ಹಳದಿಯಾದ ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ? ಇಲ್ಲಿದೆ ಮನೆಮದ್ದು

| Updated By: Pavitra Bhat Jigalemane

Updated on: Jan 26, 2022 | 11:12 AM

ದೇಹದ ಆರೋಗ್ಯದ ಜತೆಗೆ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಹಳದಿಯಾದ ಹಲ್ಲುಗಳನ್ನು ಬಿಳಿಯಾಗಿಸಲು ಕೆಲವರು ವೈದ್ಯರ ಬಳಿ ಹೋಗುತ್ತಾರೆ. ಅದಕ್ಕಿಂತ ಮೊದಲು ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.

1 / 7
ಹಲ್ಲುಗಳ ಆರೋಗ್ಯವಾಗಿರುವುದು ಅತೀ ಮುಖ್ಯವಾಗಿದೆ. ಕೆಲವೊಮ್ಮ ದೇಹದ ಆರೋಗ್ಯದಲ್ಲಿ ಏರುಪೇರಾದರೂ ಹಲ್ಲುಗಳ ಬಣ್ಣ ಬದಲಾಗುತ್ತವೆ. ಅದಕ್ಕೆ ಕೆಲವು ಕ್ರಮಗಳನ್ನು ಮನೆಯಲ್ಲೇ ಮಾಡಿಕೊಂಡರೆ ಬಿಳಿಯ ಹಲ್ಲುಗಳನ್ನು ಪಡೆಯಬಹುದು. ಈ ಕುರಿತು ಇಲ್ಲಿದೆ ಮಾಹಿತಿ.

2 / 7
ಬಾಯಿಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಮುಕ್ಕಳಿಸುವುದರಿಂದ ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಜತೆಗೆ ಹಲ್ಲಿಗೆ ಸಿಲುಕಿದ್ದ ಕೊಳೆಯೂ ಸ್ವಚ್ಛವಾಗಿ ಬಿಳಿಯ ಹಲ್ಲು ನಿಮ್ಮದಾಗುತ್ತದೆ.

3 / 7
ಬೇವು ಹಲ್ಲಿನ ಆರೋಗ್ಯಕ್ಕೆ ಅತ್ಯುತ್ತಮ ಮನೆಮದ್ದಾಗಿದೆ. ಬೇವಿನ ಕಡ್ಡಿಯಿಂದ ಹಲ್ಲುಗಳನ್ನು ಉಜ್ಜಿದರೆ ಹಲ್ಲಿನ ಬಣ್ಣವೂ ಬಿಳಿಯಾಗುತ್ತದೆ ಜತೆಗೆ ಕ್ಯಾವಿಟೀಸ್​ಗಳಿಂದಲೂ ರಕ್ಷಣೆ ದೊರಕುತ್ತದೆ.

4 / 7
ದಿನಕ್ಕೆರಡು ಬಾರಿ ಹಲ್ಲುಗಳನ್ನು ಉಜ್ಜಿರಿ. ಇದರಿಂದ ಹಲ್ಲುಗಳಲ್ಲಿರುವ ಕೊಳೆ ಸ್ವಚ್ಛವಾಗಿ ಬಿಳಿಯ ಹಲ್ಲು ನಿಮ್ಮದಾಗುತ್ತದೆ. ನೆನಪಿಡಿ ಹಲ್ಲುಜ್ಜುವಾಗ ಬ್ರಷ್​ನ ಆಯ್ಕೆ ಸರಿಯಾಗಿರಲಿ.

5 / 7
ಹಲ್ಲುಗಳನ್ನು ಸ್ವಚ್ಛಗೊಳಿಸವುದರ ಜತೆಗೆ ನಾಲಿಗೆಯನ್ನೂ ಕ್ಲೀನ್​ ಮಾಡಿಕೊಳ್ಳಿ. ನಾಲಿಗೆಯನ್ನು ಆಗಾಗ ಹಲ್ಲಿಗೆ ತಾಗಿಸುವುದರಿಂದ ಕ್ಯಾವಿಟೀಸ್​ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನಾಲಿಗೆಯ ಸ್ವಚ್ಛತೆಯೂ ಅತಿ ಮುಖ್ಯವಾಗಿದೆ.

6 / 7
ಆದಷ್ಟು ಹರ್ಬಲ್​ ಮೌತ್​ ವಾಷ್​ ಬಳಸಿ. ಜೇಷ್ಟಮದ್ದು ಅಥವಾ ತ್ರಿಫಲಾದ ಮೌತ್​ ವಾಷ್​ ಹಲ್ಲಿನ ಸ್ವಚ್ಛತೆಗೆ ಉತ್ತಮವಾಗಿದೆ. ಜತೆಗೆ ಬ್ಯಾಕ್ಟೀರಿಯಾಗಳನ್ನೂ ತೆಗೆದುಹಾಕುತ್ತದೆ.

7 / 7
ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಿ. ಇವು ಹಲ್ಲಿನ  ಆರೋಗ್ಯಕ್ಕೆ ಉತ್ತಮವಾಗಿದೆ. ಹಲ್ಲುಗಳನ್ನು ಬಲಗೊಳಿಸಿ ಬಿಳಿಯಾಗಿಯೂ ಇರಿಸುತ್ತದೆ.