ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತು ಈ ಚೆರ್ರಿ ಹಣ್ಣನ್ನು ನೋಡಿ ನೆನಪಾಗುತ್ತದೆ.
ಏಕೆಂದರೆ ಈ ಚಿಕ್ಕ ಹಣ್ಣಿನಲ್ಲಿ ಸಾಕಷ್ಟು ಮಿಟಮಿನ್ಗಳು ಒಳಗೊಂಡಿವೆ. ಚೆರ್ರಿಗಳು
ಸಿಹಿ ಮತ್ತು ಹುಳಿಯಿಂದ ಕೂಡಿರುತ್ತವೆ. ಈ ಚಿಕ್ಕ ಹಣ್ಣಿನಲ್ಲಿ
ಸಾಕಷ್ಟು ಆರೋಗ್ಯಕಾರಿ ಗುಣಗಳು ಅಡಗಿವೆ. ವಿಟಮಿನ್ ಎ, ಸಿ, ಕೆ, ಫೈಬರ್,
ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು, ಕಬ್ಬಿಣ, ಬೀಟಾ ಕ್ಯಾರೋಟಿನ್,
ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ.