ಮೆದುಳಿನ ಆರೋಗ್ಯಕ್ಕೆ ಚೀಸ್ ತಿನ್ನಿ; ತಜ್ಞರು ಹೇಳೋದೇನು?
Cheese Health Benefits: ಜಪಾನ್‌ನ ಸಂಶೋಧಕರು ಚೀಸ್ ತಿನ್ನುವುದರಿಂದ ಬುದ್ಧಿಮಾಂದ್ಯತೆ ಅಥವಾ ಯಾವುದೇ ರೀತಿಯ ಮೆದುಳಿನ ಅಸ್ವಸ್ಥತೆಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಕಂಡುಹಿಡಿದಿದ್ದಾರೆ. ನ್ಯೂಟ್ರಿಷನ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಚೀಸ್ ಮತ್ತು ಮೆದುಳಿನ ಆರೋಗ್ಯದ ನಡುವಿನ ಸಂಪರ್ಕವನ್ನು ವಿಶ್ಲೇಷಿಸಿದೆ.
1 / 12
ಚೀಸ್ ಅನೇಕ ಪೋಷಕಾಂಶಗಳ ಆರೋಗ್ಯಕರ ಮತ್ತು ರುಚಿಕರವಾದ ಮೂಲವಾಗಿದೆ. ಚೀಸ್ ಇಷ್ಟಪಡದೇ ಇರುವವರೇ ಕಡಿಮೆ ಎನ್ನಬಹುದು.
2 / 12
ಚೀಸ್ ಅನ್ನು ಸ್ಯಾಂಡ್ವಿಚ್, ಪಿಜ್ಜಾ, ಬರ್ಗರ್, ಪಾಸ್ತಾ ಹೀಗೆ ನಾನಾ ರೀತಿಯ ಆಧುನಿಕ ತಿಂಡಿಗಳಲ್ಲಿ ಹೆಚ್ಚು ಬಳಸಲಾಗುತ್ತದೆ.
3 / 12
ಚೀಸ್ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಚೀಸ್ ಕ್ಯಾಲ್ಸಿಯಂ, ಕೊಬ್ಬು ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ.
4 / 12
ಇದು ಸತು, ರಂಜಕ ಮತ್ತು ರೈಬೋಫ್ಲಾವಿನ್ ಜೊತೆಗೆ ಹೆಚ್ಚಿನ ಪ್ರಮಾಣದ ವಿಟಮಿನ್ ಎ ಮತ್ತು ಬಿ 12 ಅನ್ನು ಹೊಂದಿರುತ್ತದೆ.
5 / 12
ಕೆಲವು ಅಧ್ಯಯನಗಳ ಪ್ರಕಾರ, ಚೀಸ್ ಮತ್ತಿತರ ಡೈರಿ ಉತ್ಪನ್ನಗಳು ನಿಮ್ಮ ಹಲ್ಲುಗಳು ಹುಳುಕಾಗದಂತೆ ರಕ್ಷಿಸುತ್ತದೆ.
6 / 12
ಚೀಸ್ ಸಂಯೋಜಿತ ಲಿನೋಲಿಯಿಕ್ ಆಮ್ಲದ (CLA) ಮೂಲವಾಗಿದೆ. ಇದು ನಿಮ್ಮ ಹೃದಯಕ್ಕೆ ಒಳ್ಳೆಯದು.
7 / 12
ಇದೀಗ ಜಪಾನ್‌ನ ಸಂಶೋಧಕರು ಚೀಸ್ ತಿನ್ನುವುದರಿಂದ ಬುದ್ಧಿಮಾಂದ್ಯತೆ ಅಥವಾ ಯಾವುದೇ ರೀತಿಯ ಮೆದುಳಿನ ಅಸ್ವಸ್ಥತೆಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಕಂಡುಹಿಡಿದಿದ್ದಾರೆ.
8 / 12
9 / 12
65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 1,500 ವ್ಯಕ್ತಿಗಳ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಅಧ್ಯಯನ ಮಾಡಿದ ನಂತರ, ನಿಯಮಿತವಾಗಿ ಚೀಸ್ ಸೇವಿಸುವವರು ಬುದ್ಧಿಮಾಂದ್ಯ ಅಥವಾ ಮೆದುಳಿನ ಬೆಳವಣಿಗೆಯಾಗದ ಇತರರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿದುಬಂದಿದೆ.
10 / 12
ನ್ಯೂಟ್ರಿಷನ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಚೀಸ್ ಮತ್ತು ಮೆದುಳಿನ ಆರೋಗ್ಯದ ನಡುವಿನ ಸಂಪರ್ಕವನ್ನು ವಿಶ್ಲೇಷಿಸಿದೆ.
11 / 12
ಚೀಸ್ ತಿನ್ನುವುದು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ ಅದರಿಂದ ಕೆಲವರಿಗೆ ಅಷ್ಟೇ ಆರೋಗ್ಯ ಸಮಸ್ಯೆಗಳು ಕೂಡ ಎದುರಾಗಬಹುದು.
12 / 12
ಮೃದುವಾದ ಚೀಸ್ ಕೆಲವೊಮ್ಮೆ ಲಿಸ್ಟೇರಿಯಾದಿಂದ ಕಲುಷಿತವಾಗಬಹುದು. ವಿಶೇಷವಾಗಿ ಅವುಗಳನ್ನು ಪಾಶ್ಚರೀಕರಿಸದ ಅಥವಾ ಕಚ್ಚಾ ಹಾಲಿನಿಂದ ತಯಾರಿಸಿದರೆ ಅದರಿಂದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಈ ಕಲುಷಿತ ಆಹಾರವನ್ನು ತಿನ್ನುವುದರಿಂದ ಅನಾರೋಗ್ಯ ಉಂಟಾಗಬಹುದು.