2023ರ ವಿಧಾನಸಭೆ ಚುನಾವಣೆಗೆ ರಾಜ್ಯ ಪ್ರವಾಸಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಯಾರಾಗಿದ್ದು, ಅವರಿಗಾಗಿ ವಿಶೇಷ ಹೈಟೆಕ್ ಬಸ್ (ಕ್ಯಾರಾವನ್) ಒಂದನ್ನು ಸಿದ್ಧಗೊಳಿಸಲಾಗಿದೆ.
ತಮಿಳುನಾಡು ಸಿಎಂ ಎಂ. ಕೆ ಸ್ಟಾಲಿನ್ ಅವರ ಬಳಿ ಇವರು ಪ್ರಚಾರ ಬಸ್ ಮಾದರಿಯಲ್ಲಿಯೇ ಈ ಬಸ್ನ್ನು ಸಹ ತಯಾರಿಸಲಾಗಿದೆ. ತಮಿಳುನಾಡಿನ ಕೊಯಂಬತ್ತುರಿನಲ್ಲಿ ಬಸ್ ಸಿದ್ದಗೊಂಡಿದೆ.
ಸಿದ್ಧರಾಮಯ್ಯ ಅವರ ಕ್ಯಾರಾವನ್ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಚಾಲಕನನ್ನು ಹೊರತುಪಡಿಸಿ 6 ಪ್ರಯಾಣಿಕರಿಗೆ ಸೀಟ್ ವ್ಯವಸ್ಥೆ ಇದೆ.
ಇನ್ನು ರೆಸ್ಟ್ ಮಾಡಲು ಡಬಲ್ ಕಾಟ್, ಕೈ ತೊಳೆಯಲು ವಾಷ್ ಬೇಸಿನ್, ಸುಸಜ್ಜಿತವಾದ ಟಾಯ್ಲೆಟ್ ರೂಂ, ಏರ್ ಕಂಡಿಷನ್ ಮತ್ತು ಮೂರು ಎಲ್ಇಡಿ ಟಿವಿಗಳಿವೆ.
ಜೊತೆಗೆ ಸಿದ್ಧರಾಮಯ್ಯ ಬಸ್ಸಿನ ಮೇಲೆ ನಿಂತು ಭಾಷಣ ಮಾಡಲು ಮೈಕ್, ಸ್ಪೀಕರ್ ಮತ್ತು ಸುಸಜ್ಜಿತವಾದ ಲಿಫ್ಟ್ ವ್ಯವಸ್ಥೆ ಕೂಡ ಈ ಬಸ್ನಲ್ಲಿ ಮಾಡಲಾಗಿದೆ.
Published On - 4:57 pm, Sun, 13 November 22