ಹಿಂದೂ ಮುಸ್ಲಿಂ ಭಾವ್ಯಕ್ಯೆತೆಗೆ ಸಾಕ್ಷಿಯಾದ ರಾಮನವಮಿ: ಇಲ್ಲಿದೆ ನೋಡಿ ಶೋಭಾಯಾತ್ರೆಯ ಝಲಕ್​

|

Updated on: Mar 31, 2023 | 11:23 AM

ಅಲ್ಲಿ ರಾಮನ ಭವ್ಯ ಮೂರ್ತಿಯ ಅದ್ದೂರಿ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ಸಾವಿರಾರು ರಾಮಭಕ್ತರು ಭಾಗಿಯಾಗಿ ಕುಣಿದು ಕುಪ್ಪಳಿಸಿದ್ರು. ಒಂದೆಡೆ ಭವ್ಯ ಶೋಭಾಯಾತ್ರೆ ನಡೆದರೆ ಮತ್ತೊಂದಡೆ ಹಿಂದೂ ಮುಸ್ಲಿಂ ಭಾವ್ಯಕ್ಯೆತೆಗೆ ಕೂಡ ರಾಮನವಮಿ ಸಾಕ್ಷಿಯಾಯ್ತು. ಮುಸ್ಲಿಂ ಭಾಂದವರು ರಾಮನವಮಿ ಶೋಭಾಯಾತ್ರೆಯಲ್ಲಿ ಭಾಗಿಯದವರಿಗೆ ತಂಪು ಪಾನಕ ನೀಡಿದ್ರು.

1 / 10
ಒಂದೆಡೆ ಭಾರತ್ ಕಾ ಬಚ್ಚಾ ಬಚ್ಚಾ,  ಜೈ ಶ್ರೀರಾಮ ಎನ್ನುವ ಹಾಡು, ಡಿಜೆ ಸದ್ದು, ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೇ ಸೇರಿರುವ ಸಾವಿರಾರು ಯುವಕರು ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದರೆ, ಮತ್ತೊಂದಡೆ ಎಲ್ಲಡೆ ರಾರಾಜಿಸುತ್ತಿರುವ ಕೇಸರಿ ಬಟ್ಟೆ ಮತ್ತು ರಾಮನ ಭವ್ಯ ಮೂರ್ತಿಯ ಮೆರವಣಿಗೆ. ಇಂತಹದೊಂದು ದೃಶ್ಯ ಕಂಡುಬಂದಿದ್ದು ಕಲಬುರಗಿ ನಗರದಲ್ಲಿ.

2 / 10
ಹೌದು ನಿನ್ನೆ(ಮಾ.30) ರಾಮನವಮಿಯನ್ನ ದೇಶದಾದ್ಯಂತ ಅನೇಕ ಕಡೆ ಆಚರಿಸಲಾಗಿದ್ದು. ಅದರಂತೆ  ಕಲಬುರಗಿ ನಗರದಲ್ಲೂ ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ರಾಮನವಮಿಯನ್ನು ಆಚರಿಸಲಾಗಿದೆ.

3 / 10
ರಾಮನವಮಿ ಶೋಭಾಯಾತ್ರೆ ಸಮಿತಿ ವತಿಯಿಂದ ಕಳೆದ ಅನೇಕ ವರ್ಷಗಳಿಂದ ಕಲಬುರಗಿ ನಗರದಲ್ಲಿ ರಾಮನವಮಿ ದಿವಸ ಶೋಭಾಯಾತ್ರೆಯನ್ನು ನಡೆಸಲಾಗುತ್ತಿದೆ. ಇಂದು ಕೂಡ ಕಲಬುರಗಿ ನಗರದಲ್ಲಿ ಅದ್ದೂರಿಯಾಗಿ ಶ್ರೀರಾಮನ ಹದಿನೈದು ಅಡಿ ಭವ್ಯ ಮೂರ್ತಿಯ ಅದ್ದೂರಿ ಮೆರವಣಿಗೆ ನಡೆಯಿತು.

4 / 10
ನಗರದ ರಾಮತೀರ್ಥದಿಂದ ಆರಂಭವಾದ ಮೆರವಣಿಗೆ ನಗರದ ಖಾದ್ರಿ ಚೌಕ್, ಶಹಬಜಾರ್ ನಾಕಾ, ಗಂಜ್ ಪ್ರದೇಶದ ಮೂಲಕ ಹಾದು, ಜಗತ್​ವರೆಗೆ ಸುಮಾರು ಆರು ಕಿಲೋ ಮೀಟರವರೆಗೆ ಭವ್ಯ ಶೋಬಾಯಾತ್ರೆ ನಡೆಯಿತು.

5 / 10
ಈ ಭವ್ಯ ಶೋಭಾಯಾತ್ರೆಯಲ್ಲಿ ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಜನರು ಆಗಮಿಸಿ ರಾಮನಾಮ ಜಪ ಮಾಡಿದರು. ಕೇಸರಿ ಟವಲ್​ಗಳನ್ನು ಹಾಕಿಕೊಂಡು ಅದ್ದೂರಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ್ರು.

6 / 10
ಇನ್ನು ಕಲಬುರಗಿಯಲ್ಲಿ ನಡೆಯುವ ರಾಮನವಮಿಗೆ ಯಾರು ಕೂಡ ಮುಂದಾಳತ್ವ ವಹಿಸೋದಿಲ್ಲ. ಬದಲಾಗಿ ಸಾರ್ವಜನಿಕರೆಲ್ಲರೂ ಮುಂದೆ ನಿಂತು ಅದ್ದೂರಿಯಾಗಿ ರಾಮನವಮಿ ಶೋಬಾಯಾತ್ರೆಯನ್ನು ನಡೆಸುತ್ತಾರೆ.  ಹಿಂದೂ ಸಂಘಟನೆಗಳ ಮುಖಂಡರು, ಹಿಂದೂಪರ ಸಮಾಜದ ಜನರು, ಜಾತಿ ಭೇದ ಮರೆತು ರಾಮನವಮಿ ಶೋಭಾಯಾತ್ರೆಯಲ್ಲಿ ಭಾಗಿಯಾಗುತ್ತಾರೆ.

7 / 10
ಕಲಬುರಗಿ ನಗರದಲ್ಲಿ ನಡೆಯುವ ರಾಮನವಮಿ ಶೋಭಾಯಾತ್ರೆಯ ಮತ್ತೊಂದು ವಿಶೇಷತೆ ಅಂದರೆ ಸರ್ವಧರ್ಮಗಳ ಸಮನ್ವಯತೆ. ಹೌದು ಅನೇಕ ಕಡೆ ರಾಮನವಮಿ ಶೋಭಾಯಾತ್ರೆ ಹಿಂದೂ ಮುಸ್ಲಿಂ ನಡುವೆ ಕಂದಕವನ್ನು ಹೆಚ್ಚಿಸಿದರೆ, ಕಲಬುರಗಿ ನಗರದಲ್ಲಿ ರಾಮನವಮಿ ಶೋಭಾಯಾತ್ರೆ ಹಿಂದೂ ಮುಸ್ಲಿಂ ನಡುವೆ ಭಾವ್ಯಕ್ಯತೆಯನ್ನು ಹೆಚ್ಚಿಸುತ್ತದೆ.

8 / 10
ಈ ಶೋಭಾಯಾತ್ರೆಯಲ್ಲಿ ಭಾಗಿಯಾಗುವ ಸಾವಿರಾರು ಮುಸ್ಲಿಂ ಬಾಂಧವರು ತಾವೇ ಮುಂದಾಗಿ ಪಾನಕ, ಮಜ್ಜಿಗೆಯನ್ನು ತಯಾರಿಸಿ ವಿತರಿಸುತ್ತಾರೆ. ಕಲಬುರಗಿಯಲ್ಲಿ ಸದ್ಯ ನಲವತ್ತು ಡಿಗ್ರಿ ಬಿಸಿಲಿದ್ದು, ಶೋಭಾಯಾತ್ರೆಯಲ್ಲಿ ಭಾಗಿಯಾದವರು ಬಾಯಿರಿಕೆಯಿಂದ ಬಳಲಬಾರದು ಎಂದು ತಿಳಿದು ತಂಪು ಪಾನೀಯಗಳನ್ನು ವಿತರಿಸುತ್ತಾರೆ.

9 / 10
ನಗರದ ಖಾದ್ರಿ ಚೌಕ್​ನಲ್ಲಿ ಪ್ರತಿವರ್ಷದಂತೆ ಈ ಬಾರಿ ಕೂಡ ಅನೇಕ ಮುಸ್ಲಿಂ ಬಾಂಧವರು ತಂಪು ಪಾನೀಯ ವಿತರಿಸಿದ್ರು. ಕಲಬುರಗಿ ನಗರ ಶರಣಬಸವೇಶ್ವರರು ಮತ್ತು ಖಾಜಾ ಬಂದೇನವಾಜ​ರು ಇದ್ದ ಪುಣ್ಯ ಭೂಮಿ. ಇಲ್ಲಿ ಹಿಂದೂ ಮುಸ್ಲಿಂರು ಭಾವೈಕ್ಯತೆಯಿಂದ ಇರಬೇಕು. ನಾವೆಲ್ಲ ಕರ್ನಾಟಕ ಮಾತೆಯ ಮಕ್ಕಳು ಎನ್ನುವ ಸಂದೇಶವನ್ನು ಮುಸ್ಲಿಂ ಬಾಂಧವರು ಸಾರುವ ಕೆಲಸ ಮಾಡಿದ್ರು.

10 / 10
ಸರಿಸುಮಾರು ಏಳು ಗಂಟೆಗಳ ಕಾಲ ನಗರದಲ್ಲಿ ರಾಮನವಮಿ ಅದ್ದೂರಿ ಶೋಭಾಯಾತ್ರೆ ನಡೆಯಿತು. ಸರ್ವಧರ್ಮಗಳ ಜನರು ಎಲ್ಲಾ ಜಾತಿಯ ಜನರು ಶೋಭಾಯಾತ್ರೆಯಲ್ಲಿ ಭಾಗಿಯಾಗಿ ಜೈ ಶ್ರೀರಾಮ ಎನ್ನುವ ಮೂಲಕ ರಾಮಜಪ ಮಾಡಿ ಭಾವೈಕ್ಯತೆ ಸಾರುವ ಕೆಲಸ ಮಾಡಿದ್ದು ವಿಶೇಷವಾಗಿತ್ತು.