
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಪುತ್ರ ಆವ್ಯನ್ ದೇವ್ಗೆ ಇಂದು ಮುಡಿ ಶಾಸ್ತ್ರ ಮಾಡಲಾಗಿದೆ. ದೇವರಿಗೆ ಮುಡಿ ನೀಡಿ ಹೆಚ್ಡಿ ಕುಮಾರಸ್ವಾಮಿ ಪೂಜೆ ಮಾಡಿಸಿದ್ದಾರೆ. 2021ರ ಸೆಪ್ಟೆಂಬರ್ನಲ್ಲಿ ರೇವತಿ ಆವ್ಯನ್ ದೇವ್ಗೆ ಜನ್ಮ ನೀಡಿದ್ದರು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಯಲಿಯೂರು ಲಕ್ಷ್ಮಿ ದೇವಾಲಯದಲ್ಲಿ ಹೆಚ್ಡಿ ಕುಮಾರಸ್ವಾಮಿ ಮೊಮ್ಮಗನ ಮುಡಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಲಕ್ಷ್ಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೊಳೆನರಸೀಪುರ ತಾಲ್ಲೂಕಿನ ಹರದಹಳ್ಳಿಯ ದೇವೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಸ್ವ ಗ್ರಾಮ ಹರದನಹಳ್ಳಿಯಲ್ಲಿರೋ ಮನೆ ದೇವರು ದೇವೇಶ್ವರನಿಗೆ ಹೆಚ್ಡಿ ಕುಮಾರಸ್ವಾಮಿ ಕುಟುಂಬ ವಿಶೇಷ ಪೂಜೆ ಸಲ್ಲಿಸಿದೆ.

ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ಹಾಗು ಮೊಮ್ಮಗನ ಜೊತೆ ಆಗಮಿಸಿ ಹೆಚ್ಡಿ ಕುಮಾರಸ್ವಾಮಿ ಪೂಜೆ ಸಲ್ಲಿಸಿದ್ರು.

ಮೊಮ್ಮಗನ ಮೊದಲ ಮುಡಿ ಶಾಸ್ತ್ರದ ಹಿನ್ನೆಲೆಯಲ್ಲಿ ಮನೆ ದೇವರಿಗೆ ಹೆಚ್ಡಿಕೆ ಕುಟುಂಬ ಪೂಜೆ ಸಲ್ಲಿಸಿದೆ.
Published On - 2:55 pm, Sun, 21 August 22