
ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದ ಜನರು ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ವೀರಭದ್ರೇಶ್ವರ ದೇಗುಲ ಕಟ್ಟಿದ್ದಾರೆ. ದೇವಸ್ಥಾನದಲ್ಲಿ ವೀರಭದ್ರೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಕಾರ್ಯ ಸಡಗರದಿಂದ ನಡೆಯಿತು.

ಪ್ರಾಣಪ್ರತಿಷ್ಠಾಪನೆಗೂ ಮುನ್ನ ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ಶ್ರೀಶೈಲ ಶ್ರೀಗಳು ದೇವರ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ನರಗುಂದ ಶಾಸಕ ಸಿ.ಸಿ.ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

ಪುರುವಂತರು ಬಾಯಿಗೆ ಸಲಾಕೆಯಿಂದ ಚುಚ್ಚಿಕೊಂಡರು.ದವಡೆಯಿಂದ ದಾರ ಹಾಕಿ ಎಳೆಯುವ ದೃಶ್ಯ ಮೈ ಜುಮ್ಮೆನಿಸುವಂತಿತ್ತು.

ಇದೇ ದೇಗುಲದಲ್ಲಿ ವೀರಭದ್ರೇಶ್ವರ, ಭದ್ರಕಾಳಿ, ಸುಬ್ರಹ್ಮಣ್ಯ ದೇವರ ಪ್ರಾಣ ಪ್ರತಿಷ್ಠಾಪನೆ ಕೂಡ ಮಾಡಲಾಯಿತು.ಈ ವೇಳೆ ಹರಕೆ ಹೊತ್ತ ಭಕ್ತರು ಕೈಗೆ, ಕೆನ್ನೆಗೆ ಮತ್ತು ನಾಲಿಗೆಗೆ ಶಸ್ತ್ರ ಚುಚ್ಕಿಕೊಂಡು ಭಕ್ತಿ ಪರಾಕಾಷ್ಠೆ ಮೆರೆದರು.

ಆಧುನಿಕ ಕಾಲದಲ್ಲೂ ಇಂತಹ ಆಚರಣೆಗಳು ಅಲ್ಲಲ್ಲಿ ನಡೆಯುತ್ತಿವೆ. ಶಸ್ತ್ರ ಪವಾಡ ಎನ್ನುವ ಭಕ್ತಿಯ ಪರಾಕಾಷ್ಠೆಗೆ ಜನರು ಅಬ್ಬಾ ಅಂತ ಉದ್ಘರಿಸಿದರು. ಇದರಿಂದ ಏನೂ ಅಪಾಯ ಆಗಲ್ಲ ಎಂಬ ಬಲವಾದ ನಂಬಿಕೆ ಭಕ್ತರದ್ದು.