ಅನ್ಲಿಸ್ಟೆಡ್ ಷೇರುಗಳನ್ನು ಖರೀದಿಸುವುದು
ಕಂಪೆನಿಯು ತನ್ನ IPO ಗಾಗಿ ಫೈಲ್ ಮಾಡಿದಾಗ, ಅಸ್ತಿತ್ವದಲ್ಲಿರುವ ಹೂಡಿಕೆದಾರರು ಮತ್ತು ಉದ್ಯೋಗಿಗಳು ಈಗಾಗಲೇ ತಾವು ಹೊಂದಿರುವ ಷೇರುಗಳ ಬೆಲೆ ಖಾಸಗಿ ಮಾರುಕಟ್ಟೆಯಲ್ಲಿ ಏರುತ್ತಿರುವುದನ್ನು ನೋಡುತ್ತಾರೆ. ಉದಾಹರಣೆಗೆ, ಪೇಟಿಎಂನ ಮಾತೃ ಕಂಪೆನಿಯಾದ ಒನ್ 97 ಕಮ್ಯುನಿಕೇಷನ್ಸ್. ಅದರ ಷೇರಿನ ಬೆಲೆಯು ರೂ. 3,000ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಿದೆ. ಒಂದು ವರ್ಷದ ಹಿಂದೆ, ಇದು ಒಂದು ಷೇರಿಗೆ 1,500 ರೂಪಾಯಿಗೆ ಕೋಟ್ ಆಗುತ್ತಿತ್ತು. ಷೇರು ಮಾರುಕಟ್ಟೆಯಲ್ಲಿನ ಉತ್ಸಾಹ ಮತ್ತು ಮುಂದಿನ ದಿನಗಳಲ್ಲಿ ಸಂಭವನೀಯ ಲಿಸ್ಟಿಂಗ್ ಕಾರಣಕ್ಕೆ ಕಂಪೆನಿಯ ಷೇರುಗಳಿಗೆ ಬೇಡಿಕೆಯನ್ನು ಹುಟ್ಟುಹಾಕಿದೆ. ಕಂಪೆನಿಯ ಐಪಿಒ ಬಿಡುಗಡೆ ಬಗ್ಗೆ ವರದಿಗಳು ಬರಲಾರಂಭಿಸಿದ ಮೇಲೆ ಕೇರ್ ಹೆಲ್ತ್ ಇನ್ಷೂರೆನ್ಸ್ ಷೇರುಗಳ ಬೆಲೆ ರೂ.230ಕ್ಕಿಂತ ಹೆಚ್ಚು ಕೋಟಿಂಗ್ ಆರಂಭಿಸಿತು.