ನಟ ಶಿವರಾಜ್ಕುಮಾರ್ ಮೇಲೆ ಪರಭಾಷೆಯವರಿಗೂ ವಿಶೇಷ ಪ್ರೀತಿ ಇದೆ. ಬೆಂಗಳೂರಿಗೆ ಆಗಮಿಸುವ ಪರಭಾಷೆಯ ಅನೇಕ ಸ್ಟಾರ್ಗಳು ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡುತ್ತಾರೆ. ಈಗ ನಟ ನಾನಿ ಅವರು ಶಿವಣ್ಣನ ನಿವಾಸಕ್ಕೆ ತೆರಳಿದ್ದಾರೆ.
ನಾನಿ ಹಾಗೂ ಮೃಣಾಲ್ ಠಾಕೂರ್ ಅವರು ‘ಹಾಯ್ ನಾನ್ನ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರ ಡಿಸೆಂಬರ್ 7ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಾನಿ ಅವರು ಭಾಗಿ ಆಗಿದ್ದಾರೆ.
ಇಂದು (ಡಿಸೆಂಬರ್ 5) ಬೆಂಗಳೂರಿನಲ್ಲಿ ‘ಹಾಯ್ ನಾನ್ನ’ ಸಿನಿಮಾದ ಸುದ್ದಿಗೋಷ್ಠಿ ಇದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 4ರಂದು ನಾನಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಅವರು ಶಿವಣ್ಣನ ಭೇಟಿ ಮಾಡಿದ್ದಾರೆ.
ಶಿವರಾಜ್ಕುಮಾರ್ ಹಾಗೂ ನಾನಿ ಮಧ್ಯೆ ಒಳ್ಳೆಯ ಗೆಳೆತನ ಇದೆ. ಶಿವಣ್ಣ ಅವರು ಪ್ರೀತಿಯಿಂದ ಅಪ್ಪುಗೆ ಕೊಟ್ಟು ನಾನಿಯನ್ನು ಸ್ವಾಗತಿಸಿದ್ದಾರೆ. ಇಬ್ಬರೂ ಉಭಯಕುಶಲೋಪರಿ ಮಾತನಾಡಿದ್ದಾರೆ.
‘ಹಾಯ್ ನಾನ್ನ’ ಸಿನಿಮಾ ಕುರಿತು ನಾನಿ ಹಾಗೂ ಶಿವಣ್ಣ ಮಾತನಾಡಿದ್ದಾರೆ. ಶಿವರಾಜ್ಕುಮಾರ್ ಅವರು ನಾನಿಯ ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಗೀತಾ ಶಿವರಾಜ್ಕುಮಾರ್, ಶಿವರಾಜ್ಕುಮಾರ್, ಸಚಿವ ಮಧು ಬಂಗಾರಪ್ಪ ಹಾಗೂ ನಾನಿ ಅವರು ಒಟ್ಟಾಗಿ ನಿಂತು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
Published On - 11:07 am, Tue, 5 December 23