ಪ್ರಭಾಸ್​ ಮದುವೆ ಆಗದೆ ಇರಲು ಕಾರಣವಾಯ್ತು ಆ ಒಂದು ವಿಚಾರ; ಮೌನ ಮುರಿದ ನಟ

Updated By: ರಾಜೇಶ್ ದುಗ್ಗುಮನೆ

Updated on: Mar 03, 2022 | 5:15 PM

ಎಲ್ಲರೂ ಒಂದು ಹಂತಕ್ಕೆ ಸೆಟಲ್​ ಆದ ನಂತರ ಮದುವೆ ಆಗೋಕೆ ಇಷ್ಟಪಡುತ್ತಾರೆ. ಆದರೆ, ಪ್ರಭಾಸ್​ ವಿಚಾರದಲ್ಲಿ ಹಾಗಿಲ್ಲ. ಅವರ ಬಳಿ ಎಲ್ಲವೂ ಇದೆ. ಆದರೆ, ಮದುವೆ ಮಾತ್ರ ಆಗುವ ಗೋಜಿಗೆ ಹೋಗಿಲ್ಲ.

1 / 5
ನಟ ಪ್ರಭಾಸ್​ ಅವರ ವಯಸ್ಸು ಈಗ 42. ಅವರು ಪ್ರತಿ ಸಿನಿಮಾಗೆ ಕೋಟಿಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಮೂರು ದೊಡ್ಡ ಪ್ರಾಜೆಕ್ಟ್​ಗಳು ಅವರ ಕೈಯಲ್ಲಿವೆ. ಅನೇಕ ಕಡೆಗಳಲ್ಲಿ ಆಸ್ತಿ ಹೊಂದಿದ್ದಾರೆ. ಸಾಕಷ್ಟು ಐಷಾರಾಮಿ ಕಾರುಗಳು ಅವರ ಬಳಿ ಇವೆ. ಆದರೆ, ಈ ವರೆಗೆ ಅವರು ಮದುವೆ ಮಾತ್ರ ಆಗಿಲ್ಲ.

2 / 5
ಎಲ್ಲರೂ ಒಂದು ಹಂತಕ್ಕೆ ಸೆಟಲ್​ ಆದ ನಂತರ ಮದುವೆ ಆಗೋಕೆ ಇಷ್ಟಪಡುತ್ತಾರೆ. ಆದರೆ, ಪ್ರಭಾಸ್​ ವಿಚಾರದಲ್ಲಿ ಹಾಗಿಲ್ಲ. ಅವರ ಬಳಿ ಎಲ್ಲವೂ ಇದೆ. ಆದರೆ, ಮದುವೆ ಮಾತ್ರ ಆಗುವ ಗೋಜಿಗೆ ಹೋಗಿಲ್ಲ. ಈ ವಿಚಾರದಲ್ಲಿ ಅವರ ಅಭಿಮಾನಿಗಳಲ್ಲಿ ಕುತೂಹಲ ಇದೆ. ಈಗ ಏಕೆ ಮದುವೆ ಆಗಿಲ್ಲ ಎನ್ನುವ ಪ್ರಶ್ನೆಗೆ ಪ್ರಭಾಸ್ ಉತ್ತರ ನೀಡಿದ್ದಾರೆ.

3 / 5
‘ರಾಧೆ ಶ್ಯಾಮ್​’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ಮುಂಬೈನಲ್ಲಿ ನಡೆದಿದೆ. ಈ ವೇಳೆ ಪ್ರಭಾಸ್​ ಕೂಡ ಇದ್ದರು. ಮಾಧ್ಯಮಗಳ ಜತೆ ಮಾತನಾಡುವಾಗ, ಸಿನಿಮಾ ವಿಚಾರದ ಜತೆಗೆ ಮದುವೆ ಬಗ್ಗೆಯೂ ಕೇಳಲಾಗಿದೆ. ಇದಕ್ಕೆ ಅವರು ನೇರವಾಗಿಯೇ ಉತ್ತರಿಸಿದ್ದಾರೆ.

4 / 5
‘ರಾಧೆ ಶ್ಯಾಮ್​’ ಸಿನಿಮಾದಲ್ಲಿ ಕೈ ನೋಡಿ ಭವಿಷ್ಯ ಹೇಳುವ ವ್ಯಕ್ತಿಯಾಗಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಇದೇ ಮಾದರಿಯಲ್ಲೇ ಅವರು ಈಗ ಉತ್ತರಿಸಿದ್ದಾರೆ. ‘ಪ್ರೀತಿ ವಿಚಾರದಲ್ಲಿ ನನ್ನ ಪ್ರಿಡಿಕ್ಷನ್​ಗಳು ಯಾವಾಗಲೂ ವಿಫಲವಾಗಿದೆ. ಹೀಗಾಗಿ ಈವರೆಗೆ ಮದುವೆ ಆಗಿಲ್ಲ’ ಎಂದಿದ್ದಾರೆ ಪ್ರಭಾಸ್.

5 / 5
ಈ ಮೊದಲು ಅನುಷ್ಕಾ ಶೆಟ್ಟಿ ಜತೆ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿತ್ತು. ಅನುಷ್ಕಾ ಕೂಡ ಈವರೆಗೆ ಮದುವೆ ಆಗಿಲ್ಲ. ‘ಬಾಹುಬಲಿ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು. ಆದರೆ, ಕೆಲ ಸಮಯದ ನಂತರ ಈ ವಿಚಾರದ ಬಗ್ಗೆ ಯಾವುದೇ ಅಪ್​ಡೇಟ್​ ಬರಲಿಲ್ಲ.

Published On - 3:59 pm, Thu, 3 March 22