ರಾಹುಲ್ ಪ್ರತಿಭಾವಂತ ಆಟಗಾರ ಎಂದಿರುವ ಶಾಸ್ತ್ರಿ, ರಾಹುಲ್ ತಮ್ಮ ಸಣ್ಣ ಇನ್ನಿಂಗ್ಸ್ ಅನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಬೇಕು. ಪ್ರತಿಭೆಯೇ ಸರ್ವಸ್ವವಲ್ಲ. ಬದಲಿಗೆ ಆಟದಲ್ಲಿ ಸ್ಥಿರತೆ ಇರಬೇಕು. ಅನೇಕ ಪ್ರತಿಭಾವಂತ ಆಟಗಾರರು ಟೀಂ ಇಂಡಿಯಾದ ಬಾಗಿಲು ತಟ್ಟುತ್ತಿದ್ದಾರೆ. ಇಲ್ಲಿ ನಾನು ಕೇವಲ ರಾಹುಲ್ ಸ್ಥಾನದ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ಬದಲಿಗೆ ತಂಡದ ಮಧ್ಯಮ ಕ್ರಮಾಂಕ ಮತ್ತು ಬೌಲಿಂಗ್‌ನಲ್ಲಿಯೂ ಹೊಸ ಪ್ರತಿಭೆಗಳು ಬರುತ್ತಿವೆ ಎಂದಿದ್ದಾರೆ.