Country Without Airport: ಕೆಲವು ದೇಶಗಳಲ್ಲಿ ಈಗಲೂ ವಿಮಾನ ನಿಲ್ದಾಣಗಳಿಲ್ಲ ಎಂದು ನಿಮಗೆ ತಿಳಿದಿದೆಯೇ?

|

Updated on: Feb 26, 2023 | 1:41 PM

ವಿಶ್ವದ ಕೆಲವು ದೇಶಗಳಲ್ಲಿ ಈಗಲೂ ವಿಮಾನ ನಿಲ್ದಾಣಗಳಿಲ್ಲ. ಆದರೂ ಕೂಡ ನೆರೆಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿವೆ ಈ ರಾಷ್ಟ್ರಗಳು. ವಿಮಾನ ನಿಲ್ದಾಣಗಳನ್ನು ಹೊಂದಿರದ ದೇಶಗಳ ಕುರಿತ ಮಾಹಿತಿ ಇಲ್ಲಿದೆ.

1 / 6
ವಿಶ್ವದ ಕೆಲವು ದೇಶಗಳಲ್ಲಿ ಈಗಲೂ ವಿಮಾನ ನಿಲ್ದಾಣಗಳಿಲ್ಲ. ಆದರೂ ಕೂಡ ನೆರೆಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿವೆ ಈ ರಾಷ್ಟ್ರಗಳು.

2 / 6
ವ್ಯಾಟಿಕನ್ ಸಿಟಿ:  ಇದು ಪ್ರಪಂಚದ ಅತ್ಯಂತ ಚಿಕ್ಕ ದೇಶವಾಗಿದ್ದು, ಜನಸಂಖ್ಯೆ ಅತ್ಯಂತ ಕಡಿಮೆ ಇದ್ದು, ಇಲ್ಲಿ ವಿಮಾನ ನಿಲ್ದಾಣಕ್ಕೆ ಬೇಕಾಗುವಷ್ಟು ಸ್ಥಳವಿಲ್ಲ. ಪ್ರಪಂಚದಲ್ಲಿಯೇ ಅತ್ಯಂತ ಸಣ್ಣ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಪಡೆದಿದೆ. ನೀವು ವಿಮಾನದಲ್ಲಿ ಪ್ರಯಾಣಿಸಬೇಕಾದರೆ ರೈಲಿನಲ್ಲಿ 30 ನಿಮಿಷ ಸಂಚರಿಸಿದರೆ ಈ ದೇಶಕ್ಕೆ ಹತ್ತಿರವಿರುವ ಸಿಯಾಂಪಿನೊ ಮತ್ತು ಫಿಯುಮಿಸಿನೊ ವಿಮಾನ ನಿಲ್ದಾಣಗಳನ್ನು ಕಾಣಬಹುದು.

3 / 6
ಅಂಡೋರಾ: ಇತರ ದೇಶಗಳಂತೆ ಚಿಕ್ಕದಲ್ಲದಿದ್ದರೂ, ಅಂಡೋರಾದ ಪ್ರಿನ್ಸಿಪಾಲಿಟಿಯು ದೊಡ್ಡ ಮೇಲ್ಮೈ ವಿಸ್ತೀರ್ಣವನ್ನು ಹೊಂದಿದ್ದು ಅದು ಹಲವಾರು ವಿಮಾನ ನಿಲ್ದಾಣಗಳನ್ನು ಹೊಂದಿದೆ. ಆದರೆ, ಇಲ್ಲಿ ಸಮಸ್ಯೆ ಇರುವುದು ಪರ್ವತಗಳದ್ದೇ.

4 / 6
ಸ್ಯಾನ್ ಮರಿನೋ: ಸ್ಯಾನ್ ಮರಿನೋ ವಿಶ್ವದ ಅತ್ಯಂತ ಹಳೆಯ ದೇಶಗಳಲ್ಲಿ ಒಂದಾಗಿದ್ದು, ಇಟಲಿಯಿಂದ ಸಂಪೂರ್ಣವಾಗಿ ಸುತ್ತುವರಿದಿದೆ.  ಇದು ತುಂಬಾ ಚಿಕ್ಕದಾದ ದೇಶವಾಗಿರುವುದರಿಂದ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಇಡೀ ಸ್ಯಾನ್ ಮೆರಿನೊ ಸಮತಟ್ಟಾಗಿದ್ದು ಮತ್ತು ದಟ್ಟವಾದ ರಸ್ತೆ ಜಾಲವನ್ನು ಹೊಂದಿದೆ. ಜನರು ರಸ್ತೆಯ ಮೂಲಕ ಸ್ಯಾನ್ ಮೆರಿನೊದಿಂದ ಇಟಲಿಗೆ ಹೋಗಬಹುದು. ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಇಟಲಿಯ ರಿಮಿನಿ ವಿಮಾನ ನಿಲ್ದಾಣ.

5 / 6
ಮೊನಾಕೊ: ವ್ಯಾಟಿಕನ್ ಸಿಟಿಯ ನಂತರ ಮೊನಾಕೊ ವಿಶ್ವದ ಎರಡನೇ ಚಿಕ್ಕ ದೇಶವಾಗಿದೆ. ಈ ದೇಶವನ್ನು ಮೂರು ಕಡೆಗಳಿಂದ ಫ್ರಾನ್ಸ್‌ ಸುತ್ತುವರಿದಿರುವುದರಿಂದ, ಇದು ತನ್ನದೇ ಆದ ವಿಮಾನ ನಿಲ್ದಾಣದ ಸೌಲಭ್ಯವನ್ನು ಹೊಂದಿಲ್ಲ.

6 / 6
ಲಿಚ್ಟೆನ್‌ಸ್ಟೈನ್: ಈ ದೇಶವು ಚಿಕ್ಕದಾಗಿದ್ದು, ಹೆಚ್ಚು ಬೆಟ್ಟಗಳಿಂದ ಕೂಡಿದೆ.  ಈ ದೇಶದ ಸಂಪೂರ್ಣ ಪರಿಧಿಯು ಕೇವಲ 75 ಕಿಮೀ ವರೆಗೆ ವಿಸ್ತರಿಸುತ್ತದೆ. ಲಿಚ್ಟೆನ್‌ಸ್ಟೈನ್ ಯಾವುದೇ ವಿಮಾನ ನಿಲ್ದಾಣ ಹೊಂದಿಲ್ಲ. ಆದರೆ ಕಾರು, ಬಸ್ಸ್​​ಗಳ ಮೂಲಕ  ಸುಮಾರು 120 ಕಿಮೀ ದೂರದಲ್ಲಿರುವ ಜ್ಯೂರಿಚ್ ವಿಮಾನ ನಿಲ್ದಾಣವು ಈ ದೇಶಕ್ಕೆ ಹತ್ತಿರದಲ್ಲಿದೆ.

Published On - 1:39 pm, Sun, 26 February 23