ಮಲ್ಲೇಶ್ವರಂ: ಕೂಲ್ ಕೂಲ್ ಸಿಟಿಯಲ್ಲಿ ಗರಮ್ ಗರಾಮ್ ಕಡಲೇಕಾಯಿ ಪರಿಷೆ, ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜದ ಅಲಂಕಾರ
ಮಳೆ ನಡುವೆಯೂ ಬೆಂಗಳೂರಿನ ಮಲ್ಲೇಶ್ವರಂ ದೇವಸ್ಥಾನಗಳಲ್ಲಿ ಕಡಲೆಕಾಯಿಯ ಅಬ್ಬರ ಜೋರಾಗಿದೆ. ದೇವರಿಗೆ ಕಡಲೆಕಾಯಿ ಬೀಜಗಳಿಂದ ಸಿಂಗಾರ ಮಾಡಲಾಗಿದ್ದು ಭಕ್ತರು ದೇವರ ದರ್ಶನ ಪಡೆದು ಮನ ಸೋತರು.
Updated on:Nov 13, 2022 | 2:30 PM

ಮಳೆ ನಡುವೆಯೂ ಬೆಂಗಳೂರಿನ ಮಲ್ಲೇಶ್ವರಂ ದೇವಸ್ಥಾನಗಳಲ್ಲಿ ಕಡಲೆಕಾಯಿಯ ಅಬ್ಬರ ಜೋರಾಗಿದೆ. ದೇವರಿಗೆ ಕಡಲೆಕಾಯಿ ಬೀಜಗಳಿಂದ ಸಿಂಗಾರ ಮಾಡಲಾಗಿದ್ದು ಭಕ್ತರು ದೇವರ ದರ್ಶನ ಪಡೆದು ಮನ ಸೋತರು.

ಮಳೆ, ಚಳಿ ನಡುವೆಯೇ ಸಿಟಿ ಮಂದಿ ಕಡಲೇಕಾಯ್ ಸವಿಯುತ್ತಿದ್ದಾರೆ. ಮಲ್ಲೇಶ್ವರಂನ ಕಾಡುಮಲ್ಲೇಶ್ವರಂ ದೇಗುಲದ ಬಳಿ ಕಡಲೇಕಾಯಿ ಪರಿಷೆ ಆರಂಭವಾಗಿದೆ.

ನ.12ರಂದು ಶುರುವಾದ ಪರಿಷೆಯಲ್ಲಿ, ಕಾಡು ಮಲ್ಲೇಶ್ವರನಿಗೆ ಕಡಲೆಕಾಯಿಯಿಂದಲೇ ಅಲಂಕಾರ ಮಾಡಲಾಗಿತ್ತು. ಕಡಲೆಕಾಯಿ ಹಾರ ಮಾಡಿ ಶಿವನಿಗೆ ಹಾಕಲಾಗಿತ್ತು.

ಶಿವನ ದೇಗುಲದ ಪಕ್ಕದ ಗಂಗಮ್ಮ ದೇವಿಗೆ ಕಡಲೇಕಾಯಿ ಬೀಜಗಳಿಂದಲೇ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 6 ಕ್ವಿಂಟಾಲ್ ಕಡಲೆಕಾಯಿ ಬಳಸಿ ಮಾಡಿದ್ದ ಸಿಂಗಾರ ಮನಮೋಹಕವಾಗಿತ್ತು.

ಮೂರು ದಿನ ಪರಿಷೆ ನಡೆಯಲಿದ್ದು, ಇಂದು ಮತ್ತು ನಾಳೆ ಜನರ ಸಂಖ್ಯೆ ಹೆಚ್ಚಾಗಲಿದೆ. ಇನ್ನು, ಪರಿಷೆಯಲ್ಲಿ ವಿವಿಧ ರೀತಿಯ ತಿಂಡಿ, ತಿನಿಸು, ವಸ್ತುಗಳು ಜನರನ್ನ ಸೆಳೆಯುತ್ತಿವೆ.

ಸಿಲಿಕಾನ್ ಸಿಟಿ ಸಿಕ್ಕಾಪಟ್ಟೆ ಕೂಲ್ ಕೂಲ್ ಆಗಿದೆ. ಈ ನಡುವೆ ಕಡಲೇಕಾಯಿ ಪರಿಷೆ ಶುರುವಾಗಿದ್ದು, ಜನರೆಲ್ಲ ಗರಮ್ ಗರಾಮ್ ಕಡಲೇ ಕಾಯಿ ತಿನ್ನುತ್ತಿದ್ದಾರೆ.
Published On - 2:30 pm, Sun, 13 November 22