ಗದಗ: ಸರ್ಕಾರಿ ರತಿ-ಕಾಮಣ್ಣ ಮೂರ್ತಿಗೆ 29 ಕೆಜಿ ಚಿನ್ನದಿಂದ ಶೃಂಗಾರ

Updated By: ವಿವೇಕ ಬಿರಾದಾರ

Updated on: Mar 18, 2025 | 9:41 AM

ಅದು ಸರ್ಕಾರಿ ರತಿ-ಕಾಮಣ್ಣ ಅಂತಲೇ ಫೇಮಸ್. ಯುವಕ, ಯವತಿಯರಿಗೆ ಕಂಕಣ ಭಾಗ್ಯ, ಮಹಿಳೆಯರಿಗೆ ಸಂತಾನಭಾಗ್ಯ, ಬೇಡಿದವರಿಗೆ ಬಯಸಿದ ಭಾಗ್ಯ ಇಡೇರಿಸುವ ಸರ್ಕಾರಿ ರತಿ-ಕಾಮಣ್ಣ. ಅರೇ ಇದೇನಪ್ಪ ಸರ್ಕಾರ ಹೊಸ ಭಾಗ್ಯಗಳೇನಾದರೂ ಘೋಷಿಸಿದೆ ಅಂದುಕೊಳ್ಳಬೇಡಿ. ಇದು ಸರ್ಕಾರದ ಭಾಗ್ಯವಲ್ಲ.‌‌‌ ನಂಬಿದ ಭಕ್ತರಿಗೆ ರತಿ-ಕಾಮಣ್ಣ ನೀಡುವ ಭಾಗ್ಯಗಳು. ಈ ರತಿ-ಕಾಮಣ್ಣಗೆ ಕೆಜಿಗಟ್ಟಲೇ ಬಂಗಾರ ಹಾಕಿ ಶೃಂಗಾರ ಮಾಡ್ತಾರೆ. ಇಲ್ಲಿದೆ ಫೋಟೋಸ್​.

1 / 6
ಗದಗ ನಗರದ ಕಿಲ್ಲಾ ಓಣಿಯಲ್ಲಿನ ಐತಿಹಾಸಿಕ ತ್ರಿಕೂಟೇಶ್ವರ ದೇವಾಲಯದ ಉತ್ತರ ಮಹಾದ್ವಾರದಲ್ಲಿ ರತಿ-ಕಾಮಣ್ಣರ ಹಬ್ಬ ಸಡಗರದಿಂದ ಆಚರಿಸ್ತಾರೆ. ಹೋಳಿ ಹುಣ್ಣಿಮೆ ಸಮಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ಕಾಮಣ್ಣ-ರತಿಯರ ಶೃಂಗಾರ ನೋಡುವುದೆ ಕಣ್ಣಿಗೆ ಹಬ್ಬ. ಇದು ರಾಜ್ಯದಲ್ಲೇ ಪ್ರಸಿದ್ದಿ ಹೊಂದಿದೆ.

2 / 6
ಸುಮಾರು 159 ವರ್ಷಗಳಿಂದ ಇಲ್ಲಿ ಕಾಮರತಿಯರ ಉತ್ಸವ ಮೂರ್ತಿಗಳನ್ನು ಹೋಳಿ ಹುಣ್ಣಿಮೆಯ ದಿನ ಪ್ರತಿಷ್ಠಾಪಿಸಲಾಗುತ್ತಿದೆ. ರಂಗಪಂಚಮಿ ಹಿಂದಿನ ದಿನ ಕಾಮ-ರತಿಯರಲ್ಲಿ ಭಕ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಪ್ರಾರ್ಥಿಸುತ್ತಾರೆ. ಯುವತಿಯರು ಕಾಮನ ಕೈಗೆ ಅರಿಷಿಣದ ತುಂಡಿನಿಂದ ಕಂಕಣಕಟ್ಟಿ ಕಂಕಣ ಭಾಗ್ಯ ಕರುಣಿಸೆಂದು ಬೇಡಿಕೊಂಡರೇ, ಸಂತಾನ ಭಾಗ್ಯಕ್ಕಾಗಿ ಮಹಿಳೆಯರು ರತಿಗೆ ಉಡಿ ತುಂಬಿ ಚಿನ್ನಾಭರಣಗಳಿಂದ ಶೃಂಗರಿಸಿ ಬೇಡಿಕೊಳ್ಳುತ್ತಾರೆ.

3 / 6
ಭಕ್ತರು ಯಾವುದೇ ಭಯವಿಲ್ಲದ ರಂಗ ಪಂಚಮಿಯ ಹಿಂದಿನ ದಿನ ಮನೆಯಲ್ಲಿದ್ದ ಚಿನ್ನಾಭರಣವನ್ನು ರತಿ-ಕಾಮಣ್ಣನ ಮೈಮೇಲೆ ಹಾಕುತ್ತಾರೆ. ಅಂದಾಜು 25 ಕೆಜಿಯಷ್ಟು ಬಂಗಾರದ ಆಭರಣಗಳನ್ನು ಹಾಕಿ  ಶೃಂಗರಿಸಲಾಗುತ್ತದೆ. ಕಾಮನ ಮೈಮೇಲೆಯೂ ಪುರುಷರು ಧರಿಸುವ ಕೆಲವು ಆಭರಣಗಳನ್ನು ಹಾಕಿ ಶೃಂಗಾರ ಮಾಡಲಾಗುತ್ತದೆ.

4 / 6
ಈ ಬಂಗಾರದ ಆಭರಣಗಳನ್ನು ಭಕ್ತರು ಸ್ವಯಂ ಪ್ರೇರಣೆಯಿಂದಲೇ ತಂದು ಕೊಡುತ್ತಾರೆ. ಆಭರಣಗಳ ಮೇಲೆ ಅವರ ಹೆಸರಿನ ಚೀಟಿ ಬರೆದು ರತಿಯ ಮೈಮೇಲೆ ಹಾಕಲಾಗುತ್ತದೆ. ರಂಗ ಪಂಚಮಿಯ ದಿನ ರಾತ್ರಿ ಉತ್ಸವ ಮೂರ್ತಿಗಳ ಮೆರವಣಿಗೆ ಮುಗಿದ ಮೇಲೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.

5 / 6
ಈ ಪ್ರದೇಶದಲ್ಲಿ ಈ ಹಿಂದೆ ಸರಕಾರಿ ಕಚೇರಿಗಳ ಇದ್ದುದರಿಂದ ಪೊಲೀಸ್ ಹಾಗೂ ಕಂದಾಯ ಇಲಾಖೆ ನೌಕರರು ಕೂಡ ಈ ಉತ್ಸವದಲ್ಲಿ ಭಕ್ತಿ, ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಈ ಕಾರಣದಿಂದ ಇದು ಸರ್ಕಾರಿ ಕಾಮಣ್ಣ ಅಂತಲೇ ಫೇಮಸ್ ಆಗಿದೆ. ಕಾಮ-ರತಿಯರ ಸಂಭ್ರಮ ನೋಡಲು ಗದಗ ನಗರ ಮಾತ್ರವಲ್ಲ ಧಾರವಾಡ, ಹಾವೇರಿ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಯಿಂದ ಜನರು ಆಗಮಿಸುತ್ತಾರೆ. ಕಾಮ-ರತಿಯರ ಸಂಭ್ರಮ ನೋಡಿ ಖುಷಿ ಪಡುತ್ತಾರೆ.

6 / 6
ಗದಗ ನಗರಕ್ಕೆ ಇನ್ನೂ ರೈಲ್ವೆ ಮಾರ್ಗ ನಿರ್ಮಾಣ ವಾಗದಿದ್ದ ಕಾಲದಲ್ಲೇ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲಾವಿದರಿಂದ ಈ ಉತ್ಸವ ಮೂರ್ತಿಗಳನ್ನು ಮಾಡಿಸಿಕೊಂಡು ತರಲಾಗಿದೆ. ಒಟ್ಟಿನಲ್ಲಿ ಗದಗ ನಗರದ ಕಿಲ್ಲಾ ಓಣಿಯ ರತಿ-ಕಾಮಣ್ಣರು ಅಪರೂಪದಲ್ಲೆ ಬಲು ಅಪರೂಪ. ವಿಶಿಷ್ಠ ಆಚರಣೆ ಮೂಲಕ ನೂರಾರು ವರ್ಷದ ಸಂಪ್ರದಾಯ ಮುಂದುವರೆದಿದ್ದು ಮಾತ್ರ ವಿಶೇಷ.

Published On - 9:41 am, Tue, 18 March 25