ರೋಗನಿರೋಧಕ ಶಕ್ತಿ ಹೆಚ್ಚಿಸಬೇಕಾ?; ಈ 8 ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿ

|

Updated on: Jan 18, 2024 | 6:53 PM

ಕಾಯಿಲೆಗಳಿಂದ ದೂರ ಇರಲು ರೋಗನಿರೋಧಕ ಶಕ್ತಿ ಅತ್ಯಗತ್ಯ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೆಳಗ್ಗೆ ಖಾಲಿ ಹೊಟ್ಟೆಯನ್ನು ತಿನ್ನಬಹುದಾದ 8 ಸೂಪರ್‌ಫುಡ್‌ಗಳು ಇಲ್ಲಿವೆ.

1 / 9
ರೋಗನಿರೋಧಕ ಶಕ್ತಿ ಕಡಿಮೆಯಾದರೆ ಬೇಗ ನಾವು ಸೋಂಕಿಗೆ, ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಹೀಗಾಗಿ, ಕಾಯಿಲೆಗಳಿಂದ ದೂರ ಇರಲು ರೋಗನಿರೋಧಕ ಶಕ್ತಿ ಅತ್ಯಗತ್ಯ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೆಳಗ್ಗೆ ಖಾಲಿ ಹೊಟ್ಟೆಯನ್ನು ತಿನ್ನಬಹುದಾದ 8 ಸೂಪರ್‌ಫುಡ್‌ಗಳು ಇಲ್ಲಿವೆ.

2 / 9
ನೆಲ್ಲಿಕಾಯಿ: ನೆಲ್ಲಿಕಾಯಿಯು ವಿಟಮಿನ್ ಸಿಯಿಂದ ತುಂಬಿರುತ್ತದೆ. ಇದು ನೈಸರ್ಗಿಕವಾಗಿ ದೇಹವನ್ನು ಶುಚಿಗೊಳಿಸುವ ಗುಣಗಳನ್ನು ಹೊಂದಿದೆ. ನೀವು ಬೆಳಿಗ್ಗೆ ಅದನ್ನು ಸೇವಿಸಿದಾಗ ತುಂಬಾ ಪರಿಣಾಮಕಾರಿಯಾಗಿರುತ್ತದೆ. ಇದು ದೇಹದ ಜೀರ್ಣಕಾರಿ ಪ್ರಕ್ರಿಯೆಗೆ ಸಹಕಾರಿ. ಇದು ವಿಷವನ್ನು ದೇಹದಿಂದ ಹೆಚ್ಚು ಪರಿಣಾಮಕಾರಿಯಾಗಿ ಹೊರಹಾಕಲು ಅನುವು ಮಾಡಿಕೊಡುತ್ತದೆ.

3 / 9
ಕಪ್ಪು ಒಣದ್ರಾಕ್ಷಿ: ಕಪ್ಪು ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸಿ ಮುಂಜಾನೆ ಸೇವಿಸಿದಾಗ ಅವು ಫೈಬರ್‌ನಿಂದ ತುಂಬಿರುವುದರಿಂದ ನಿಮ್ಮ ಮಲವಿಸರ್ಜನೆಯನ್ನು ಸರಾಗಗೊಳಿಸುತ್ತದೆ. ಅವು ಪಾಲಿಫಿನಾಲ್‌ಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ಕಣ್ಣಿನ ಸಮಸ್ಯೆಗಳನ್ನು ನಿವಾರಿಸುತ್ತದೆ.

4 / 9
ಅಂಜೂರ: ದಿನವೂ ನಿಯಮಿತವಾಗಿ ಕೇವಲ 2 ನೆನೆಸಿದ ಅಂಜೂರದ ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಕರುಳಿನ ಆರೋಗ್ಯ ಚೆನ್ನಾಗಿರುತ್ತದೆ. ಬೆಳಿಗ್ಗೆ ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಮ್ಮ ಜೀರ್ಣಾಂಗವೂ ಚೆನ್ನಾಗಿರುತ್ತದೆ.

5 / 9
ಗ್ರೀನ್ ಟೀ: ಗ್ರೀನ್ ಚಹಾವು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸುತ್ತದೆ. ಇದು ಅಮೈನೋ ಆಮ್ಲಗಳನ್ನು ಸಹ ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೋಶಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.

6 / 9
ಬೆಳ್ಳುಳ್ಳಿ: ಬೆಳ್ಳುಳ್ಳಿಯು ಆ್ಯಂಟಿಬಯೋಟಿಕ್ ಮತ್ತು ಆ್ಯಂಟಿಬ್ಯಾಕ್ಟೀರಿಯಲ್ ಗುಣಗಳಿಂದ ತುಂಬಿದ್ದು, ನೈಸರ್ಗಿಕವಾಗಿ ಸೋಂಕುಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳಿಗ್ಗೆ 1-2 ಸಿಪ್ಪೆ ಸುಲಿದ ಬೆಳ್ಳುಳ್ಳಿಯ ಎಸಳುಗಳನ್ನು ಬೆಚ್ಚಗಿನ ನೀರಿನೊಂದಿಗೆ ಅಗಿಯುವುದರಿಂದ ಆರೋಗ್ಯ ಪ್ರಯೋಜನಗಳಿವೆ.

7 / 9
ಅರಿಶಿನ: ಆಯುರ್ವೇದದ ಪ್ರಕಾರ, ಹಸಿ ಅರಿಶಿನದ ಸಣ್ಣ ತುಂಡನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಚಯಾಪಚಯವನ್ನು ಸುಧಾರಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಸಹಾಯ ಮಾಡುತ್ತದೆ.

8 / 9
ಜೇನುತುಪ್ಪ: ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದ ತೂಕ ಇಳಿಸಲು ಸಹಾಯಕವಾಗಿದೆ. ಇದು ಚರ್ಮದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಗೆ ಪ್ರಯೋಜನಕಾರಿಯಾಗಿದೆ.

9 / 9
ಬಾದಾಮಿ: ಬಾದಾಮಿಯು ವಿಟಮಿನ್ ಇ ಮತ್ತು ಬಿ6 ನ ಅತ್ಯುತ್ತಮ ಮೂಲವಾಗಿದೆ. ಇದು ಮೆದುಳಿನ ಕೋಶಗಳಲ್ಲಿ ಪ್ರೋಟೀನ್​ಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮೆದುಳಿನ ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುತ್ತದೆ.