- Kannada News Photo gallery Health Tips Healthy black rice Here are the health benefits of black rice
Black Rice: ಕಪ್ಪು ಅಕ್ಕಿಯಲ್ಲಿದೆ ಆರೋಗ್ಯ, ಈ ಅಕ್ಕಿಯಲ್ಲಿ ಇರುವ ಆರೋಗ್ಯದ ಪ್ರಯೋಜನಗಳು ಇಲ್ಲಿವೆ
ಕಪ್ಪು ಅಕ್ಕಿಯು ನಿಮ್ಮ ಆಹಾರ ಸೇವನೆಯ ಒಂದು ಭಾಗವಾದರೆ ಅದರಲ್ಲಿನ ಪೋಷಕಾಂಶಗಳು ನಿಮ್ಮ ದೇಹವನ್ನು ಸೇರಿಕೊಳ್ಳಲಿದೆ. ಈ ಅಕ್ಕಿಯನ್ನು ಸೇವಿಸುವುದರಿಂದ ಉರಿಯುತ ಕಡಿಮೆ ಮಾಡುವುದು, ಹೃದಯದ ಆರೋಗ್ಯ ಕಾಪಾಡುವುದು, ಕಣ್ಣಿನ ಆರೋಗ್ಯ ಸೇರಿದಂತೆ ಅನೇಕ ರೀತಿಯ ಪ್ರಯೋಜನಗಳಿವೆ.
Updated on: Jul 25, 2022 | 5:26 PM

Health Tips Healthy black rice Here are the health benefits of black rice

Health Tips Healthy black rice Here are the health benefits of black rice

ಕಪ್ಪು ಅಕ್ಕಿ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಅಕ್ಕಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕಪ್ಪು ಅಕ್ಕಿಯ ಊಟ ಸೇವಿಸುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಕ್ಕಿಯಲ್ಲಿ ಕೆರೊಟಿನಾಯ್ಡ್‌ಗಳಿದ್ದು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಕ್ಯಾರೊಟಿನಾಯ್ಡ್‌ಗಳಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್‌ಗಳು ಬೆಳಕಿನ ಹಾನಿಕಾರಕ ಪರಿಣಾಮಗಳಿಂದ ಕಣ್ಣುಗಳನ್ನು ರಕ್ಷಿಸಲು ಒಟ್ಟಿಗೆ ಕೆಲಸ ಮಾಡುತ್ತವೆ.

ತೂಕ ಕಳೆದುಕೊಳ್ಳಲು ಬಯಸುವವರು ಕಪ್ಪಕ್ಕಿ ಊಟ ಸೇವನೆ ಮಾಡಬಹುದು. ಅಕ್ಕಿಯಲ್ಲಿ ಪ್ರೋಟೀನ್ ಮತ್ತು ಫೈಬರ್ ಇದ್ದು ಅದು ನಿಮ್ಮನ್ನು ಹೆಚ್ಚು ಕಾಲ ಹೊಟ್ಟೆ ತುಂಬಿಸಿಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.




