Updated on: Feb 21, 2022 | 8:19 AM
ಬೀನ್ಸ್ ಮತ್ತು ದ್ವಿದಳ ಧಾನ್ಯಗಳಲ್ಲಿ ರಾಫಿನೋಸ್ ಅಧಿಕವಾಗಿರುವ ಕಾರಣ ದೇಹಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಎಲ್ಲಾ ಬೀನ್ಸ್ ಮತ್ತು ಕಾಳುಗಳು ಅಜೀರ್ಣವನ್ನು ಉಂಟುಮಾಡುವುದಿಲ್ಲ. ಅರ್ಧ ಬೇಯಿಸಿದ ಕಾಳುಗಳನ್ನು ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ.
ಹೂಕೋಸಿನಲ್ಲಿ ಅಧಿಕ ಪ್ರಮಾಣದ ರಾಫಿನೋಸ್ ಇರುವುದರಿಂದ ಗ್ಯಾಸ್ಟ್ರಿಕ್ಗೆ ಕಾರಣವಾಗುತ್ತದೆ. ಹೀಗಗಿ ಹೂಕಸನ್ನು ಹೆಚ್ಚು ಸೇವಿಸುವುದು ದೇಹಕ್ಕೆ ಒಳಿತಲ್ಲ.
ಈರುಳ್ಳಿ ದೇಹಕ್ಕೆ ಉತ್ತಮ. ಆದರೆ ಅರ್ಧ ಬೆಂದ ಈರುಳ್ಳಿ ಅಥವಾ ಕೆಲಬವು ಹಸಿ ಈರುಳ್ಳಿ ಸೇವನೆಯಿಂದ ಗ್ಯಾಸ್ಟ್ರಿಕ್ ಉಂಟಾಗುತ್ತದೆ.
gಓದಿಯಲ್ಲಿರುವ ಝೆಲೆಟಿನ್ ಅಂಶಗಳು ಗ್ಯಾಸ್ಟ್ರಿಕ್ಗೆ ಕಾರಣವಾಗುತ್ತದೆ. ಅದೇ ಕಾರಣಕ್ಕೆ ಗೋದಿಯ ಪದಾರ್ಥ ತಿಂದ ಮೇಲೆ ಹೆಚ್ಚು ನೀರು ಕುಡಿಯಬೇಕು ಎಂದು ಹೇಳುವುದು.
ಎಣ್ಣೆಯಲ್ಲಿ ಕರಿದ ಎಲ್ಲಾ ಆಹಾರಗಳು ಗ್ಯಾಸ್ಟ್ರಿಕ್ ಅನ್ನು ಉಂಟು ಮಾಡುತ್ತೆವೆ. ಹೀಗಾಗಿ ಕರಿದ ಪದಾರ್ಥಗಳ ಸೇವನೆಗೂ ಮುನ್ನ ಎಚ್ಚರವಹಿಸಿ,
ಸೌತೆಕಾಯಿಯಿಂದಲೂ ಅಜೀರ್ಣ ಸಮಸ್ಯೆ ಕಾಣಬಹುದು. ಸೌತೆಕಾಯಿಯ ಅತಿಯಾದ ಸೇವನೆಯಿಂದ ಹೊಟ್ಟೆ ನೋವಿನಂತಹ ಸಮಸ್ಯೆ ಕಾಡುತ್ತದೆ.
ಬಾರ್ಲಿಯಲ್ಲಿ ಯಥೇಚ್ಛವಾದ ಪೈಬರ್ ಗುಣಗಳಿವೆ. ಆದರೆ ಪೈಬರ್ ಅತಿಯಾದ ಸೇವನೆಯಿಂದ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳಲಿದೆ.
ಹಾಲು, ಮೊಸರಿನಂತಹ ಡೈರಿ ಉತ್ಪನ್ನಗಳು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಅಡುಗೆಯನ್ನು ರುಚಿಯಾಗಿಸಲು ಬೆಳ್ಳುಳ್ಳಿ ಸಹಕಾರಿ. ಆದರೆ ಅದು ಅಷ್ಟೇ ಗ್ಯಾಸ್ಟ್ರಿಕ್ ಉಂಟು ಮಾಡುವ ಮಸಾಲೆ ಪದಾರ್ಥವಾಗಿದೆ.