೆ ಏನಿಲ್ಲವೆಂದರೂ 3 ಕೋಟಿ ರೂಗಳನ್ನು ಅವರು ಗಳಿಸುತ್ತಾರೆ ಎನ್ನುತ್ತವೆ ವರದಿಗಳು!

1 / 7
ನಿರ್ದೇಶಕ ರೋಹಿತ್ ಶೆಟ್ಟಿ ಬಾಲಿವುಡ್​ನಲ್ಲಿ ತಮ್ಮ ಆಕ್ಷನ್ ಚಿತ್ರಗಳಿಂದ ಹೆಸರು ಮಾಡಿದವರು. ಅವರಿಗೆ ಆಕ್ಷನ್ ದೃಶ್ಯಗಳಲ್ಲಿ ಕಾರಿನ ಚೇಸಿಂಗ್ ಹಾಗೂ ಕಾರುಗಳನ್ನು ಬ್ಲಾಸ್ಟ್ ಮಾಡುವ ದೃಶ್ಯಗಳೆಂದರೆ ಪ್ರೀತಿ. ಅವರ ಚಿತ್ರಗಳನ್ನು ನೋಡಿದವರಿಗೆ ಇದರ ಅರಿವಿರುತ್ತದೆ.

2 / 7
ಇಂದು ರೋಹಿತ್ ಶೆಟ್ಟಿ ಜನ್ಮದಿನ. ತೆರೆಯ ಮೇಲೆ ದುಬಾರಿ ಕಾರುಗಳಲ್ಲಿ ಆಕ್ಷನ್ ದೃಶ್ಯಗಳನ್ನು ಕಟ್ಟಿಕೊಡುವ ಅವರ ಬಳಿ ರಿಯಲ್ ಲೈಫ್​ನಲ್ಲಿ ಎಷ್ಟು ಕಾರುಗಳಿವೆ? ಅವರ ಆಸ್ತಿ ಎಷ್ಟು? ಈ ಮಾಹಿತಿ ಇಲ್ಲಿದೆ.

3 / 7
ಕೆಲವು ಮೂಲಗಳ ಪ್ರಕಾರ, ರೋಹಿತ್ ನಿವ್ವಳ ಆಸ್ತಿ ಮೌಲ್ಯ ಬರೋಬ್ಬರಿ 280 ಕೋಟಿ ರೂ. ಪ್ರತಿ ತಿಂಗಳು ನಟ ಸುಮಾರು 3 ಕೋಟಿ ರೂ ಆದಾಯ ಗಳಿಸುತ್ತಾರೆ ಎಂದಿವೆ ವರದಿಗಳು. ಚಲನಚಿತ್ರಗಳಲ್ಲದೆ, ಟಿವಿ ಕಾರ್ಯಕ್ರಮಗಳು,  ಜಾಹಿರಾತುಗಳು ಹಾಗೂ ಇವೆಂಟ್​ಗಳ ಮೂಲಕ ನಟ ಆದಾಯ ಗಳಿಸುತ್ತಾರೆ.

4 / 7
ಮನೆಯ ವಿಚಾರಕ್ಕೆ ಬರುವುದಾದರೆ ರೋಹಿತ್ ಬಳಿ 2013ರಲ್ಲಿ 6 ಕೋಟಿ ರೂ ನೀಡಿ ಖರೀದಿಸಿದ ಒಂದು ಮನೆ ಮುಂಬೈನಲ್ಲಿದೆ. ಇದಲ್ಲದೇ ದೇಶಾದ್ಯಂತ ಹಲವು ನಿವೇಶನಗಳು ನಿರ್ದೇಶಕನ ಹೆಸರಿನಲ್ಲಿವೆ ಎನ್ನಲಾಗಿದೆ.

5 / 7
ವಾಹನಗಳ ಬಗ್ಗೆ ಹೇಳುವುದಾದರೆ ರೋಹಿತ್ ಬಳಿ ಹಲವು ಐಷಾರಾಮಿ ಕಾರುಗಳು, ಬೈಕ್​ಗಳಿವೆ. BMW, ರೇಂಜ್ ರೋವರ್ ಮತ್ತು ಬೆಂಜ್ ಸೇರಿದಂತೆ ದುಬಾರಿ ಬ್ರಾಂಡ್​ನ ಕಾರುಗಳನ್ನು ನಿರ್ದೇಶಕ ಹೊಂದಿದ್ದಾರೆ. ಪ್ರತಿ ವಾಹನದ ಬೆಲೆ ಏನಿಲ್ಲವೆಂದರೂ 1.2 ಕೋಟಿಯಿಂದ 2 ಕೋಟಿ ರೂಗಳು!

6 / 7
ಚಿತ್ರಗಳ ವಿಷಯಕ್ಕೆ ಬಂದರೆ ರೋಹಿತ್ ನಿರ್ದೇಶನದ ‘ಸೂರ್ಯವಂಶಿ’ ಇತ್ತೀಚೆಗೆ ರಿಲೀಸ್ ಆಗಿದ್ದು, 200 ಕೋಟಿ ರೂಗೂ ಹೆಚ್ಚು ಮೊತ್ತವನ್ನು ಬಾಚಿಕೊಂಡಿದೆ.

7 / 7
ಪ್ರಸ್ತುತ ರೋಹಿತ್ ರಣವೀರ್ ಸಿಂಗ್ ಜತೆಗೆ ‘ಸರ್ಕಸ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ಪೂಜಾ ಹೆಗ್ಡೆ, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ಕಾಣಿಸಿಕೊಳ್ಳುತ್ತಿದ್ದಾರೆ.

Published On - 1:20 pm, Mon, 14 March 22