Updated on: Jan 09, 2023 | 7:00 AM
ಸ್ವೀಟ್ ಕಾರ್ನ್ ಆರೋಗ್ಯಕರ ತರಕಾರಿಗಳಲ್ಲಿ ಒಂದು. ಇದು ಮೃದು ಮತ್ತು ರುಚಿಕರವಾಗಿರುತ್ತದೆ. ವಿವಿಧ ರೀತಿಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಅದರಲ್ಲೂ ಸಲಾಡ್ ಮಾಡುವುದಾದರೆ ಅದರಲ್ಲಿ ಸ್ವಲ್ಪ ಸ್ವೀಟ್ ಕಾರ್ನ್ ಹಾಕಿದರೆ ತುಂಬಾ ಟೇಸ್ಟಿ ಮತ್ತು ಉತ್ತಮವಾಗಿರುತ್ತದೆ. ಸ್ವೀಟ್ ಕಾರ್ನ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಸ್ವೀಟ್ ಕಾರ್ನ್ ಇದು ಹೃದ್ರೋಗ ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಇತ್ಯಾದಿಗಳಿಗೆ ತುಂಬಾ ಪರಿಣಾಮಕಾರಿಯಾಗಿದೆ. ತೂಕ ಹೆಚ್ಚಿಸಲು ಕೂಡ ಸಹಕಾರಿಯಾಗಿದೆ.
ಒಂದು ಕಪ್ ಸ್ವೀಟ್ ಕಾರ್ನ್ 342 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಹಾಗಾಗಿ ಬೇಗ ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ಸ್ವೀಟ್ ಕಾರ್ನ್ ತಿನ್ನಲು ಆರಂಭಿಸಬಹುದು. ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಸ್ವೀಟ್ ಕಾರ್ನ್ನಲ್ಲಿ ನಾರಿನಂಶ ಅಧಿಕವಾಗಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ತಡೆಯುತ್ತದೆ. ಇದು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಮೆಕ್ಕೆಜೋಳವು ಮೆಗ್ನೀಸಿಯಮ್, ಮ್ಯಾಂಗನೀಸ್, ಕಬ್ಬಿಣ, ತಾಮ್ರ, ಸತು ಮತ್ತು ಸೆಲೆನಿಯಮ್ನ್ನು ಹೊಂದಿರುತ್ತದೆ. ಇದು ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅವಶ್ಯಕವಾಗಿದೆ.