
ಮಹಿಳೆಯರ ಮೊದಲ ಚಿನ್ನದ ಪದಕದ ಪಂದ್ಯದಲ್ಲಿ ಅನ್ಶು ಮಲಿಕ್ ಸೋತರು. ಮಹಿಳೆಯರ 57 ಕೆಜಿ ವಿಭಾಗದ ಫೈನಲ್‌ನಲ್ಲಿ ಹರಿಯಾಣದ ಕುಸ್ತಿಪಟು ನೈಜೀರಿಯಾದ ಒಡುನಾಯೊ ಆದಿಕುರೊ ವಿರುದ್ಧ 3-7 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಡಬೇಕಾಯಿತು. ನೈಜೀರಿಯಾದ ಎದುರಾಳಿಯು ಎರಡು ಬಾರಿ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಪುರುಷರ ಕುಸ್ತಿಯಲ್ಲಿ ಬಜರಂಗ್ ಪುನಿಯಾ ಭಾರತಕ್ಕೆ ಮೊದಲ ಚಿನ್ನ ಗೆದ್ದರು. ಪುರುಷರ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕೆನಡಾದ ಲಾಚ್ಲಾನ್ ಮೆಕ್‌ನೀಲ್ ಅವರು ಬಜರಂಗ್ ಅವರನ್ನು 9-2 ಅಂತರದಿಂದ ಸೋಲಿಸಿದರು.




Published On - 3:05 pm, Sat, 6 August 22