Winter Season: ಈ ಚಳಿಗಾಲದಲ್ಲಿ ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸಲು ವಿವಿಧ ಬಗೆಯ ಚಹಾಗಳು ಇಲ್ಲಿವೆ

Edited By:

Updated on: Nov 13, 2022 | 5:22 PM

ವಿವಿಧ ರುಚಿಯ ಚಹಾಗಳನ್ನು ಸವಿದು, ಈ ಚಳಿಗಾಲದ ಸಮಯದಲ್ಲಿ ಬೆಚ್ಚಗೆ ನಿಮ್ಮ ದಿನವನ್ನು ಪ್ರಾರಂಭಿಸಿ.

1 / 6
ವಿಶೇಷವಾಗಿ ಚಳಿಗಾಲದಲ್ಲಿ, ಬೆಚ್ಚಗಿನ ಮತ್ತು ಹಿತವಾದ ಚಹಾವು ಹೊರಗಿನ ಶೀತ ವಾತಾವರಣದಿಂದ ನಿಮ್ಮನ್ನು ಬೆಚ್ಚಗೆ ಸಹಾಯ ಮಾಡುತ್ತದೆ. ಆದ್ದರಿಂದ ಬೆಳಗಿನ ಅಥವಾ ಸಂಜೆಯ ಹೊತ್ತಿಗೆ ಈ ವಿವಿಧ ಬಗೆಯ ಚಹಾವನ್ನು ಸವಿಯಿರಿ

ವಿಶೇಷವಾಗಿ ಚಳಿಗಾಲದಲ್ಲಿ, ಬೆಚ್ಚಗಿನ ಮತ್ತು ಹಿತವಾದ ಚಹಾವು ಹೊರಗಿನ ಶೀತ ವಾತಾವರಣದಿಂದ ನಿಮ್ಮನ್ನು ಬೆಚ್ಚಗೆ ಸಹಾಯ ಮಾಡುತ್ತದೆ. ಆದ್ದರಿಂದ ಬೆಳಗಿನ ಅಥವಾ ಸಂಜೆಯ ಹೊತ್ತಿಗೆ ಈ ವಿವಿಧ ಬಗೆಯ ಚಹಾವನ್ನು ಸವಿಯಿರಿ

2 / 6

ಮಸಾಲಾ ಚಹಾ ಚಳಿಗಾಲದಲ್ಲಿ ನಿಮಗೆ ಒಂದು ಉತ್ತಮ ಆಯ್ಕೆಯಾಗಿದೆ. ಲವಂಗ, ಏಲಕ್ಕಿ, ದಾಲ್ಚಿನ್ನಿ ಮತ್ತು ಸ್ಟಾರ್ ಸೋಂಪುಗಳ ಮಿಶ್ರಣದೊಂದಿಗೆ ತಯಾರಿಸಲಾಗುವ ಈ ಚಹಾ ಶೀತ, ಕೆಮ್ಮುಗಳಿಗೂ ಉತ್ತಮ ಔಷಧಿಯಾಗಿದೆ.

3 / 6

ಶುಂಠಿ ಹಾಗೂ ಲಿಂಬೆಯ ರಸ ಜೊತೆಗೆ ಸಿಹಿಗಾಗಿ ಜೇನುತುಪ್ಪದೊಂದಿಗಿನ ಈ ಚಹಾ ಚಳಿಗಾಲದಲ್ಲಿ ರುಚಿಯ ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಿದೆ.

4 / 6

ಶುಂಠಿ ಮತ್ತು ಮೂಲೇತಿ ಚಹಾ ಚಳಿಗಾಲದಲ್ಲಿ ಪೌಷ್ಟಿಕಾಂಶವನ್ನು ಒದಗಿಸಲು ಸಹಾಯಕವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಚಹಾಕ್ಕೆ ನೀವು ಹಾಲು ಕೂಡ ಸೇರಿಸಬಹುದು.

5 / 6

ನಿಂಬೆ, ಅರಿಶಿನದ ಬೇರು ಮತ್ತು ಶುಂಠಿ ಜೊತೆಗೆ ಭಾರತೀಯ ಸಂಪೂರ್ಣ ಮಸಾಲೆಗಳ ತುಂಬಿದ ಪರಿಮಳಗಳಿಂದ ತುಂಬಿದ ಚಹಾವೇ ಕಧಾ ಚಹಾ. ಜೊತೆಗೆ ಜೇನುತುಪ್ಪವನ್ನು ಸೇರಿಸಿ ಸವಿದರೆ ಉತ್ತಮ ರುಚಿ ನೀಡುತ್ತದೆ.

6 / 6

ಕಾಶ್ಮೀರದ ಸಾಂಪ್ರದಾಯಿಕ ಚಹಾ. ಈ ಪಾಕವಿಧಾನವು ಗುಲಾಬಿ ದಳಗಳು, ಮಸಾಲೆ ಪದಾರ್ಥಗಳು, ಬಾದಾಮಿ, ಪಿಸ್ತಾ ಮತ್ತು ಅಡಿಗೆ ಸೋಡಾವನ್ನು ಬಳಸಿ ತಯಾರಿಸಲಾಗುತ್ತದೆ.

TV9 Web

TV9 Kannada

Read More
Loading...
Unable to load recommendations.
Follow Us