- Kannada News Photo gallery Honor 90 A 200 mega pixel camera smartphone could make its debut in India in September
Honor 90: ಭಾರತಕ್ಕೆ ಬರುತ್ತಿದೆ 200MP ಕ್ಯಾಮೆರಾದ ಮತ್ತೊಂದು ಸ್ಮಾರ್ಟ್‌ಫೋನ್: ಯಾವುದು?, ಬೆಲೆ ಎಷ್ಟು?
ಅಪರೂಪಕ್ಕೆ ಆಕರ್ಷಕ ಮೊಬೈಲ್ಗಳನ್ನು ಪರಿಚಯಿಸುವ ಪ್ರಸಿದ್ಧ ಹಾನರ್ ಕಂಪನಿ ಕ್ಯಾಮೆರಾ ಪ್ರಿಯರಿಗಾಗಿ 200 ಮೆಗಾಪಿಕ್ಸೆಲ್ನ ಹೊಸ ಹಾನರ್ 90 ಸ್ಮಾರ್ಟ್‌ಫೋನ್ ಅನಾವರಣ ಮಾಡಲು ಸಜ್ಜಾಗಿದೆ. ಸೆಪ್ಟೆಂಬರ್ನಲ್ಲಿ ಈ ಫೋನ್ ಭಾರತದಲ್ಲಿ ಅನಾವರಣಗೊಳ್ಳಲಿದೆ.
Updated on: Jul 27, 2023 | 4:29 PM

ಹಾನರ್ 90 ಈಗಾಗಲೇ ವಿದೇಶದಲ್ಲಿ ಬಿಡುಗಡೆಗೊಂಡಿದ್ದರೂ ಇದು ಭಾರತೀಯ ರೂಪಾಂತರಕ್ಕೆ ಕೆಲವು ಕಸ್ಟಮೈಸೇಶನ್‌ಗಳನ್ನು ನಿರೀಕ್ಷಿಸಬಹುದು. ಮುಖ್ಯವಾಗಿ ಇವುಗಳು ಸುಧಾರಿತ ಕ್ಯಾಮರಾ ತಂತ್ರಜ್ಞಾನದಿಂದ ಕೂಡಿವೆಯಂತೆ. ಜೊತೆಗೆ ಅಮೊಲೊಡ್, ಕ್ವಾಡ್-ಕರ್ವ್, ಫ್ಲೋಟಿಂಗ್ ಡಿಸ್ ಪ್ಲೇ ಮೂಲಕ ಬರಲಿದೆ. ವದಂತಿಗಳ ಪ್ರಕಾರ, ಹಾನರ್ 90 ಬೆಲೆ ಭಾರತದಲ್ಲಿ ಸುಮಾರು 40,000 ರೂ. ಎನ್ನಲಾಗಿದೆ.

ಇತ್ತೀಚಿಗೆ ರಿಯಲ್ ಮಿ ಕಂಪನಿಯಿಂದ ಹೊರ ನಡೆದಿರುವ ರಿಯಲ್ ಮಿ ಮಾಜಿ ಉಪಾಧ್ಯಕ್ಷ ಮಾಧವ್ ಶೇತ್ ಹಾನರ್ ಜೊತೆ ಕೈಜೋಡಿಸಿದ್ದು, ಭಾರತದಲ್ಲಿ ಹಾನರ್ನ ಕಾರ್ಯತಂತ್ರವನ್ನು ಬಹಿರಂಗ ಪಡಿಸಿದ್ದಾರೆ. ಜೊತೆಗೆ ಹಾನರ್ ಭಾರತದಲ್ಲಿ 150 ಸೇವಾ ಕೇಂದ್ರಗಳ ಬೃಹತ್ ಜಾಲವನ್ನು ಪ್ರಾರಂಭಿಸಲು ತಯಾರಿಸಿ ನಡೆಸಿದೆ ಎಂದು ಹೇಳಿದ್ದಾರೆ.

ಸುಮಾರು ಮೂರು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಿಂದ ದೂರ ಉಳಿದಿದ್ದ ಪ್ರಸಿದ್ಧ ಹಾನರ್ ಕಂಪನಿ ಇದೀಗ ಭರ್ಜರಿ ಆಗಿ ಕಮ್ಬ್ಯಾಕ್ ಮಾಡಲು ತಯಾರಾಗುತ್ತಿದೆ. ತನ್ನ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಹಾನರ್ 90 ಸರಣಿಯ ಸ್ಮಾರ್ಟ್‌ಫೋನ್ ಮೂಲಕ ಭಾರತಕ್ಕೆ ಬರುವುದು ಖಚಿತವಾಗಿದೆ.

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಇಂಡಿಯಾ ತನ್ನ ಸೈಟ್‌ನಲ್ಲಿ ಹಾನರ್ 90 ಪುಟವನ್ನು ಲೈವ್ ಮಾಡಿದೆ. ಹಾನರ್ 90 ಬಿಡುಗಡೆ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಪುಟವು ಬಹಿರಂಗಪಡಿಸದಿದ್ದರೂ, ಈ ಸ್ಮಾರ್ಟ್‌ಫೋನ್ ಅನ್ನು ಇ-ಕಾಮರ್ಸ್ ಸೈಟ್‌ನಲ್ಲಿ ಮಾರಾಟ ಮಾಡಲಾಗುವುದು ಎಂಬುದು ಖಚಿತವಾಗಿ ತಿಳಿದುಬಂದಿದೆ.

ಹಾನರ್ 90 ಫೋನಿನಲ್ಲಿ ಪ್ರಾಥಮಿಕ ಕ್ಯಾಮೆರಾ ಬರೋಬ್ಬರಿ 200-ಮೆಗಾಪಿಕ್ಸೆಲ್ ಇರಲಿದೆ. ಜೊತೆಗೆ 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ನೊಂದಿಗೆ ಜೋಡಿಸಲಾಗಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಹಾನರ್ 90 ಬಳಿಕ ಕಂಪನಿಯು ಹಾನರ್ X ಸರಣಿಯನ್ನು ಬಿಡುಗಡೆ ಮಾಡಲಿದೆ. ಇದು ಮಧ್ಯ-ಶ್ರೇಣಿಯವರಿಗೆ ಹೇಳಿ ಮಾಡಿಸಿದ ಫೋನ್ ಆಗಿದೆ. ಜೊತೆಗೆ ಹೈ-ಎಂಡ್ ಮಿಡ್-ರೇಂಜರ್‌ಗಳ ಕಂಪನಿಯ ಫೋಲ್ಡಬಲ್ ಫೋನ್‌ಗಳನ್ನು ಒಳಗೊಂಡಿರುವ ಹಾನರ್ ಮ್ಯಾಜಿಕ್ ಸರಣಿಯನ್ನು ಸಹ ನಿರೀಕ್ಷಿಸಬಹುದು. TWS, ಟ್ಯಾಬ್ಲೆಟ್‌ಗಳು ಸೇರಿದಂತೆ ಪೂರಕ ಉತ್ಪನ್ನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆಯಂತೆ.

ಭಾರತದಲ್ಲಿನ ಹಾನರ್ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 13 ನೊಂದಿಗೆ ಚಾಲಿತವಾಗುತ್ತವೆ ಮತ್ತು ಗೂಗಲ್ ಮ್ಯಾಪ್ಸ್, ಡ್ರೈವ್, ಮೀಟ್ ಸೇರಿದಂತೆ ಗೂಗಲ್ ಅಪ್ಲಿಕೇಶನ್‌ಗಳನ್ನು ಹೊಂದಿರುತ್ತದೆ ಎಂದು ಮಾಧವ್ ಹೇಳಿದ್ದಾರೆ. ಈ ಮೂಲಕ ಹಾನರ್ ಎರಡು ವರ್ಷಗಳ ಆಂಡ್ರಾಯ್ಡ್ ನವೀಕರಣಗಳನ್ನು ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಖಾತ್ರಿಪಡಿಸಿದೆ.



















