ಅತಿ ಹೆಚ್ಚು ಸಂಖ್ಯೆಯ ಅವಳಿ ಮಕ್ಕಳು ಹುಟ್ಟುವ ಭಾರತದ ಗ್ರಾಮ ಯಾವುದು ಗೊತ್ತಾ?! ಕುತೂಹಲಕಾರಿ ಮಾಹಿತಿ ಇಲ್ಲಿದೆ

| Updated By: ganapathi bhat

Updated on: Feb 20, 2022 | 12:15 PM

Twins Village: ದೇಶದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುವ ಗ್ರಾಮವೂ ಇದೆ. ಕೇರಳದ ಮಣಪ್ಪಪುರಂ ಜಿಲ್ಲೆಯ ಕೊಡಿನಿ ಗ್ರಾಮದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುತ್ತಾರೆ. ಆದರೆ ಇದಕ್ಕೆ ಕಾರಣವೇನು ಎಂಬುದು ವಿಜ್ಞಾನಿಗಳಿಗೆ ಇನ್ನೂ ನಿಗೂಢವಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಗಳು ಇಲ್ಲಿದೆ..

1 / 5
ದೇಶದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುವುದು ಎಲ್ಲಿ? ಹೀಗೊಂದು ವಿಶೇಷವೂ ಇದೆಯಾ? ಹೌದು, ನಿಮಗೆ ಹೀಗೆ ಅನಿಸಬಹುದು. ಆದರೆ. ಅತಿ ಹೆಚ್ಚು ಅವಳಿ ಮಕ್ಕಳು ಜನಿಸುವ ಗ್ರಾಮವೂ ಇದೆ. ಕೇರಳದ ಮಣಪ್ಪಪುರಂ ಜಿಲ್ಲೆಯ ಕೊಡಿನಿ ಗ್ರಾಮದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುತ್ತಾರೆ. ಆದರೆ ಇಲ್ಲಿ ಏಕೆ ಅತಿ ಹೆಚ್ಚು ಅವಳಿ ಮಕ್ಕಳೇ ಜನಿಸುತ್ತಾರೆ ಎಂಬುದು ವಿಜ್ಞಾನಿಗಳಿಗೆ ಇನ್ನೂ ನಿಗೂಢವಾಗಿದೆರುವ ವಿಚಾರ. ದಿ ನ್ಯೂಸ್ ಮಿನಿಟ್ ವರದಿ ಪ್ರಕಾರ 2000 ಕುಟುಂಬಗಳಿರುವ ಈ ಗ್ರಾಮದಲ್ಲಿ 400 ಜೋಡಿ ಅವಳಿ ಮಕ್ಕಳಿದ್ದಾರೆ! ಈ ಗ್ರಾಮವನ್ನು ಅವಳಿ ಗ್ರಾಮ ಎಂದೂ ಕರೆಯುತ್ತಾರೆ.

2 / 5
ದಿ ನ್ಯೂಸ್ ಮಿನಿಟ್ ವರದಿಯ ಪ್ರಕಾರ, ಈ ಗ್ರಾಮದಲ್ಲಿ ವಾಸಿಸುವ 46 ವರ್ಷದ ಶಂಸಾದ್ ಬೇಗಂ ಅವರು 19 ವರ್ಷಗಳ ಹಿಂದೆ ಅವರಿಗೆ ಅವಳಿ ಹೆಣ್ಣು ಮಕ್ಕಳು ಹುಟ್ಟಿದರು ಎಂದು ಹೇಳುತ್ತಾರೆ. ಅವರ ಹೆಸರನ್ನು ಶಹಜಾರ ಮತ್ತು ಇಶಾನ ಎಂದು ಇಡಲಾಯಿತು. ಆದರೆ ಅವರು ಹೇಳುವಂತೆ ಅವರ ಕೊನೆಯ ಐದು ತಲೆಮಾರುಗಳಲ್ಲಿ ಅವಳಿ ಮಕ್ಕಳು ಹುಟ್ಟಿರಲಿಲ್ಲ.

3 / 5
ಅವಳಿ ಮಕ್ಕಳು ಕೆಲವರಿಗೆ ಸಂತೋಷದ ಕಾರಣ ಆಗಿ ಕಂಡುಬಂದರೆ ಮತ್ತೆ ಕೆಲವರಿಗೆ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ. ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿರುವ ಅಭಿಲಾಷ್ ತನಗೆ ಇಬ್ಬರು ಅವಳಿ ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ. ಆರ್ಥಿಕವಾಗಿ ಅಷ್ಟಾಗಿ ಸಬಲರಲ್ಲದ ಅವರಿಗೆ ಇದು ಸ್ವಲ್ಪ ಕಷ್ಟವೂ ಆಗಿದೆ. ಅಂತಹ ಕುಟುಂಬಗಳಿಗೆ ಯಾವುದೇ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ಯಾವುದೇ ಯೋಜನೆ ರೂಪಿಸದಿರುವುದು ಅವರ ಆತಂಕಕ್ಕೆ ಕಾರಣವಾಗಿದೆ. ಈಗ 4 ಮಕ್ಕಳಿಂದಾಗಿ ಆರ್ಥಿಕ ಸ್ಥಿತಿ ಹದಗೆಡುತ್ತಿದೆ ಎಂದು ಅವರು ಹೇಳಿದ್ದಾರೆ.

4 / 5
ಈ ಗ್ರಾಮದಲ್ಲಿ ಏಕೆ ಇಷ್ಟೊಂದು ಅವಳಿ ಮಕ್ಕಳು ಹುಟ್ಟುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹಲವು ಪ್ರತಿಷ್ಠಿತ ಸಂಸ್ಥೆಗಳು ಸಂಶೋಧನೆ ನಡೆಸಿವೆ. ಇವುಗಳಲ್ಲಿ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ, ಲಂಡನ್ ವಿಶ್ವವಿದ್ಯಾಲಯ, ಹೈದರಾಬಾದ್, ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯ ಸೇರಿವೆ. ಈ ರಹಸ್ಯವನ್ನು ಪರಿಹರಿಸಲು ಸಂಶೋಧಕರು, ಲಾಲಾರಸ ಮತ್ತು ಕೂದಲಿನ ಮಾದರಿಗಳನ್ನು ತೆಗೆದುಕೊಂಡು ಮತ್ತು ಅವುಗಳ ಮೂಲಕ ಡಿಎನ್ಎ ಪರೀಕ್ಷೆ ಮಾಡಲಾಗಿದೆ.

5 / 5
ಕೇರಳದ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯದ ಸಂಶೋಧಕ ಪ್ರೊಫೆಸರ್ ಇ ಪ್ರೀತಮ್ ಹೇಳುವಂತೆ, ಇದು ಆನುವಂಶಿಕ ಕಾರಣಗಳಿಂದ ನಡೆಯುತ್ತಿದೆ ಎಂದು ಅನೇಕ ವಿಜ್ಞಾನಿಗಳು ನಂಬಿದ್ದಾರೆ. ವಿವಿಧ ಸಂಸ್ಥೆಗಳು ನಡೆಸಿದ ಸಂಶೋಧನೆಯು ಸಮಸ್ಯಾತ್ಮಕವಾಗಿ ಇರುವ ಏನನ್ನೂ ಬಹಿರಂಗಪಡಿಸಿಲ್ಲ. ಈ ಗ್ರಾಮದಲ್ಲೇ ಏಕೆ ಹೆಚ್ಚು ಅವಳಿ ಮಕ್ಕಳು ಜನಿಸುತ್ತಾರೆ ಎಂಬುದು ಇನ್ನೂ ಪರಿಪೂರ್ಣವಾಗಿ ಬಿಡಿಸಲಾಗದ ಗಂಟಾಗಿದೆ.

Published On - 12:14 pm, Sun, 20 February 22