Updated on: Nov 13, 2022 | 7:21 PM
Hansika Motwani and Sohail Kathuria wedding will reportedly live streamed on OTT
ಮೂಲಗಳ ಪ್ರಕಾರ ಡಿಸೆಂಬರ್ 4ರಂದು ಹನ್ಸಿಕಾ ಮೋಟ್ವಾನಿ ಅವರ ಮದುವೆ ನಡೆಯಲಿದೆ. ಕೆಲವೇ ಕೆಲವು ಮಂದಿಗೆ ಮಾತ್ರ ಆಹ್ವಾನ ನೀಡಲಾಗುತ್ತಿದ್ದು, ಬಹಳ ಅದ್ದೂರಿಯಾಗಿ ವಿವಾಹ ನೆರವೇರಿಸಲು ಕುಟುಂಬದವರು ತೀರ್ಮಾನಿಸಿದ್ದಾರೆ.
ಸ್ಟಾರ್ ನಟಿಯ ಮದುವೆ ಕ್ಷಣಗಳನ್ನು ಪ್ರಸಾರ ಮಾಡಲು ಒಟಿಟಿ ಸಂಸ್ಥೆಯೊಂದು ಮುಂದೆ ಬಂದಿದೆ ಎನ್ನಲಾಗಿದೆ. ವಿವಾಹ ನೇರ ಪ್ರಸಾರ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ.
ಬಹುಭಾಷೆಯಲ್ಲಿ ಹನ್ಸಿಕಾ ಫೇಮಸ್ ಆಗಿದ್ದಾರೆ. ‘ಬಿಂದಾಸ್’ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ನಟಿಸುವ ಮೂಲಕ ಕರುನಾಡಿನ ಪ್ರೇಕ್ಷಕರಿಗೂ ಹನ್ಸಿಕಾ ಪರಿಚಿತರಾದರು. ಈಗ ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗುತ್ತಿದೆ.